ಹೊಸ Redmi Note 7 Pro vs Samsung Galaxy A50 vs Oppo F11 ಸ್ಮಾರ್ಟ್ಫೋನ್ಗಳ ಹೋಲಿಕೆಗಳು
ಈ ಮೂರು ಅದ್ದೂರಿ ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಯಾವುದಕ್ಕಿಂತ ಬೆಸ್ಟ್ ಎಂದು ನೀವೇ ಇಲ್ಲಿ ಹೋಲಿಸಿರಿ.
ಈ ವರ್ಷ 2019 ರ ಮೊದಲ ತ್ರೈಮಾಸಿಕದಲ್ಲಿ ಮಧ್ಯಮ ಶೇಣಿಯಲ್ಲಿನ ಸ್ಮಾರ್ಟ್ಫೋನ್ಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸೇರ್ಪಡೆಗೊಳಿಸಿವೆ. ಇದರಲ್ಲಿ ಕ್ಯಾಮೆರಾ ಅತ್ಯಂತ ಹೆಚ್ಚಿನ ರೆಸಲ್ಯೂಶನ್ಗಳು, ಪ್ರೀಮಿಯಂ ಬಿಲ್ಡ್ ಗುಣಮಟ್ಟ ಮತ್ತು ಚಿಪ್ಸೆಟ್ಗಳೊಂದಿಗೆ ಈ ಸ್ಮಾರ್ಟ್ಫೋನ್ಗಳ ಟ್ರೇಡ್ಮಾರ್ಕ್ಗಳಾಗಿ ಮಾರ್ಪಟ್ಟಿವೆ. ಇಲ್ಲಿ ಮುಖ್ಯವಾಗಿ Redmi Note 7 Pro, Samsung Galaxy A50 ಮತ್ತು Oppo F11 ಇವುಗಳಲ್ಲಿ ಮೂರು ಸ್ಮಾರ್ಟ್ಫೋನ್ಗಳ ಹೋಲಿಕೆಯನ್ನು ನೋಡೋಣ. ಇವೇಲ್ಲ ಸ್ವಲ್ಪಮಟ್ಟಿಗೆ ಅದೇ ಬೆಲೆಯ ಬ್ರಾಕೆಟ್ಗೆ ಸೇರದಿದ್ದರೂ ಈ ಮೂರು ಫೋನ್ಗಳ ಸ್ಪೆಸಿಫಿಕೇಷನ್ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿದೆ. ಹಾಗಾಗಿ ನಿಮಗೆ ಸರಿಯಾದ ಬೆಲೆಗೆ ತಕ್ಕಂತೆ ಬರುವ ಯೋಗ್ಯವಾದ ಫೋನ್ ಯಾವುದೆಂದು ನೋಡೋಣ.
ಇವುಗಳ ಡಿಸೈನ್.
ಮೊದಲಿಗೆ Redmi Note 7 Pro ಹೊಸದಾಗಿ ಎಲ್ಲಾ ಗ್ಲಾಸ್ ವಿನ್ಯಾಸದ ತತ್ತ್ವವನ್ನು ಅನುಸರಿಸುತ್ತದೆ. ಈ ಸ್ಮಾರ್ಟ್ಫೋನ್ಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ನೀಡಲಾಗಿದ್ದು ಎಡ್ಜ್ ಟು ಎಡ್ಜ್ ವಿಸ್ತರಿಸಿದೆ. ಅಲ್ಲದೆ ಇದರ ಹಿಂಬದಿಯಲ್ಲಿ ಗ್ಲಾಸ್ ಕೆಳಗೆ ಡ್ಯೂಯಲ್ ಟೋನ್ ಗ್ರೇಡಿಯಂಟ್ ಆಗಿದೆ. ಇದನ್ನು ಹೊರತುಪಡಿಸಿ Samsung Galaxy A50 ಮತ್ತು Oppo F11 ಸ್ಮಾರ್ಟ್ಫೋನ್ಗಳು ಪ್ಲ್ಯಾಸ್ಟಿಕ್ ಬ್ಯಾಕ್ ಪ್ಯಾನಲ್ ಹೊಂದಿವೆ. ಅಲ್ಲದೆ Galaxy A50 ಪ್ಲ್ಯಾಸ್ಟಿಕ್ ಶೈನಿ ಹೊಳೆಯುವ ಗ್ರೇಡಿಯಂಟ್ ಲುಕ್ ಹೊಂದಿದೆ. ಇದರ ಫ್ರಂಟಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ನೀಡಿದ್ದು Oppo F11 ಪ್ರೊಟೆಕ್ಷನ್ ಕವರ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇವುಗಳ ಡಿಸ್ಪ್ಲೇ.
ಈ ಸ್ಮಾರ್ಟ್ಫೋನ್ಗಳ ಡಿಸ್ಪ್ಲ್ಯಾ ಮಾಹಿತಿ ಪಡೆಯಬೇಕೆಂದರೆ ಇಲ್ಲಿ ಮೊದಲಿಗೆ Oppo F11 ಬರುತ್ತದೆ. ಏಕೆಂದರೆ 6.53 ಇಂಚಿನ LTPS IPS LCD ಡಿಸ್ಪ್ಲೇಯೊಂದಿಗೆ 1080 x 2340 ಪಿಕ್ಸೆಲ್ ರೆಸುಲ್ಯೂಷನ್ ಹೊಂದಿದೆ. ಇದು 19:9 ಅಸ್ಪೆಟ್ ರೇಷುವಿನೊಂದಿಗೆ 395ppi ಡಿನ್ಸಿಟಿಯನ್ನು ಹೊಂದಿದೆ. ಇದರ ನಂತರ Galaxy A50 ಫೋನ್ 6.4 ಇಂಚಿನ Super AMOLED ಡಿಸ್ಪ್ಲೇಯೊಂದಿಗೆ 1080 x 2340 ಪಿಕ್ಸೆಲ್ ರೆಸುಲ್ಯೂಷನ್ ಹೊಂದಿದೆ. ಇದು ಸಹ 19:9 ಅಸ್ಪೆಟ್ ರೇಷುವಿನೊಂದಿಗೆ 403ppi ಡಿನ್ಸಿಟಿಯನ್ನು ಹೊಂದಿದೆ. ಕೊನೆಯದಾಗಿ Redmi Note 7 Pro ಫೋನ್ 6.3 ಇಂಚಿನ IPS LCD ಡಿಸ್ಪ್ಲೇಯೊಂದಿಗೆ 1080 x 2340 ಪಿಕ್ಸೆಲ್ ರೆಸುಲ್ಯೂಷನ್ ಹೊಂದಿದೆ. ಇದು ಸಹ 19:9 ಅಸ್ಪೆಟ್ ರೇಷುವಿನೊಂದಿಗೆ 409ppi ಡಿನ್ಸಿಟಿಯನ್ನು ಹೊಂದಿದೆ.
ಇವುಗಳ ಹಾರ್ಡ್ವೇರ್ & ಸಾಫ್ಟ್ವೇರ್.
ಇಲ್ಲಿ Redmi Note 7 Pro ಕ್ವಾಲ್ಕಾಮ್ ಕಂಪನಿಯ ಇತ್ತೀಚಿನ ಮಿಡ್ ರೇಂಜ್ ಪ್ರೀಮಿಯಂ ಚಿಪ್ಸೆಟ್ ಅನ್ನು ಹೊಂದಿದೆ. ಅಂದ್ರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 11nm ಪ್ರಕ್ರಿಯೆಯ ಆಧಾರದ ಮೇಲೆ ಅಡ್ರಿನೊ 612 ಜಿಪಿಯು ಜೊತೆಗೂಡಿರುತ್ತದೆ. ಇದು ಆಂಡ್ರಾಯ್ಡ್ ಪೈ 9.0 ಜೋತೆಗೆ MIUI 10 ಕಸ್ಟಮ್ RAM ಮೇಲೆ ಚಾಲಿಸುತ್ತದೆ. Galaxy A50 ತನ್ನದೇಯಾದ Exynos 9610 ಆಕ್ಟಾ ಕೋರ್ ಚಿಪ್ಸೆಟ್ನಿಂದ 10mm ಪ್ರಕ್ರಿಯೆಯನ್ನು ಆಧರಿಸಿ Mali-G72 MP3 ಜಿಪಿಯು ಜೊತೆ ಜೋಡಿಸಲಾಗಿದೆ. ಸ್ಯಾಮ್ಸಂಗ್ ಒನ್ UI ಅನ್ನು ಚಾಲನೆಯಲ್ಲಿರುವ ಆಂಡ್ರಾಯ್ಡ್ ಪೈ 9 ಅನ್ನು ಇದು ರನ್ ಮಾಡುತ್ತದೆ. ಕೊನೆಯದಾಗಿ Oppo F11 ಸ್ಮಾರ್ಟ್ಫೋನ್ ColorOS 6 ಮತ್ತು ಮೀಡಿಯಾಟೆಕ್ ಹೆಲಿಯೋ P70 ಜೋತೆಗೆ ಇದು ಸಹ ಸ್ಯಾಮ್ಸಂಗ್ ನಂತೆ Mali-G72 MP3 ಜಿಪಿಯು ಜೊತೆ ಜೋಡಿಸಲಾಗಿದ್ದು ಆಂಡ್ರಾಯ್ಡ್ ಪೈ 9.0 ರನ್ ಮಾಡುತ್ತದೆ. ಈ ಮೂರು ಸ್ಮಾರ್ಟ್ಫೋನ್ಗಳು 4000mAh ಬ್ಯಾಟರಿಯನ್ನು ಹೊಂದಿವೆ.
ಇವುಗಳ ಕ್ಯಾಮೆರಾ.
ಇಲ್ಲಿ ಮುಖ್ಯವಾಗಿ Redmi Note 7 Pro ಮತ್ತು Oppo F11 ಸ್ಮಾರ್ಟ್ಫೋನ್ಗಳು 48MP ಮತ್ತು 5MP ಸೆನ್ಸರ್ಗಳನ್ನು ಹಿಂಭಾಗದಲ್ಲಿ ಒಳಗೊಂಡಿರುತ್ತವೆ. ಈ ಎರಡು ಸ್ಮಾರ್ಟ್ಫೋನ್ನಲ್ಲಿರುವ 48MP ಸೆನ್ಸರ್ಗಳು ಪಿಕ್ಸೆಲ್ ಬಿನ್ನಿಂಗ್ ಅಥವಾ ನಾಲ್ಕು ಪಿಕ್ಸೆಲ್ಗಳನ್ನು ಒಂದು ದೊಡ್ಡ ಪರಿಣಾಮ ಬೀರುವಂತಹ ಪಿಕ್ಸೆಲ್ ಅನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ Redmi Note 7 Pro ಸ್ನಾಪ್ಡ್ರಾಗನ್ 675 ಪ್ರೊಸೆಸರ್ಗೆ EIS ನೀಡಿರುವುದು ಗಮನಿಸಬವುದು. ಇವು 30fps ನಲ್ಲಿ 2160p ವೀಡಿಯೊಗಳನ್ನು ಚಿತ್ರೀಕರಣ ಮಾಡಲು ಸಮರ್ಥವಾಗಿದೆ. ಆದರೆ Oppo F11 ಕೇವಲ 30fps ನಲ್ಲಿ 1080p ವೀಡಿಯೊಗಳಿಗೆ ಮಾತ್ರ ಸೀಮಿತವಾಗಿದೆ. ನಂತರ Galaxy A50 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಲಂಬವಾಗಿ ಮೊದಲನೇಯದು 25MP, f/1.7 PDAF ಸೆನ್ಸರ್ ಎರಡನೇಯದು 8MP, f/2.2 ಅಲ್ಟ್ರಾ ವೈಡ್ ಮತ್ತು ಮೂರನೇಯದು 5 MP, f/2.2 ಡೆಪ್ತ್ ಸೆನ್ಸರ್ ಕಾನ್ಫಿಗರೇಶನ್ನಲ್ಲಿ ಬರುತ್ತದೆ. ಇವುಗಳ ಫ್ರಂಟಲ್ಲಿ Galaxy A50 ಫೋನ್ 25MP, f/2.0 ಸೆನ್ಸರ್ ಹೊಂದಿದ್ದು Oppo F11 ಸ್ಮಾರ್ಟ್ಫೋನ್ 16 MP, f/2.0 ಸೆನ್ಸರ್ ಮತ್ತು Redmi Note 7 Pro ಫೋನ್ 13MP, f/2.2 ಅನ್ನು ಒಳಗೊಂಡಿದೆ. ಈ ಮೂರು ಸ್ಮಾರ್ಟ್ಫೋನ್ಗಳು ಫೇಸ್ ಅನ್ಲಾಕ್ ಫೀಚರನ್ನು ಹೊಂದಿವೆ.
ಇವುಗಳ ಬೆಲೆ.
ಈ ಮೂರು ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ಮೂರು ಸ್ಮಾರ್ಟ್ಫೋನ್ಗಳು 6GB ಯ RAM ಮತ್ತು 128GB ಯ ಸ್ಟೋರೇಜ್ ವೇರಿಯಂಟ್ಗಳ ವರೆಗೆ ಲಭ್ಯವಿವೆ. ಇದರಲ್ಲಿ Redmi Note 7 Pro ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ನಲ್ಲಿ 4GB-64GB ರೂಪಾಂತರ ಕೇವಲ ₹13,999 ರೂಗಳಲ್ಲಿ ಲಭ್ಯವಾಗುತ್ತದೆ. ಇದೇ ಸಮಯದಲ್ಲಿ Samsung Galaxy A50 ಮತ್ತು Oppo F11 ಸ್ಮಾರ್ಟ್ಫೋನ್ಗಳು ₹19,990 ರೂಗಳಲ್ಲಿ ಲಭ್ಯವಾಗುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile