ಭಾರತದಲ್ಲಿ Realme 3 ಸ್ಮಾರ್ಟ್ಫೋನ್ ಕೇವಲ 8,999 ರೂಗಳಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ Redmi Note 7 ಸ್ಮಾರ್ಟ್ಫೋನಿಗೆ ಸರಿಸಾಟಿಯಾಗಿದೆ. ಈ Realme 3 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಹೆಲಿಯೊ P70 ಪ್ರೊಸೆಸರ್ನಿಂದ ಪವರ್ ಪಡೆದುಕೊಳ್ಳುತ್ತದೆ. ಮತ್ತು 4230mAh ಬ್ಯಾಟರಿಯನ್ನು ಸ್ಪಂದಿಸುತ್ತದೆ. ಇದರ ಮೊದಲ ಮಾರಾಟ ಮಾರ್ಚ್ 12 ರಂದು ಫ್ಲಿಪ್ಕಾರ್ಟ್ನಲ್ಲಿ 12 ಮಧ್ಯಾಹ್ನ ನಡೆಯುತ್ತದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಬಜೆಟ್ ವಿಭಾಗದಲ್ಲಿ Redmi Note 7 ವಿರುದ್ಧ Realme ಸ್ಪರ್ಧಿಸಲಿದೆ.
ಈ ಹೊಸ Redmi Note 7 ಅನ್ನು Redmi Note 7 Pro ಸ್ಮಾರ್ಟ್ಫೋನಿನೊಂದಿಗೆ ಬಿಡುಗಡೆ ಮಾಡಲಾಯಿತು. ಆದರೆ Realme 3 ಫೋನಿನ ಮತ್ತೋಂದು ರೂಪಾಂತರ Realme 3 Pro ಬರುವ ಏಪ್ರಿಲ್ ತಿಂಗಳಲ್ಲಿ ಬರಲಿರುವ ಬಗ್ಗೆ ಕಂಪನಿ ಘೋಷಿಸಿದೆ. ಅಲ್ಲಿಯವರೆಗೆ Realme 3 vs Redmi Note 7 ಫೋನ್ಗಳು ಒಂದಕ್ಕೊಂದು ಸ್ಪರ್ಧಿಸಲಿವೆ. ಆದ್ದರಿಂದ ಇಲ್ಲಿ ನಾವು ತಿಳಿದಿರುವ ಆಧಾರದ ಮೇಲೆ ಎರಡು ಫೋನ್ಗಳ ಇವುಗಳ ಬೆಲೆ, ಸ್ಪೆಸಿಫಿಕೇಷನ್ ಮತ್ತು ಫೀಚರ್ ಮಾಹಿತಿ ಹೋಲಿಸಿ ನೋಡಿದ್ದೇವೆ.
ಇವೇರಡರ ಬೆಲೆ ಮತ್ತು ಲಭ್ಯತೆ.
ಮೊದಲಿಗೆ ಈ ಫೋನ್ಗಳ ಬೆಲೆ ತಿಳಿಯೋಣ Realme 3 ಸ್ಮಾರ್ಟ್ಫೋನ್ ಒಟ್ಟು ಎರಡು ವೇರಿಯಂಟ್ಗಳಲ್ಲಿ ಲಭ್ಯವಿದೆ. 3GB-32GB ಕೇವಲ 8,999 ರೂಗಳಲ್ಲಿ ಲಭ್ಯವಾದರೆ 4GB-64GB ವೇರಿಯಂಟ್ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳು ಇದೇ 12ನೇ ಮಾರ್ಚ ಮಧ್ಯಾಹ್ನ 12:00 ಕ್ಕೆ ಮಾರಟವಾಗಲಿದೆ. Redmi Note 7 ಸ್ಮಾರ್ಟ್ಫೋನ್ 3GB-32GB ಕೇವಲ 9,999 ರೂಗಳಲ್ಲಿ ಲಭ್ಯವಾದರೆ 4GB-64GB ವೇರಿಯಂಟ್ ಕೇವಲ 11,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳು ಇದೇ 13ನೇ ಮಾರ್ಚ ಮಧ್ಯಾಹ್ನ 12:00 ಕ್ಕೆ ಮಾರಟವಾಗಲಿದೆ.
ಇವೇರಡರ ಡಿಸ್ಪ್ಲೇ ಮತ್ತು ಡಿಸೈನ್.
Realme 3 ಡ್ಯೂಡ್ರೋಪ್ ನಾಚ್ 6.2 ಇಂಚಿನ HD+ ಡಿಸ್ಪ್ಲೇ 19: 9 ಅಸ್ಪೆಟ್ ರೇಷು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. Redmi Note 7 ನಲ್ಲಿ 6.3 ಇಂಚಿನ FHD+ ಡ್ಯೂಡ್ರೋಪ್ ನಾಚ್ 19: 9 ಅಸ್ಪೆಟ್ ರೇಷು ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದಿದೆ. Realme 3 ಗ್ರೇಡಿಯಂಟ್ ಯೂನಿಬೋಡಿ ಹೊಂದಿದೆ. ಆದರೆ Redmi Note 7 ಗ್ಲಾಸ್ ಬಾಡಿ ಮತ್ತು ಲೋಹದ ಫ್ರೇಮ್ ಅನ್ನು ಹೆಚ್ಚು ಪ್ರೀಮಿಯಂನಲ್ಲಿ ಕಾಣುತ್ತದೆ. ಆದಾಗ್ಯೂ ಎರಡೂ ಫೋನ್ಗಳಿಗೆ ಅವುಗಳನ್ನು ಸ್ವಚ್ಛವಾಗಿಡಲು ಕವರ್ ಅಗತ್ಯವಿದೆ.
ಇವೇರಡರ ಪ್ರೊಸೆಸರ್ ಮತ್ತು ಸಾಫ್ಟ್ವೇರ್.
ಈ ಹೊಸ Realme 3 ಓಕ್ಟಾ ಕೋರ್ APU ನೊಂದಿಗೆ 12nm ಮೀಡಿಯಾ ಟೆಕ್ ಹೆಲಿಯೊ P70 ಪ್ರೊಸೆಸರ್ನಿಂದ 2.1 GHz ವರೆಗೆ ದೊರೆಯುತ್ತದೆ. Redmi Note 7 ಅನ್ನು 14nm ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಪ್ರೊಸೆಸರ್ ಹೊಂದಿದ್ದು ಅಡ್ರಿನೊ 512 ಜಿಪಿಯು ಹೊಂದಿದೆ. Realme 3 ಆಂಡ್ರಾಯ್ಡ್ 9 ಪೈ ಮತ್ತು ColorOS 6.0 ಅನ್ನು 3 ರನ್ ಮಾಡುತ್ತದೆ.
ಇವೇರಡರ ಕ್ಯಾಮೆರಾ.
Realme 3 ಸ್ಮಾರ್ಟ್ಫೋನ್ 13MP+2MP ಸೆನ್ಸರ್ f/1.8 ಅಪೆರ್ಚರೊಂದಿಗೆ ಡುಯಲ್ ರೇರ್ ಕ್ಯಾಮೆರಾ ಹೊಂದಿದೆ. Redmi Note 7 ಸ್ಮಾರ್ಟ್ಫೋನ್ 12MP+2MP ಸೆನ್ಸರ್ f/2.2 ಅಪೆರ್ಚರೊಂದಿಗೆ ಡುಯಲ್ ರೇರ್ ಕ್ಯಾಮೆರಾ ಹೊಂದಿದೆ. ಈ ಎರಡು ಫೋನ್ಗಳ ಫ್ರಂಟ್ ಕ್ಯಾಮೆರಾ ಸೆನ್ಸರ್ 13MP ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ f/2.0 ಅಪೆರ್ಚರೊಂದಿಗೆ ಬರುತ್ತದೆ.
ಇವೇರಡರ ಬ್ಯಾಟರಿ ಮತ್ತು ಹೈಲೈಟ್ಗಳು.
Redmi Note 7 ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಮೂಲಕ ಫಾಸ್ಟ್ ಚಾರ್ಜಿಂಗ್ ಅನ್ನು USB ಟೈಪ್ ಸಿ ಅನ್ನು ಸಪೋರ್ಟ್ ಮಾಡುತ್ತದೆ. ಆದರೆ Realme 3 ಸ್ಮಾರ್ಟ್ಫೋನ್ 4230mAh ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ ನಾರ್ಮಲ್ ಮೈಕ್ರೋ USB ಪೋರ್ಟ್ ಹೊಂದಿದ್ದು ಯಾವುದೇ ಫಾಸ್ಟ್ ಅಥವಾ ಕ್ವಿಕ್ ಚಾರ್ಜ್ ಸಪೋರ್ಟ್ ಮಾಡೋಲ್ಲ. ಎರಡರಲ್ಲೂ 3.5mm ಆಡಿಯೋ ಜಾಕ್ ನೀಡಿದೆ.