Redmi K20 vs Redmi K20 Pro ಸ್ಮಾರ್ಟ್ಫೋನ್ಗಳಲ್ಲಿನ ವ್ಯತ್ಯಾಸ, ಬೆಲೆ ಮತ್ತು ಸ್ಪೆಸಿಫಿಕೇಷನ್ಗಳು

Redmi K20 vs Redmi K20 Pro ಸ್ಮಾರ್ಟ್ಫೋನ್ಗಳಲ್ಲಿನ ವ್ಯತ್ಯಾಸ, ಬೆಲೆ ಮತ್ತು ಸ್ಪೆಸಿಫಿಕೇಷನ್ಗಳು
HIGHLIGHTS

ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಅಲ್ಯೂಮಿಯಂ ಫ್ರೇಮ್ ನೀಡಲಾಗಿದ್ದು ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ.

ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಅಲ್ಯೂಮಿಯಂ ಫ್ರೇಮ್ ನೀಡಲಾಗಿದ್ದು ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ.

ಈ ಎರಡು Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳಲ್ಲಿ ಈ ಮೂರು ಅಂಶ ಕ್ಯಾಮೆರಾ, ಪ್ರೊಸೆಸರ್ ಚಿಪ್ಸೆಟ್ ಮತ್ತು ಚಾರ್ಜಿಂಗ್ ಕ್ಯಾಪಸಿಟಿ ಬಿಟ್ಟು ಉಳಿದಿದೆಲ್ಲ ಸೇಮ್ ಟು ಸೇಮ್. ಕಂಪನಿ ಈ ಕ್ಯಾಮೆರಾ, ಪ್ರೊಸೆಸರ್ ಚಿಪ್ಸೆಟ್ ಮತ್ತು ಚಾರ್ಜಿಂಗ್ ಕ್ಯಾಪಸಿಟಿಯ ಮೇರೆಗೆ ಈ ಎರಡು ಫೋನ್ಗಳ ಬೆಲೆಯನ್ನು ವಿಭಜಿಸಿದೆ. ಆದ್ದರಿಂದ ಯಾವುದಾದರು ಒಂದು ಸ್ಮಾರ್ಟ್ಫೋನ್ ನೋಡೋಣ. ಮೊದಲಿಗೆ ಈ ಸ್ಮಾರ್ಟ್ಫೋನ್ಗಳ ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕೆಂದರೆ Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳಲ್ಲಿ ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಅಲ್ಯೂಮಿಯಂ ಫ್ರೇಮ್ ನೀಡಲಾಗಿದ್ದು ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಅಂದ್ರೆ ಈ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸಾಮಾನ್ಯ ಸ್ಮಾರ್ಟ್ಫೋನ್ಗಳಂತೆ ಅಷ್ಟು ಬೇಗ ಸ್ಕರ್ಚ್ ಅಥವಾ ಹಾಳೋಗಲ್ಲ.

https://piunikaweb.com/wp-content/uploads/2019/05/redmi_k20_pro_front_back_colors.jpg

ಈ ಸ್ಮಾರ್ಟ್ಫೋನಿನ ಫ್ರಂಟ್ ಮತ್ತು ಬ್ಯಾಕ್ ಗ್ಲಾಸ್ ಫಿನಿಷ್ ಮತ್ತು 8.8mm ಥಿಕ್ನೆಸ್ಸ್ ಹೊಂದಿರುವುದರಿಂದ ಇದರ ಒಟ್ಟಾರೆಯ ತೂಕ ಸುಮಾರು 191gಗಳಿಗೆ ಬರಬವುದು. ಇದರ ಫ್ರಂಟ್ ಲುಕ್ ನೋಡಬೇಕೆಂದರೆ ಡ್ಯೂಡ್ರಾಪ್ ನಾಚ್ ಅಥವಾ ಡಾಟ್ ನಾಚ್ ಅಥವಾ ವಾಟರ್ಡ್ರಾಪ್ ನಾಚ್ ನಂತಹ ಯಾವುದೇ ನಾಚ್ ನೀಡದೆ ಫುಲ್ ಬೇಝಲ್ ಲೆಸ್ ಡಿಸ್ಪ್ಲೇಯನ್ನು ಈ ಫೋನ್ಗಳಲ್ಲಿ ನೀಡಲಾಗಿದೆ. ಇದಿಷ್ಟೇಯಲ್ಲದೆ ಈ ಎರಡು Redmi K20 ಮತ್ತು Redmi K20 Pro ಫೋನ್ಗಳಲ್ಲಿ ಇನ್ ಡಿಸ್ಪ್ಲೇ ಅಥವಾ ಇನ್ ಸ್ಕ್ರೀನ್ ಫಿಂಗರ್ಪ್ರಿಂಟ್ ಏಳನೇ ಜನರೇಷನ್ ನೀಡಿರುವುದರಿಂದ ಅತಿ ಫಾಸ್ಟ್ ಮತ್ತು ಅಕ್ಯುರೇಟ್ ಆಗಿದೆ. ಕೊನೆಯದಾಗಿ ಇದರ  ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿಯಲ್ಲಿ ಮೋಟೋರೈಸ್ಡ್ ಅಥವಾ ಪಾಪ್ ಅಪ್ ಸೆಲ್ಫಿ ಮತ್ತು AI ಅನ್ಲಾಕ್ ಕ್ಯಾಮೆರಾವನ್ನು ಸಹ ಈ ಎರಡು ಫೋನ್ಗಳಲ್ಲಿ ನೀಡಲಾಗಿದೆ. ಇದರ ನಂತರ ಈ ಎರಡು Redmi K20 ಮತ್ತು Redmi K20 Pro ಫೋನ್ಗಳ ಡಿಸ್ಪ್ಲೇಗಳ ಬಗ್ಗೆ ಹೇಳಬೇಕೆಂದರೆ 6.39 ಇಂಚಿನ FHD+ ಅಮೋಲೆಡ್ HDR ಡಿಸ್ಪ್ಲೇಯನ್ನು ನೀಡಲಾಗಿದೆ.

https://www.deccanherald.com/sites/dh/files/styles/article_detail/public/article_images/2019/06/06/Xiaomi%20Redmi%20K20%20series-1559781901.PNG?itok=TQSm8kQQ

ಈ ಎರಡು ಫೋನ್ಗಳ ಡಿಸ್ಪ್ಲೇ 1080 x 2340p ರೆಸುಲ್ಯೂಷನ್ ಜೊತೆಗೆ 19:9 ಅಸ್ಪೆಟ್ ರೇಷುವಿನ 403 ppi ಡೆನ್ಸಿಟಿ ಟೆಕ್ನಾಲಜಿಯೊಂದಿಗೆ ಬರುತ್ತವೆ. ಈಗಾಗಲೇ ಮೊದಲೇ ಹೇಳಿರುವಂತೆ Redmi K20 Pro ಫ್ರಂಟ್ ಡಿಸ್ಪ್ಲೇ ಮತ್ತು ಬ್ಯಾಕ್ ಪ್ಯಾನಲ್ ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಇಷ್ಟೆಲ್ಲ ಇರೋ ಫೋನಲ್ಲಿ ಗೇಮ್ ಆಡಲೇಬೇಕು ಅಲ್ವೇ…ಇದರಲ್ಲಿ PUBG ಆಡುವಾಗ ನಿಮಗೆ ಸಿಗೋ ಆ ಅನುಭವ ಆ ಹೊಸ ರೀತಿಯ ಫೀಲ್ ಒಂದ್ ತಾರಾ ಚೆನ್ನಾಗಿರುತ್ತೆ. ಈ ಸ್ಮಾರ್ಟ್ಫೋನಿನ ಸಿಸ್ಟಮ್ ಮಾಹಿತಿ ನೋಡಬೇಕೆಂದರೆ Redmi K20 Pro ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಅತಿ ಶ್ರೇಷ್ಠ ಮತ್ತು ಅತ್ಯುತ್ತಮವಾದ ಮತ್ತು 50,000 ರೂಪಾಯಿಗಳಿಗೆ ಲಭ್ಯವಿರುವ OnePlus 7 Pro ಸ್ಮಾರ್ಟ್ಫೋನಲ್ಲಿ ನೀಡಿರುವ ಅದೇ ಕ್ವಾಲ್ಕಾಮ್ SD855 ಚಿಪ್ ಪ್ರೊಸೆಸರ್ ಜೊತೆಗೆ ಅದೇ ಅಡ್ರಿನೊ 640 GPU ಜೊತೆಗೆ ಓಕ್ಟಾ ಕೋರ್ 2.84GHz ನೀಡಲಾಗಿದೆ. ಅಲ್ಲದೆ ಇದು ಆಂಡ್ರಾಯ್ಡ್ 9.0 ಆಧಾರಿತ MIUI 10 ಒಳಗೊಂಡು ಅದ್ದೂರಿಯ ಸ್ಮಾರ್ಟ್ಫೋನ್ಗೆ ಭರ್ಜರಿಯ ಆಂಡ್ರಾಯ್ಡ್ ಪ್ರೊಸೆಸರ್ ನೀಡಲಾಗಿದೆ. ಅಂದ್ರೆ ಇದರಲ್ಲಿ ನೀವು ಒಂದು ಸ್ಮಾರ್ಟ್ಫೋನಲ್ಲಿ ಏನೇಲ್ಲ ಮಾಡೋಕೆ ಸಾಧ್ಯನೋ ಅದೇಲ್ಲ ಮಾಡಬವುದು. ಯಾವುದೇ ಹೈ ಗ್ರಾಫಿಕ್ ಗೇಮ್ ಆಗಿರಬವುದು ಅಥವಾ  ಯಾವುದೇ ಹೆವಿ ಲೋಡಿಂಗ್ ಅಥವಾ ಹೈ ರೆಸುಲ್ಯೂಷನ್ ಅಪ್ಲಿಕೇಶನ್ಗಳಾಗಿರಬವುದು ಆರಾಮಾಗಿ ಇದ್ರಲ್ಲಿ ಬಳಸಬವುದು.

https://www.deccanherald.com/sites/dh/files/styles/article_detail/public/article_images/2019/06/06/Xiaomi%20Redmi%20K20%20series-1559781901.PNG?itok=TQSm8kQQ
 

ಆದರೆ Redmi K20 ಸ್ಮಾರ್ಟ್ಫೋನ್ ನೋಡಬೇಕೆಂದರೆ ಇದರಲ್ಲಿ Samsung Galaxy A80 ಅಲ್ಲಿ ಬಳಸಲಾಗಿರುವ ಅದೇ ರೀತಿಯ ಅಂದ್ರೆ Galaxy A80 ಫೋನಲ್ಲಿ ಕ್ವಾಲ್ಕಾಮ್ SD730G ಬಳಸಲಾಗಿದೆ ಆದರೆ Redmi K20 ಸ್ಮಾರ್ಟ್ಫೋನಲ್ಲಿ ಕ್ವಾಲ್ಕಾಮ್ SD730 ನೀಡಲಾಗಿದೆ. ಅಂದ್ರೆ ಇದು ಸಹ ತನ್ನ ವಿಭಾಗದ ವಲಯದಲ್ಲಿ ಅತ್ಯುತ್ತಮವಾದ ಪ್ರೊಸೆಸರನ್ನು ಒಳಗೊಂಡಿದೆ. ಈ  Redmi K20 ಸ್ಮಾರ್ಟ್ಫೋನ್ Vivo Z1 Pro ಅಥವಾ Realme X ಮತ್ತು ಮುಂಬರಲಿರುವ Vivo S1 ಸ್ಮಾರ್ಟ್ಫೋನ್ಗಳ ಪ್ರೊಸೆಸರೊಂದಿಗೆ ಸ್ಪರ್ಧಿಸಲಿದೆ. Redmi K20 ಸ್ಮಾರ್ಟ್ಫೋನ್ ಅಡ್ರಿನೊ 618 GPU ಜೊತೆಗೆ ಓಕ್ಟಾ ಕೋರ್ 2.2GHz ನಡೆಸುತ್ತದೆ. ಅಲ್ಲದೆ ಇದು ಆಂಡ್ರಾಯ್ಡ್ ಪೈ 9.0 ಆಧಾರಿತ MIUI 10 ಜೊತೆಗೆ ಅತ್ಯುತ್ತಮ ಪ್ರೊಸೆಸರ್ ನೀಡಲಾಗಿದೆ. Redmi K20 ಸ್ಮಾರ್ಟ್ಫೋನ್ 6GB/64GB ಮತ್ತು 6GB/128GB ರೂಪಾಂತರಗಳಲ್ಲಿ ಲಭ್ಯವಿದೆ.

https://www.alezay.com/wp-content/uploads/2019/06/Global-Version-Xiaomi-Mi-9T-6-39-Inch-6GB-Smartphone-Red.jpg

ಈಗ ಈ ಸ್ಮಾರ್ಟ್ಫೋನ್ಗಳ ಕ್ಯಾಮೆರಾದ ಮಾಹಿತಿ ನೋಡಬೇಕೆಂದರೆ ಇವೇರಡು ಸ್ಮಾರ್ಟ್ಫೋನ್ಗಳು ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಒಳಗೊಂಡಿವೆ. ಮೊದಲಿಗೆ Redmi K20 ಸ್ಮಾರ್ಟ್ಫೋನ್ ಬಗ್ಗೆ ಹೇಳಬೇಕೆಂದರೆ  ಇದರ ಪ್ರೈಮರಿ ಲೆನ್ಸ್ 48MP ಮೆಗಾಪಿಕ್ಸೆಲ್ ಸೋನಿ IMX582 ಸೆನ್ಸರ್ 1.6μm ಲಾರ್ಜ್ ಪಿಕ್ಸೆಲ್ 4-in-1 ಲಾರ್ಜ್ ಪಿಕ್ಸೆಲ್ f/ 1.75 ಅಪರ್ಚರ್ Redmi Note 7 Pro ಸ್ಮಾರ್ಟ್ಫೋನಂತೆ ಒಳಗೊಂಡಿದೆ. ಎರಡನೇಯದಾಗಿ 8MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ 2x ಆಪ್ಟಿಕಲ್ ಜೂಮ್ 1.12μm ಪಿಕ್ಸೆಲ್ ಸೈಜ್ f/ 2.4 ಅಪರ್ಚರ್ ಜೊತೆ ಬರುತ್ತದೆ. ಕೊನೆಯದಾಗಿ 13MP ಮೆಗಾಪಿಕ್ಸೆಲ್ 124.8° ಸೂಪರ್ ವೈಡ್ ಆಂಗಲ್ ಲೆನ್ಸ್ 1.12μm ಪಿಕ್ಸೆಲ್ ಸೈಜ್ f / 2.4 ಅಪರ್ಚರೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್ಫೋನಲ್ಲಿ 2x ಆಪ್ಟಿಕಲ್ ಜೂಮ್ ಒಳಗೊಂಡಿರುವುದರೊಂದಿಗೆ 10x ಡಿಜಿಟಲ್ ಜೂಮ್ ಸಹ ಹೊಂದಿದೆ.

Redmi K20 Pro ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ಪ್ರೈಮರಿ ಲೆನ್ಸ್ ಸಹ 48MP ಮೆಗಾಪಿಕ್ಸೆಲ್ 1.6μm ಲಾರ್ಜ್ ಪಿಕ್ಸೆಲ್ 4-in-1 ಲಾರ್ಜ್ ಪಿಕ್ಸೆಲ್ f/ 1.75 ಅಪರ್ಚರ್ Redmi K20 ಸ್ಮಾರ್ಟ್ಫೋನಂತೆ ಒಳಗೊಂಡಿದೆ. ಎರಡನೇಯದಾಗಿ 8MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ 2x ಆಪ್ಟಿಕಲ್ ಜೂಮ್ 1.12μm ಪಿಕ್ಸೆಲ್ ಸೈಜ್ f/ 2.4 ಅಪರ್ಚರ್ ಜೊತೆ ಬರುತ್ತದೆ. ಕೊನೆಯದಾಗಿ 13MP ಮೆಗಾಪಿಕ್ಸೆಲ್ 124.8° ಸೂಪರ್ ವೈಡ್ ಆಂಗಲ್ ಲೆನ್ಸ್ 1.12μm ಪಿಕ್ಸೆಲ್ ಸೈಜ್ f / 2.4 ಅಪರ್ಚರೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್ಫೋನಲ್ಲಿ 2x ಆಪ್ಟಿಕಲ್ ಜೂಮ್ ಒಳಗೊಂಡಿರುವುದರೊಂದಿಗೆ 10x ಡಿಜಿಟಲ್ ಜೂಮ್ ಸಹ ಹೊಂದಿದೆ.

https://www.xiaomiadictos.com/wp-content/uploads/2019/05/IMG_6187-1024x614.jpg

ಇಲ್ಲಿ ಮುಖ್ಯವಾಗಿ ನೀವು ಗಮನಿಸಬೇಕಾದ ಮತ್ತೋಂದು ವಿಶೇಷತೆಯೆಂದರೆ ಈ ಎರಡು ಫೋನ್ಗಳ ಹಿಂಭಾಗದ ವಿಡಿಯೋದಲ್ಲಿ ಇಲೆಕ್ಟ್ರಾನಿಕ್ ಇಮೇಜ್ ಸ್ಟಬಿಲೈಝಷನ್ EIS ಫೀಚರ್ ಸಹ ನೀಡಲಾಗಿದೆ. ಅಂದ್ರೆ ನೀವು ನಡೆದಾಡುತ್ತ ವಿಡಿಯೋ ಶೂಟ್ ಮಾಡುವಾಗ ಶೇಕ್ ಆದ್ರೂ ಸ್ಟಬಿಲೈಝಷನ್ ಇರುವ ಕಾರಣ ಸ್ಟೇಬಲ್ ಆಗಿ ಅತ್ಯುತ್ತಮವಾದ ರೀತಿಯ ಶಾರ್ಪ್ ಮತ್ತು ಕ್ರಿಸ್ಪಿ ಶಾಟ್ಗಳನ್ನು ನೀಡುತ್ತದೆ. ಇವೇರಡು Redmi K20 ಮತ್ತು Redmi K20 Pro ಸ್ಮಾರ್ಟ್ಫೋನ್ಗಳ ಫ್ರಂಟ್ ಕ್ಯಾಮೆರಾದ ಮಾಹಿತಿಯನ್ನು ನೋಡಬೇಕೆಂದರೆ ಈಗಾಗಲೇ ಹೇಳಿರುವಂತೆ ಇವೇರಡರಲ್ಲೂ ಒಂದೇ ರೀತಿಯ ಟೆಕ್ನಾಲಜಿಯನ್ನು ಬಳಸಲಾಗಿದ್ದು ಯಾವುದೇ ವ್ಯತ್ಯಾಸಗಳಿಲ್ಲ. ಎರಡು ಫೋನ್ಗಳಲ್ಲಿ ಮೋಟೋರೈಸ್ಡ್ ಅಥವಾ ಪಾಪ್ ಅಪ್ 20MP ಮೆಗಾಪಿಕ್ಸೆಲ್ f2.2 ಅಪರ್ಚರೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 

https://i0.wp.com/www.yugatech.com/wp-content/uploads/2019/06/redmi-k20-pro-prod-shot-yugatech6.jpg?w=720&ssl=1

ಈ ಎರಡು ಸ್ಮಾರ್ಟ್ಫೋನ್ಗಳ ಬ್ಯಾಟರಿ ಮಾಹಿತಿ ನೋಡಬೇಕೆಂದರೆ 4000mAh ಮಿಲಿ ಹ್ಯಾಮ್ಪವರ್ ಬ್ಯಾಟರಿಯನ್ನು ನೀಡಲಾಗಿದೆ. Redmi K20 ಸ್ಮಾರ್ಟ್ಫೋನಲ್ಲಿ ಬಾಕ್ಸ್ ಒಳಗೆ 9V/2A ಹೊಂದಿರುವ 18W ಫಾಸ್ಟ್ ಚಾರ್ಜಿಂಗ್ ಕ್ವಿಕ್ ಚಾರ್ಜರ್ 3.0 ಸಪೋರ್ಟ್ ರಿಚಾರ್ಜ್ ಮಾಡಬವುದಾದ ಬ್ಯಾಟರಿಯನ್ನು ನೀಡಲಾಗಿದೆ. ಆದರೆ Redmi K20 Pro ಸ್ಮಾರ್ಟ್ಫೋನಲ್ಲಿ ರಿಚಾರ್ಜ್ ಮಾಡಬವುದಾದ ಬ್ಯಾಟರಿ ಬಾಕ್ಸ್ ಒಳಗೆ 9V/2A ಹೊಂದಿರುವ 27W ಫಾಸ್ಟ್ ಚಾರ್ಜಿಂಗ್ ಜೊತೆಗೆ Qualcomm® ಕ್ವಿಕ್ ಚಾರ್ಜರ್ 4.0 ಸಪೋರ್ಟ್ ಮಾಡುವ ಅಡಾಪ್ಟರ್ ಬರುತ್ತದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ಗಳ ಬೆಲೆ ನೋಡಬೇಕೆಂದರೆ…

Redmi K20: 6GB ಯ RAM ಮತ್ತು 64GB ಸ್ಟೋರೇಜ್ 21,999 ರೂಗಳು

Redmi K20: 6GB ಯ RAM ಮತ್ತು 128GB ಸ್ಟೋರೇಜ್ 23,999  ರೂಗಳು

Redmi K20 Pro: 6GB ಯ RAM ಮತ್ತು 128GB ಸ್ಟೋರೇಜ್ 27,999 ರೂಗಳು

Redmi K20 Pro: 8GB ಯ RAM ಮತ್ತು 256GB ಸ್ಟೋರೇಜ್ 30,999 ರೂಗಳು ಈಗ ನಮಗೆ ಬರೋ ಪ್ರಶ್ನೆ ಏನಪ್ಪಾ ಅಂದ್ರೆ ಇದನ್ನು ತಗೋಬವುದು ಬೇಡ್ವಾ ಅನ್ನೋದು… ನಾನು ಪರ್ಸನಲಾಗಿ ನಿಮಗೆ ಸಲಹೆ ನೀಡಬೇಕೆಂದರೆ ಆರಾಮಾಗಿ ಖರೀದಿಸಬವುದು ಏಕೆಂದರೆ ಇದರಲ್ಲಿರುವ ಸ್ಪೆಕ್ಸ್ ಮತ್ತು ಕಾನ್ಫ್ರಿಗ್ರೇಷನ್ ಈ ರೇಂಜಲ್ಲಿ ಸಿಗೋಲ್ಲ. ಈಗ ನಿರ್ಧಾರ ನಿಮ್ಮ ಕೈಯಲ್ಲಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo