ಭಾರತದಲ್ಲಿ ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ವೈರ್‌ಲೆಸ್ (Wireless) ಮತ್ತು ವೈರಿಂಗ್ (Wireing) ಆಧಾರದ ಎರಡು ಅತ್ಯುತ್ತಮ ಫೈಬರ್ ಸೇವೆಗಳನ್ನು ಹೊಂದಿದೆ. ಆದರೆ ಇನ್ನೂ ಅನೇಕ ಜನರಿಗೆ ಇವೆರಡರ ನಡುವಿನ ಬೆಲೆ ಮತ್ತು ಫೀಚರ್‌ಗಳ ವ್ಯತ್ಯಾಸಗಳೇನು ಎನ್ನುವುದು ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಈ ಗೊಂದಲವನ್ನು ಕಡಿಮೆ ಮಾಡಲು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಇದರಲ್ಲಿನ ಒಂದೆರಡು ಪ್ರಮುಖ ವ್ಯತ್ಯಾಸ ನೋಡುವುದಾದರೆ ಈಗಾಗಲೇ ಮೇಲೆ ತಿಳಿಸಿರುವಂತೆ Jio Fiber ಅನ್ನು ಫೈಬರ್ ತಾರುಗಳ ಸಹಾಯದಿಂದ ನಿಮ್ಮ ಮನೆ ಅಥವಾ ಆಫೀಸ್ಗಳಿಗೆ ನೀಡಲಾಗುತ್ತದೆ.
ಆದರೆ Jio AirFiber ಕೇವಲ ಒಂದು ಡಿವೈಸ್ ಆಗಿದ್ದು ಇದು ತಾರುಗಳಿಲ್ಲದೆ ನಿಮ್ಮ ಫೋನ್‌ನಲ್ಲಿ ಬರುವ ಡೇಟಾ ಮತ್ತು FM ಹೇಗೆ ಕೆಲಸ ಮಾಡುತ್ತೋ ಹಾಗೆ ಗಾಳಿಯನ್ನು ಆಧರಿಸಿ ಕೆಲಸ ಮಾಡುತ್ತದೆ. ಈ ಎರಡು ಸೇವೆಗಳ ಬೆಲೆಯ ಬಗ್ಗೆ ಮಾತನಾಡುವದಾದರೆ ಕೊಂಚ ಅಧಿಕವಾಗಿರುತ್ತದೆ ಆದರೆ ಇದರಲ್ಲಿ ಅನ್ಲಿಮಿಟೆಡ್ ಕರೆ ಬಳಕೆ, ಡೇಟಾ ಮತ್ತು ಪ್ರೀಮಿಯಂ ಉಚಿತ OTT ಅಪ್ಲಿಕೇಶನ್ ಪ್ರವೇಶದಂತೆ ಹಲವಾರು ಪ್ರಯೋಜನಗಳನ್ನು ಹೊಂದುತ್ತದೆ. ಈ ಮೂಲಕ Jio Fiber vs Jio AirFiber ನಡುವಿನ ಬೆಲೆ ಮತ್ತು ಫೀಚರ್‌ಗಳ ವ್ಯತ್ಯಾಸಗಳೇನು ತಿಳಿಯಿರಿ!
Also Read: ಮನೆಯೊಳಗೆ ಕಾಲಿಟ್ಟ ತಕ್ಷಣ Phone Network ಮಾಯವಾಗುತ್ತಾ? ಹಾಗಾದ್ರೆ ಪರಿಹಾರಕ್ಕಾಗಿ ಈ ಹಂತಗಳನ್ನು ಅನುಸರಿಸಿ!
ಜಿಯೋ ಫೈಬರ್ ಮತ್ತು ಜಿಯೋ ಏರ್‌ಫೈಬರ್ ಎರಡೂ ಉತ್ಪನ್ನಗಳು ತಡೆರಹಿತ ಮತ್ತು ವೇಗದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುತ್ತವೆ. ಆದಾಗ್ಯೂ ಎರಡನೆಯದು ವೈರ್‌ಲೆಸ್ ಸೆಟಪ್‌ನೊಂದಿಗೆ ಬರುತ್ತದೆ. ಏರ್‌ಫೈಬರ್ ಸ್ಟೇಬಲ್ ವೈರ್‌ಲೆಸ್ (Wireless) ಆಕ್ಸೆಸ್ ನೀಡುತ್ತದೆ. ಅಲ್ಲದೆ ಇದು ಬಳಕೆದಾರರಿಗೆ ಪ್ರಯಾಣದಲ್ಲಿರುವಾಗ ಬ್ರಾಡ್‌ಬ್ಯಾಂಡ್ ತರಹದ ಇಂಟರ್ನೆಟ್ ಸಂಪರ್ಕವನ್ನು ನೀಡುತ್ತದೆ. ಜಿಯೋ ಫೈಬರ್ ಸೆಟಪ್, ಹೆಚ್ಚುವರಿ ಮೋಡೆಮ್ ಮತ್ತು ವೈರಿಂಗ್ (Wireing) ಅಗತ್ಯವಿರುವ ಸಂಪೂರ್ಣ ಒಪ್ಪಂದದೊಂದಿಗೆ ಬರುತ್ತದೆ.
ಜಿಯೋ ಏರ್‌ಫೈಬರ್ ಅಸ್ತಿತ್ವದಲ್ಲಿರುವ 5G ನೆಟ್‌ವರ್ಕ್‌ನೊಂದಿಗೆ ಲಭ್ಯವಿದ್ದರೆ ಜಿಯೋಫೈಬರ್ ಸೇವೆಯನ್ನು ಪಡೆಯಲು ಈ ಸೇವೆಯ್ನ್ನು ನೀಡುವ ಪ್ರದೇಶದಲ್ಲಿ ಲಭ್ಯವಿರಬೇಕು. 5G ವೇಗದಲ್ಲಿ ಕಂಟೆಂಟ್ ಪಡೆಯಲು ರಿಲಯನ್ಸ್ ಜಿಯೋ ಇತ್ತೀಚಿನ ಲೇಟೆಸ್ಟ್ ಪ್ರಾಡಕ್ಟ್ ಮೇಲೆ 1Gbps ವರೆಗೆ ವೇಗವನ್ನು ನೀಡುತ್ತದೆ. ಹಾಗೆಯೇ ಬಳಕೆದಾರರಿಗೆ 30Mbps, 100Mbps, 150Mbps, 300Mbps, 500Mbps ಮತ್ತು 1Gbps ಯೋಜನೆಗಳನ್ನು ಆಯ್ಕೆ ಮಾಡಲು ನೀಡುತ್ತದೆ. ರಿಲಯನ್ಸ್ ಜಿಯೋ ಫೈಬರ್ ಕೂಡ 1000 mbps ವೇಗವನ್ನು ನೀಡುತ್ತದೆ. ನಿಮ್ಮ ಹೈ-ಡೆಫಿನಿಷನ್ ಅನುಭವದೊಂದಿಗೆ ಬಳಕೆದಾರರು ಬಯಸಿದಷ್ಟು ಕಂಟೆಂಟ್ ಪಡೆಯಬಹುದು.
ಜಿಯೋ ಏರ್‌ಫೈಬರ್ ಸಂಪರ್ಕವು ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದಲ್ಲಿ ಸರ್ವತ್ರ ಕವರೇಜ್‌ಗಾಗಿ ವೈ-ಫೈ ರೂಟರ್ (5G ಹಾಟ್‌ಸ್ಪಾಟ್ ಸಾಧನ) ನೀಡುತ್ತದೆ. 4K ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಮತ್ತು ವಾಯ್ಸ್ ಸಕ್ರಿಯ ರಿಮೋಟ್ ಪಡೆಯಬಹುದು. ಅಲ್ಲದೆ ಮನರಂಜನೆಯ ಕಂಟೆಂಟ್ ವಿಭಾಗದಲ್ಲಿ AirFiber ಎಲ್ಲಾ ಪ್ರಮುಖ 550+ ಡಿಜಿಟಲ್ ಟಿವಿ ಚಾನೆಲ್‌ಗಳನ್ನು ನೀಡುತ್ತದೆ. ನಿಮಗೆ ಹೊಸ ಜಿಯೋ ಫೈಬರ್ ಕನೆಕ್ಷನ್ ಬೇಕಿದ್ದರೆ ನೀವು 60008-60008 ಸಂಖ್ಯೆಗೆ ಕರೆ ಮಾಡಬಹುದು ಅಥವಾ https://www.jio.com/selfcare/interest/airfiber/ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ಈ ಎಲ್ಲಾ JioAirFiber ಯೋಜನೆಗಳನ್ನು ನೀವು ಅನೇಕ ವರ್ಗಗಳ ಆಧಾರ ಮೇರೆಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳನ್ನು ಪಡೆಯಬಹುದು. ನಿಮಗೆ ಹೊಸ ಜಿಯೋ ಫೈಬರ್ ಕನೆಕ್ಷನ್ ಬೇಕಿದ್ದರೆ ನೀವು 7000570005 ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಇಂದಿನ ಹೊಸ ಆಫರ್ ಮೇಲೆ 2222 ರೂಗಳ ಯೋಜನೆಯನ್ನು ಪಡೆದರೆ ಇನ್‌ಸ್ಟಾಲೇಶನ್‌ಗಾಗಿ ಗ್ರಾಹಕರು 1,000 ರೂಪಾಯಿಗಳ ಸ್ಥಾಪನೆ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.