Redmi Note 13 5G vs POCO X5 Pro 5G: ಭಾರತದಲ್ಲಿ ಬಹು ನಿರೀಕ್ಷೆಗಳ ನಂತರ ರೆಡ್ಮಿ ಕಂಪನಿ ತಮ್ಮ Redmi Note 13 5G ಸ್ಮಾರ್ಟ್‌ಫೋನ್ ಅನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದೆ. ಆದರೆ ಇದೆ ಬೆಲೆಗೆ ಈಗಾಗಲೇ ಭಾರತದಲ್ಲಿ ಪೊಕೊ ಸಹ ತನ್ನ ಲೇಟೆಸ್ಟ್ ಸ್ಮಾರ್ಟ್‌ಫೋನ್ POCO X5 Pro 5G ಅನ್ನು ಕೈಗೆಟುವ ಬೆಲೆಗೆ ನೀಡುತ್ತಿದೆ. ಈ ಲೇಖನದಲ್ಲಿ ಇವೆರಡು ಸ್ಮಾರ್ಟ್‌ಫೋನ್‌ಗಳ ಡಿಸ್ಪ್ಲೇ, ಕ್ಯಾಮೆರಾ, ಹಾರ್ಡ್ವೇರ್, ಸೆನ್ಸರ್ ಮತ್ತು ಬ್ಯಾಟರಿಯೊಂದಿಗೆ ಬೆಲೆ ಮತ್ತು ಲಭ್ಯತೆ ಮಾಹಿತಿಯೊಂದಿಗೆ ಒಂದಕ್ಕೊಂದು ಹೋಲಿಕೆ ಮಾಡಿ ಫೀಚರ್ ವಿಶೇಷಣಗಳ ಆಧಾರದ ಮೇಲೆ ನೀವು ನೀಡುವ ಕಾಸಿಗೆ ಯಾವುದು ಬೆಸ್ಟ್ ನೀವೇ ನೋಡಿ.
Also Read: ಉಚಿತ OTT ಮತ್ತು Unlimited ಕರೆಯೊಂದಿಗೆ ಪ್ರತಿದಿನ 5G ಡೇಟಾ ನೀಡುವ ಬೆಸ್ಟ್ Airtel ಪ್ಲಾನ್‌ಗಳು
ಮೊದಲಿಗೆ ಇವೆರಡು ಸ್ಮಾರ್ಟ್‌ಫೋನ್‌ಗಳ ಡಿಸ್ಪ್ಲೇ ಮಾಹಿತಿಯನ್ನು ನೋಡುವುದಾದರೆ 6.67 ಇಂಚಿನ AMOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್‌ನೊಂದಿಗೆ 1080 x 2400 ಪಿಕ್ಸೆಲ್ ರೆಸುಲ್ಯೂಷನ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ Corning Gorilla Glass 5 ಅನ್ನು ನೀಡಲಾಗಿದೆ. ಡಿಸ್ಪ್ಲೇಯ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಇದರಲ್ಲಿ 395 ಪಿಪಿಐ ಪಿಕ್ಸೆಲ್ ಡೆನ್ಸಿಟಿಯನ್ನು ಸಹ ಈ ಸ್ಮಾರ್ಟ್‌ಫೋನ್‌ಗಳು ಹೊಂದಿವೆ. ಈ ಮೂಲಕ ಡಿಸ್ಪ್ಲೇಯಲ್ಲಿ ಎರಡು ಫೋನ್ಗಳಲ್ಲಿ ಅಷ್ಟಾಗಿ ಯಾವುದೇ ವ್ಯತ್ಯಾಸಗಳನ್ನು ಕಾಣುವುದು ಕಷ್ಟ.
ಕ್ಯಾಮೆರಾ ವಿಭಾಗದಲ್ಲೂ ಸಹ ಈ ಎರಡು ಸ್ಮಾರ್ಟ್‌ಫೋನ್‌ಗಳ ಒಂದೇ ಮಾದರಿಯ ಲೆನ್ಸ್ ಹೊಂದಿದ್ದು 108MP ಪ್ರೈಮರಿ ವೈಡ್ ಕ್ಯಾಮೆರಾವನ್ನು f/1.8 ಅಪರ್ಚರ್ನೊಂದಿಗೆ ಹೊಂದಿವೆ. ಎರಡನೇಯದು 8MP ಅಲ್ಟ್ರಾ ವೈಡ್ ಸೆನ್ಸರ್ f/2.2 ಅಪರ್ಚರ್ನೊಂದಿಗೆ ಬಂದ್ರೆ ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ f/2.4 ಅಪರ್ಚರ್ನೊಂದಿಗೆ ಒಳಗೊಂಡಿವೆ. ಅಲ್ಲದೆ ಎರಡು ಸ್ಮಾರ್ಟ್‌ಫೋನ್‌ಗಳು 16MP ವೈಡ್ f/2.4 ಅಪರ್ಚರ್ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.
ಸ್ಮಾರ್ಟ್ಫೋನ್ಗಳ ಹಾರ್ಡ್ವೇರ್ ಬಗ್ಗೆ ಮಾತನಾಡುವುದಾದ್ರೆ ಮೊದಲಿಗೆ Redmi Note 13 5G ಸ್ಮಾರ್ಟ್ಫೋನ್ Mediatek Dimensity 6080 ಪ್ರೊಸೆಸರ್ನೊಂದಿಗೆ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಆರಂಭವಾಗುವ ಈ ಫೋನ್ ಆಂಡ್ರಾಯ್ಡ್ 13 ಮತ್ತು MIUI 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದರ ಕ್ರಮವಾಗಿ POCO X5 Pro 5G ಸ್ಮಾರ್ಟ್ಫೋನ್ Qualcomm Snapdragon 778G 5G ಪ್ರೊಸೆಸರ್ನೊಂದಿಗೆ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಆರಂಭವಾಗುವ ಈ ಫೋನ್ ಸಹ ಆಂಡ್ರಾಯ್ಡ್ 13 ಮತ್ತು MIUI 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.
ಇವೆರಡು ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ ಮೊದಲಿಗೆ Redmi Note 13 5G ಸ್ಮಾರ್ಟ್ಫೋನ್ 5000mAh ಬ್ಯಾಟರಿ 33W ಫಾಸ್ಟ್ ಚಾರ್ಜಿಂಗ್ ಜೊತೆಗೆ ಬರುತ್ತದೆ. POCO X5 Pro 5G ಸ್ಮಾರ್ಟ್ಫೋನ್ ಸಹ ಅದೇ 5000mAh ಬ್ಯಾಟರಿಯನ್ನು ಹೊಂದಿದ್ದು 67W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಎರಡು ಸ್ಮಾರ್ಟ್ಫೋನ್ ಟೈಪ್ C ಚಾರ್ಜ್ ಪೋರ್ಟ್ ಅನ್ನು ಸಪೋರ್ಟ್ ಮಾಡುತ್ತದಷ್ಟೇಯಲ್ಲದೆ OTG ಅನ್ನು ಸಹ ಪಡೆಯಬಹುದು.
ಕೊನೆಯದಾಗಿ ಈ ಸ್ಮಾರ್ಟ್ಫೋನ್ಗಳ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಮೊದಲಿಗೆ Redmi Note 13 5G ಸ್ಮಾರ್ಟ್ಫೋನ್ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಇದರ ಮೊದಲ ಮಾರಾಟ ಭಾರತದಲ್ಲಿ 10ನೇ ಜನವರಿ 2024 ರಂದು ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದು. ಇದರ ಕ್ರಮವಾಗಿ POCO X5 Pro 5G ಸ್ಮಾರ್ಟ್ಫೋನ್ ಕೇವಲ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿದ್ದು ಆಸಕ್ತರು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.
Redmi Note 13 5G POCO X5 Pro 5G
6GB+128GB > 16,999 ರೂಗಳು । 6GB+128GB > 16,999 ರೂಗಳು
8GB+256GB > 18,999 ರೂಗಳು । 8GB+256GB > 21,999 ರೂಗಳು
12GB+256GB > 20,999 ರೂಗಳು ।