Redmi K20 vs Realme X: ಅತಿ ಹೆಚ್ಚು ಚರ್ಚೆಗೆ ಗುರಿಯಾಗಿರುವ ಈ ಫೋನ್ಗಳಲ್ಲಿ ಯಾವುದು ಅತ್ಯುತ್ತಮವಾದ ಸ್ಮಾರ್ಟ್ಫೋನ್
Redmi K20 vs Realme X ಈ ಎರಡು ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಅತ್ಯುತ್ತಮ ಮತ್ತು ಇವುಗಳ ಸ್ಪೆಸಿಫಿಕೇಷನ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಈ Realme X ಸ್ಮಾರ್ಟ್ಫೋನ್ Redmi K20 ಸ್ಮಾರ್ಟ್ಫೋನಿನಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಅದ್ದೂರಿಯ ಫೀಚರ್ಗಳೊಂದಿಗೆ ಬರುತ್ತದೆ.
ಭಾರತದ ನಂಬರ್ 1 ಸ್ಮಾರ್ಟ್ಫೋನ್ ಮಾರಾಟಗಾರನದಾಗಿರುವ ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ Xiaomi ಇದೀಗ ತನ್ನ ಹೊಚ್ಚ ಹೊಸ Redmi K ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ನಂತರ ಈ ಸ್ಮಾರ್ಟ್ಫೋನ್ K20 ಸರಣಿಯ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಕಂಪನಿಯು ಮುಕ್ತ ಪತ್ರವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟಿದೆ. Xiaomi ಯಾವಾಗಲೂ ನೀಡುವ 'ಹಣಕ್ಕೆ ತಕ್ಕ ಮೌಲ್ಯ' ಮೇರೆಗೆ ಉತ್ತಮವಾದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇದರ ನಂತರ ಇದಕ್ಕೆ ಪ್ರತಿಸ್ಪರ್ಧಿಯಾಗಿ ಒಪ್ಪೋವಿನ ಸಬ್ ಬ್ರಾಂಡ್ ಆಗಿರುವ Realme ಸಹ ತನ್ನದೆಯಾದ ಭರ್ಜರಿಯ Realme X ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿದೆ. ಈ Realme X ಸ್ಮಾರ್ಟ್ಫೋನ್ Redmi K20 ಸ್ಮಾರ್ಟ್ಫೋನಿನಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಅದ್ದೂರಿಯ ಫೀಚರ್ಗಳೊಂದಿಗೆ ಬರುತ್ತದೆ. ಇಂದು ನಾವು ಈ ಎರಡು ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಅತ್ಯುತ್ತಮ ಮತ್ತು ಇವುಗಳ ಸ್ಪೆಸಿಫಿಕೇಷನ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.
Redmi K20 vs Realme X ಡಿಸ್ಪ್ಲೇ
ಮೊದಲಿಗೆ Redmi K20 ಸ್ಮಾರ್ಟ್ಫೋನ್ 6.39 ಇಂಚಿನ ಅಮೋಲೆಡ್ ಫುಲ್ HD+ (2340×1080 ಪಿಕ್ಸೆಲ್‌ಗಳು) ರೆಸೊಲ್ಯೂಷನ್ ಯಾವುದೇ ನಾಚ್ ಇಲ್ಲದ ಡಿಸ್ಪ್ಲೇಯನ್ನು 86.1% ಶೇಕಡಾ ಸ್ಕ್ರೀನ್ ಟು ಬಾಡಿ ಅಸ್ಪೆಟ್ ರೇಷುವಿನೊಂದಿಗೆ HDR ಬೆಂಬಲಿಸುತ್ತದೆ. ಅಲ್ಲದೆ DC ಡಿಮ್ಮಿಂಗ್ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಇದರ ಡಿಸ್ಪ್ಲೇ ಮೇಲೆ ಹೊಂದಿದೆ. ಇದರೊಂದಿಗೆ 403ppi ಡೆನ್ಸಿಟಿ ಮತ್ತು ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. Realme X ಸ್ಮಾರ್ಟ್ಫೋನ್ ಯಾವುದೇ ನಾಚ್ ಅಥವಾ ಪಂಚ್ ಹೋಲ್ಗಳಿಲ್ಲದೆ 6.53 FHD+ (2340×1080 ಪಿಕ್ಸೆಲ್‌ಗಳು) ರೆಸೊಲ್ಯೂಷನ್ ಫುಲ್ ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇ 85.9% ಶೇಕಡಾ ಸ್ಕ್ರೀನ್ ಟು ಬಾಡಿ ಅಸ್ಪೆಟ್ ರೇಷುವಿನೊಂದಿಗೆ ಬೆಂಬಲಿಸುತ್ತದೆ. ಇದರೊಂದಿಗೆ 394ppi ಡೆನ್ಸಿಟಿ ಮತ್ತು ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಹಿಂದೆ ಮತ್ತು ಮುಂದೆ ಎರಡು ಕಡೆಯಲ್ಲೂ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ.
Redmi K20 vs Realme X ಬ್ಯಾಕ್ ಕ್ಯಾಮೆರಾ
Redmi K20 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಇದರ ಪ್ರೈಮರಿ ಕ್ಯಾಮೆರಾ 48MP ಮೆಗಾಪಿಕ್ಸೆಲ್ ಸೋನಿ IMX 582 ಸೆನ್ಸರ್ f/1.8 ಅಪೆರ್ಚರ್ ಜೊತೆಗೆ 26mm ವೈಡ್ ಆಂಗಲ್ ಲೆನ್ಸ್ ಒಳಗೊಂಡಿದೆ. ಎರಡನೇಯದು 13MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ f/2.4 ಅಪೆರ್ಚರ್ ಜೊತೆಗೆ 12mm ಲೆನ್ಸ್ ಒಳಗೊಂಡಿದೆ. ಕೊನೆಯದು f/ 2.4 ಲೆನ್ಸ್ ಅಪೆರ್ಚರ್ ಜೊತೆಗೆ 8MP ಮೆಗಾಪಿಕ್ಸೆಲ್ f/2.4 ಅಪೆರ್ಚರ್ ಜೊತೆಗೆ ಬರುತ್ತದೆ. ಇದರೊಂದಿಗೆ ಡುಯಲ್ LED ಫ್ಲಾಶ್ ಹೊಂದಿದೆ. ಇದರ ಹಿಂಭಾಗದಿಂದ ನೀವು HDR ಮತ್ತು ಫೋನೋರಮ ಮೂಡ್ಗಳಲ್ಲಿ 2160p@30fps, 1080p@30/120/240fps, 1080p@960fps ರೆಸೊಲ್ಯೂಷನ್ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಬವುದು. ಇದರಲ್ಲಿ ನೀವು ಸ್ಲೋ ಮೋಷನ್ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಬವುದು. ಅದೇ ರೀತಿಯಲ್ಲಿ Realme X ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಸೋನಿ IMX 586 ಸೆನ್ಸರ್ ಜೊತೆಗೆ ಗೈರೋ EIS ಅಂದ್ರೆ ಇಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲಿಟಿಯೊಂದಿಗೆ ಇದರ ಪ್ರೈಮರಿ ಕ್ಯಾಮೆರಾ 48MP ಮೆಗಾಪಿಕ್ಸೆಲ್ f/1.7 ಅಪೆರ್ಚರ್ ಜೊತೆಗೆ 26mm ವೈಡ್ ಆಂಗಲ್ ಲೆನ್ಸ್ ಒಳಗೊಂಡಿದೆ. ಇದರ ಎರಡನೇಯದು 5MP ಮೆಗಾಪಿಕ್ಸೆಲ್ f/2.4 ಅಪೆರ್ಚರ್ ಡೆಪ್ತ್ ಸೆನ್ಸರ್ ಕ್ಯಾಮೆರಾದೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ನೀವು 2160p@30fps, 1080p@30fps (gyro-EIS), 1080p@120fps, 720p@960fps ರೆಸೊಲ್ಯೂಷನ್ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಬವುದು. ಇದರಲ್ಲಿ ನೀವು ಸ್ಲೋ ಮೋಷನ್ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಬವುದು.
Redmi K20 vs Realme X ಫ್ರಂಟ್ ಕ್ಯಾಮೆರಾ
ಫ್ರಂಟ್ ಕ್ಯಾಮೆರಾ ಈ ಎರಡು ಸ್ಮಾರ್ಟ್ಫೋನ್ಗಲ್ಲಿ ಅದ್ದೂರಿಯ ಫೀಚರ್ ಆಗಿದೆ. ಅಂದ್ರೆ K20 ಸ್ಮಾರ್ಟ್ಫೋನಲ್ಲಿ ಈಗಾಗಲೇ ನಾವು ಒನ್ಪ್ಲಸ್ ಸ್ಮಾರ್ಟ್ಫೋನಗಳಲ್ಲಿ ನೋಡಿರುವಂತೆ ಮೋಟೋರೈಸ್ಡ್ ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. K20 ಸ್ಮಾರ್ಟ್ಫೋನ್ ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 20 MP, f/2.2 ಅಪೆರ್ಚರ್ ಜೋತೆಗೆ 0.8 ಮೈಕ್ರಾನ್ಗಳನ್ನು ಹೊಂದಿದೆ. ಇದರ ಫ್ರಂಟಲ್ಲಿ ನೀವು 1080p@30fps ರೆಸೊಲ್ಯೂಷನ್ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಬವುದು. Realme X ಸ್ಮಾರ್ಟ್ಫೋನ್ ಸೋನಿ IMX 471 ಸೆನ್ಸರ್ರೊಂದಿಗೆ K20 ಯಂತೆ ಮೋಟೋರೈಸ್ಡ್ ಪಾಪ್ ಅಪ್ ಫ್ರಂಟ್ ಕ್ಯಾಮೆರಾ ಕಾರ್ಯವಿಧಾನವನ್ನು ಜೋಡಿಸಲಾಗಿದೆ. ಸ್ಮಾರ್ಟ್ಫೋನ್ ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP f/2.2 ಅಪೆರ್ಚರ್ ಜೋತೆಗೆ 1.0 ಮೈಕ್ರಾನ್ಗಳನ್ನು ಹೊಂದಿದೆ. ಇದರ ಫ್ರಂಟಲ್ಲಿ ನೀವು 1080p@30fps ರೆಸೊಲ್ಯೂಷನ್ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಬವುದು.
Redmi K20 vs Realme X ಪರ್ಫಾರ್ಮೆನ್ಸ್
ಮೊದಲಿಗೆ Redmi K20 ಈಗಾಗಲೇ Samsung Galaxy A80 ಮತ್ತು Lenovo Z6 ಸ್ಮಾರ್ಟ್ಫೋನಳಲ್ಲಿ ಲಾಭ್ಭ್ಯವಿರುವ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730 ಪ್ರೊಸೆಸರೊಂದಿಗೆ 2.2 GHz ಅಂಡ್ರಿನೊ 618 GPU ರನ್ ಮೂಲಕ ನಿಯಂತ್ರಿಸಲ್ಪಡುತ್ತದೆ. ಇದು ಸಾಕಷ್ಟು ಹೊಸ ಚಿಪ್‌ಸೆಟ್ ಆಗಿದೆ ಮತ್ತು ಚಿಪ್‌ಮೇಕರ್‌ನಿಂದ ಮೂರನೇ ಅತಿ ವೇಗದ ಕೊಡುಗೆಯಾಗಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಪೈ ಆಧಾರಿತವಾಗಿದ್ದು MIUI 10 ರೊಂದಿಗೆ ನಡೆಯುತ್ತದೆ. ಇದು ನಿಮಗೆ 6GB ಯ RAM ಜೊತೆಗೆ 64GB ಮತ್ತು 128GB ಇಂಟರ್ನಲ್ ಸ್ಟೋರೇಜ್ ಎರಡು ರೂಪಾಂತರದಲ್ಲಿ ಲಭ್ಯವಿದೆ. Realme X ಸ್ಮಾರ್ಟ್ಫೋನಲ್ಲಿ ಈಗಾಗಲೇ ನಾವು Oppo Reno ಮತ್ತು Realme 3 Pro ಸ್ಮಾರ್ಟ್ಫೋನ್ಗಳಲ್ಲಿ ನೋಡಿದಂತೆಯೇ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 ಪ್ರೊಸೆಸರೊಂದಿಗೆ 2.2 GHz ಅಂಡ್ರಿನೊ 616 GPU ರನ್ ಮೂಲಕ ನಿಯಂತ್ರಿಸಲ್ಪಡುತ್ತದೆ. 4GB ಮತ್ತು 8GB ವರೆಗೆ RAM ಮತ್ತು ಕೇವಲ 128GB ಒಂದೇ ಒಂದು ಇಂಟರ್ನಲ್ ಸ್ಟೋರೇಜ್ ರೂಪಾಂತರದಲ್ಲಿ ಬರುತ್ತದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಪೈ ಆಧಾರಿತವಾಗಿದ್ದು ಕಲರ್ OS 6 ಜೊತೆಗೆ ನಡೆಯುತ್ತದೆ.
Redmi K20 vs Realme X ಬ್ಯಾಟರಿ ಮತ್ತು ಪೋರ್ಟ್
ಮೊದಲಿಗೆ ಈ Redmi K20 ಸ್ಮಾರ್ಟ್ಫೋನಲ್ಲಿ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಬೆಂಬಲದೊಂದಿಗೆ ಡ್ಯುಯಲ್ ಸಿಮ್ ಸಪೋರ್ಟ್ ಮಾಡುತ್ತದೆ. ಆದರೆ ಇದರಲ್ಲಿ ಮೈಕ್ರೋ SD ಕಾರ್ಡ್ ಸ್ಲಾಟ್ ನೀಡಲಾಗಿಲ್ಲ. USB ಟೈಪ್-ಸಿ ಪೋರ್ಟ್ ಜೊತೆಗೆ 3.5mm ಆಡಿಯೊ ಜ್ಯಾಕ್ ಒಳಗೊಂಡಿದೆ. ಅದ್ರಲ್ಲಿ ಭಾರಿ ಮಾತ್ರದ 4000mAh ಬ್ಯಾಟರಿಯನ್ನು ನೀಡಲಾಗಿದೆ. ಇದರ ಇತರ ವೈಶಿಷ್ಟ್ಯಗಳೆಂದರೆ ಕನೆಕ್ಟಿವಿಟಿ ಆಯ್ಕೆಗಳ ವಿಷಯದಲ್ಲಿ ನೀವು ಸ್ಮಾರ್ಟ್‌ಫೋನ್‌ನಲ್ಲಿ ವೈ-ಫೈ 802.11 ಎಸಿ, ಬ್ಲೂಟೂತ್ 5.0, ಜಿಪಿಎಸ್ ಮತ್ತು NFC ಪಡೆಯುತ್ತೀರಿ. Realme X ಸ್ಮಾರ್ಟ್ಫೋನ್ VOOC 3.0 ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ನೀವು 3765mAh ಬ್ಯಾಟರಿಯನ್ನು ಪಡೆಯುತ್ತೀರಿ. ಡಾಲ್ಬಿ ಅಟ್ಮೋಸ್ ಆಡಿಯೊ ಬೆಂಬಲದೊಂದಿಗೆ ಮತ್ತು ಹೈಪರ್ ಬೂಸ್ಟ್ 2.0 ಗೇಮಿಂಗ್ ಮೋಡ್ ಆಧಾರಿತ ಕಲರ್ಓಎಸ್ 6 ಅನ್ನು ಒಳಗೊಂಡಿದೆ. ಇದರ ಇತರ ವೈಶಿಷ್ಟ್ಯಗಳೆಂದರೆ ಕನೆಕ್ಟಿವಿಟಿ ಆಯ್ಕೆಗಳ ವಿಷಯದಲ್ಲಿ ನೀವು ಸ್ಮಾರ್ಟ್‌ಫೋನ್‌ನಲ್ಲಿ ವೈ-ಫೈ 802.11 ಎಸಿ, ಬ್ಲೂಟೂತ್ 5.0, GPS ಪಡೆಯುತ್ತೀರಿ.
Redmi K20 vs Realme X ಬೆಲೆ
ಈ Redmi K20 ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತಿದೆ. 6GB ಯ RAM ಮತ್ತು 64GB ಸ್ಟೋರೇಜ್ ಮತ್ತು 6GB ಯ RAM ಮತ್ತು 128GB ಸ್ಟೋರೇಜ್ ಕ್ರಮವಾಗಿ 21,999 ಮತ್ತು 23,999 ರೂಗಳಲ್ಲಿ ಕಾರ್ಬನ್ ಬ್ಲಾಕ್, ಲಾವ ರೆಡ್, ಹಿಮನದಿ ನೀಲಿ ಸೇರಿದಂತೆ ಮೂರು ಬಣ್ಣಗಳನ್ನು ಆಯ್ಕೆ ಮಾಡಬಹುದು. Realme X ಸ್ಮಾರ್ಟ್ಫೋನ್ 4GB ಯ RAM + 128GB ಸ್ಟೋರೇಜ್ ರೂಪಾಂತರಕ್ಕೆ 16,999 ರೂಗಳು ಮತ್ತು 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 19,999 ರೂಗಳಾಗಿವೆ. ಇದರ ವಿಶೇಷ ಸ್ಪೈಡರ್ ಮ್ಯಾನ್: ಫಾರ್ ಫ್ರಮ್ ಹೋಮ್ ಆವೃತ್ತಿಯು 20,999 ರೂಗಳ ಬೆಲೆಯನ್ನು ಪಡೆದುಕೊಳ್ಳಬವುದು.
Redmi K20 >6GB / 64GB = ₹21,999
Redmi K20 >6GB / 128GB = ₹23,999
Realme X >4GB / 128GB = ₹16,999
Realme X >8GB / 128GB = ₹19,999
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile