ಹೊಸ Google Pixel 3a XL vs Google Pixel 3 ಸ್ಮಾರ್ಟ್ಫೋನ್ಗಳ ಕ್ಯಾಮೆರಾ ಕಂಪ್ಯಾರಿಸನ್

Updated on 09-May-2019
HIGHLIGHTS

ಇದರಲ್ಲಿ ತೆಗೆಯುವ ಇಮೇಜ್ಗಳು ವಾಸ್ತವವಾಗಿಲ್ಲವಾದರೂ ನೋಡುಕೆ ಮತ್ತು ನೋಡುಗಾರರಿಗೆ ಆಕರ್ಷಕವಾಗಿ ಕಾಣುತ್ತದೆ.

ಗೂಗಲ್ ಭಾರತದಲ್ಲಿ ಹೊಸ ಪಿಕ್ಸೆಲ್ ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ Google Pixel 3a ಮತ್ತುGoogle Pixel 3a XL ಸ್ಮಾರ್ಟ್ಫೋನ್ಗಳು ಇವುಗಳ ಬೆಲೆ ನೋಡಬೇಕೆಂದರೆ Google Pixel 3a ಕೇವಲ 39,999 ಮತ್ತೋಂದು Google Pixel 3a XL ಕೇವಲ 44,999 ರೂಗಳಲ್ಲಿ ಲಭ್ಯವಾಗಲಿವೆ. ಗೂಗಲ್ ಸ್ಮಾರ್ಟ್ಫೋನಲ್ಲಿ ಈಗಾಗಲೇ ಕಳೆದ ವರ್ಷ ಬಿಡುಗಡೆಯಾದ Google Pixel 3 ಫೋನಲ್ಲಿದ್ದಂತೆ ಅದೇ ಡುಯಲ್ ಪಿಕ್ಸೆಲ್ 12.2MP ಕ್ಯಾಮೆರಾ ಸೆನ್ಸರ್ ಈ ಹೊಸ Google Pixel 3a XL ಫೋನಲ್ಲಿ ನೀಡಲಾಗಿದೆ. ಆದ್ದರಿಂದ ಇಲ್ಲಿ ನಾವು Google Pixel 3 ಮತ್ತು Google Pixel 3a XL ಫೋನ್ಗಳಲ್ಲಿನ ಕ್ಯಾಮೆರಾ ವ್ಯತ್ಯಾಸದೊಂದಿಗೆ ಕಂಪ್ಯಾರಿಸನ್ ಮಾಹಿತಿ ನೀಡಿದ್ದೇವೆ.    

ಮೊದಲಿಗೆ ಈಗಾಗಲೇ ನೀವು ಇವೇರಡು ಫೋನ್ಗಳಲ್ಲಿ ಕೆಲ ಫೋಟೋಗಳನ್ನು ಕ್ಲಿಕ್ ಮಾಡಿದ್ದೇವೆ. ಇದರಲ್ಲಿ ನಿಮಗೊಂದು ವಿಷಯವನ್ನು ನೇರವಾಗಿ ಹೇಳಬೇಕೆಂದರೆ Google Pixel 3a XL ನಿಜಕ್ಕೂ ಕಳೆದ ವರ್ಷಕ್ಕಿಂತ ಉತ್ತಮವಾದ ಇಮೇಜ್ಗಳನ್ನು ನೀಡುತ್ತದೆ. ನಿಮ್ಮ ಮುಂದೆ ನಾವು ಬ್ಯಾಟ್ಮೆನ್ ಇಮೇಜ್ ತೋರಿಸ್ತಾ ಇದ್ದೀವಿ…ಅಲ್ಲಿಂದ ನಿಮ್ಮ ಗಮನ ಸ್ವಲ್ಪ ಸೈಡ್ ಮಾಡಿ ಜೋಕರ್ ಚಿತ್ರ ನೋಡಿ Google Pixel 3a XL ಸ್ವಲ್ಪ ಅದ್ದೂರಿಯ ಕಲರ್ ಮಿಕ್ಸ್ಚಾರ್ ನೀಡುತ್ತಿದೆ. ಇದರಿಂದಾಗಿ ಪ್ರತಿ ಟೆಕ್ಚರ್ ಸ್ಮೂತ್ ಮತ್ತು ಕೂಲ್ ಲುಕ್ ನೀಡುತ್ತಿದೆ. ಇದರೊಂದಿಗೆ ನಾವು ನೈಟ್ ಸೈಟ್ ಸಹ ತೋರಿದ್ದೇವೆ. ಇಲ್ಲಿಯೂ ಸಹ Google Pixel 3 ಫೋನ್ಗಿಂತ Google Pixel 3a XL ಬೆಟರ್ ಆಗಿದ್ದು ಜೂಮ್ ಮಾಡಿ ತೆಗೆಯುವ ಫೋಟೋಗಳಲ್ಲಿ ಕಡಿಮೆ ನೋಯಿಸ್ ನೀಡುತ್ತದೆ. ಇವೇರಡು ಇಮೇಜುಗಳನ್ನು ಸ್ವಲ್ಪ ದೂರದಿಂದ ನೋಡಿದ್ರೆ Google Pixel 3a XL ಬಗ್ಗೆ ಪ್ರಶಂಶೆ ಮಾಡ್ತೀರಾ.

 

ಈಗ ಗೋಡೆ ಮೇಲೆ ನೇತಾಡುತ್ತೀರುವ ಈ ಪೆಟಲ್ಗಳ ಫೋಟೋವನ್ನು ನೋಡಿ. Google Pixel 3 ಫೋನಲ್ಲಿರುವ HDR ಪ್ಲಸ್ ಮೂಡ್ ಸ್ವಲ್ಪ ಚೆನ್ನಾಗಿದ್ದು ಇರದಲ್ಲಿನ ಶುದ್ಧತೆಯನ್ನು ನೀವು ಸೂಕ್ಷ್ಮವಾಗಿ ಗಮನಿಸಬವುದು. ಇದರ ನಂತರ ಇಲ್ಲೊಂದು ಬೀಘಲ್ ಇಮೇಜ್ ನೋಡಿ ಬೀಘಲ್ ಅಂದ್ರೆ ಅಲ್ಲಿರುವ ಸ್ಪೀಕರ್. ಇದನ್ನು ಸಹ ಈ ಎರಡು ಫೋನ್ಗಳಲ್ಲಿ ತೆಗೆದ ಫೋಟೋ ನೋಡಬವುದು ಎಲ್ಲಿಯೂ ಸಹ Google Pixel 3 ಅದ್ದೂರಿಯ ಡೀಟೇಲ್ಗಳನ್ನು ನ್ಯಾಚುರಲ್ ಬಣ್ಣಗಳೊಂದಿಗೆ ಕಾಣುತ್ತದೆ. ಇದರಲ್ಲಿ ಮುಖ್ಯವಾಗಿ ಸ್ಪೀಕರ್ ಸುತ್ತಲೂ ಇರುವ ಹಸಿರು ಬಣ್ಣದ ಲೈನ್ ಹೆಚ್ಚು ಕ್ಲಿಯರ್ ಮತ್ತು Google Pixel 3a XL ಫೋನ್ಗಿಂತ ಸುಂದರವಾಗಿ ಕಾಣುತ್ತದೆ.

ಈಗ ಸೆಲ್ಫಿ ಬಗ್ಗೆ ಹೇಳಬೇಕೆಂದರೆ ನೀವಿಲ್ಲಿ ಈ ಸೆಲ್ಫಿ ಇಮೇಜನ್ನು ಗಮನಿಸುವುದಾದರೆ Google Pixel 3a XL ಒಂದು ರೀತಿಯಲ್ಲಿ ಕೂಲ್ ಇಮೇಜ್ಗಳನ್ನು ನೀಡುತ್ತದೆ. ಆದರೆ Pixel 3 ಸ್ವಲ್ಪ ಮಟ್ಟಿಗೆ ಅದ್ದೂರಿಯ ಶಾರ್ಪ್ ಇಮೇಜ್ಗಳನ್ನು ನೀಡುತ್ತದೆ. ಈ ಸೆಲ್ಫಿಯಲ್ಲಿ ನೀವು ಮುಖದ ಮೇಲಿರುವ ಕೂದಲುಗಳನ್ನು ಹೆಚ್ಚು ಶಾರ್ಪ್ ಮತ್ತು ಕ್ಲಿಯರಾಗಿ ನೋಡಬವುದು. ನಂತರ ಒಂದು ಫ್ರೇಮಲ್ಲಿ ಕೈಯಲ್ಲಿ ಒಂದು ದೀಪ ಹಿಡಿದಿರುವ ಹೆಂಗಸಿನ ಇಮೇಜ್ ನೋಡಬವುದು. ಇದು ಎರಡು ಫೋನ್ಗಳಲ್ಲಿ HDR ಮೂಡ್ ಆನ್ ಮಾಡಿ ತೆಗೆಯಲಾಗಿದೆ. ಇಲ್ಲಿ Pixel 3 ಒಂದು ರೀತಿಯಲ್ಲಿ ಸ್ಮೂತ್ ಇಮೇಜ್ ನೀಡಿದರೆ Pixel 3a XL ಒಟ್ಟಾರೆಯಾಗಿ ಹೆಚ್ಚು ಟೆಕ್ಚರ್ ಜೊತೆಗೆ ಈ ಪೇಂಟಿಂಗ್ ನೈಜವಾದ ಸ್ಥಲತೆಯನ್ನು ಎದ್ದು ತೋರುತ್ತದೆ. ಈಗ ಇವೇರಡಲ್ಲಿ HDR+ ಮೂಡ್ ನೋಡಬೇಕೆಂದರೆ Pixel 3 ಹೆಚ್ಚು ಶುದ್ಧತೆ ಮತ್ತು ನೀವು ಸೂಕ್ಷ್ಮವಾದ ಮಾಹಿತಿಯನ್ನು ನೋಡಬವುದು.

ಇದರಲ್ಲಿ ರಾತ್ರಿ ಕತ್ತಲೆಯಲ್ಲಿ ಒಂದು ಲೈಟ್ ಲ್ಯಾಂಪ್ ಹಸಿರು ವಲಯದಲ್ಲಿಟ್ಟು ತೆಗೆದ ಫೋಟೋ ನೋಡಬವುದು. ಇದರಲ್ಲಿ Pixel 3a XL ನಿಮಗೆ ಶಾರ್ಪ್ ಇಮೇಜ್ ನೀಡಲು ಪ್ರಯತ್ನಿಸುತ್ತದೆ. ಆದರೆ ಒಟ್ಟಾರೆಯಾಗಿ Pixel 3 ಅಯ್ತುತ್ತಮವಾದ ಫೋಟೋ ನೀಡುತ್ತೆ ಉದಾಹರಣೆಗಾಗಿ ಇದನ್ನು ನೀವು ಪಕ್ಕದಲ್ಲಿರುವ ಮರವನ್ನು ನೋಡಬವುದು. Pixel 3 ಉತ್ತಮವಾದ ಸ್ಕಿನ್ ಟೋನ್ ಜೊತೆಗೆ ತುಂಬ ನಿಖರತೆಯ ಫೋಟೋಗಳನ್ನು ನೀಡುತ್ತದೆ. 

ಈಗ ಈ ಸ್ಪೈಡರ್ ಮ್ಯಾನ್ ಪ್ರತಿಮೆಯನ್ನು ನೋಡಿ ಇದರಲ್ಲಿ Pixel 3a XL ಮುಂದಿದೆ ಹೆಚ್ಚಿನ ಬಣ್ಣ ಮತ್ತು ನಿಖರತೆಯನ್ನು ತೋರುತ್ತದೆ. ಆದರೆ Pixel 3 ಸಹ ನಿಮಗೆ ನ್ಯಾಚುರಲ್ ಕಲರ್ ನೀಡುತ್ತದೆ. ಸ್ಪೈಡರ್ ಮ್ಯಾನ್ ಪ್ರತಿಮೆ ಹಿಂಭಾಗದಲ್ಲಿ ಸೋಫಾದ ಬಟ್ಟೆ ನೋಡಿ. ಎರಡಲ್ಲೂ ಬ್ಯಾಕ್ಗ್ರೌಂಡ್ ಬ್ಲರ್ ಆಗಿದೆ. Pixel 3 ನಿಮಗೆ ಅಷ್ಟಾಗಿ ಬ್ಲರ್ ಮಾಡದೇ ಬ್ಯಾಕ್ಗ್ರೌಂಡ್ ಡೀಟೇಲ್ ನೀಡುತ್ತದೆ. ಒಟ್ಟಾರೆಯಾಗಿ ಇಂಡೋರಲ್ಲಿ Pixel 3a XL ಅದ್ಭುತವಾದ ಶಾಟ್ಗಳನ್ನು ನೀಡುತ್ತದೆ. ಇದರಲ್ಲಿ ತೆಗೆಯುವ ಇಮೇಜ್ಗಳು ವಾಸ್ತವವಾಗಿಲ್ಲವಾದರೂ ನೋಡುಕೆ ಮತ್ತು ನೋಡುಗಾರರಿಗೆ ಆಕರ್ಷಕವಾಗಿ ಕಾಣುತ್ತದೆ. Pixel 3 ಬ್ಯಾಕ್ಗ್ರೌಂಡ್ ಡೀಟೇಲ್ ಜೊತೆಗೆ ನ್ಯಾಚುರಲ್ ಲುಕಿಂಗ್ ಬೇಕಾದವರಿಗಾಗಿ ಸೂಕ್ತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇದರ ವಿಡಿಯೋ ನೋಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :