ಇನ್ಸ್ಟೆಂಟ್ ಮೆಸೇಜಿಂಗ್ ಪ್ಲ್ಯಾಟ್ಫಾರ್ಮ್ WhatsApp ಇದೀಗ iOS ಬಳಕೆದಾರರಿಗೆ ಹೊಸ 2.19.60.26 ಬೀಟಾ ನವೀಕರಣವನ್ನು ಹೊರಡಿಸುತ್ತಿದೆ. ಆದರೆ ಇದರಲ್ಲಿ ನಿಮ್ಮ ಕಾಂಟೆಕ್ಟ್ ಪ್ರೊಫೈಲ್ ಇಮೇಜ್ಗಳನ್ನು ಸೇವ್ ಮಾಡುವ ಆಯ್ಕೆಯನ್ನು ನಿಷೇಧಿಸಿದೆ. ಅಲ್ಲದೆ ಈ ಫೀಚರ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ ಎರಡು ವಾರಗಳ ಹಿಂದೆ ಆಯ್ಕೆಯನ್ನು ಹೊರಡಿಸಿತ್ತು. ಮತ್ತು ಇದೀಗ ಅದರ iOS ಬೀಟಾ ಅಪ್ಲಿಕೇಶನ್ ಬಳಕೆದಾರರಿಗೆ ಇದನ್ನು ಅಳವಡಿಸಲಾಗಿದೆ. ಈ ಸುದ್ದಿ ಮೊದಲ WhatsApp ವೀಕ್ಷಕರಾದ WABetaInfo ಮೂಲಕ ಫೇಸ್ಬುಕ್ ಮಾಲೀಕತ್ವದ ಕಂಪನಿ ಈ ಪ್ರೊಫೈಲ್ ಇಮೇಜ್ ಸೇವ್ ಆಯ್ಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗ ಮಾಡಲಿಲ್ಲ. ಆದರೆ iOS ಬೀಟಾ ಬಳಕೆದಾರರಿಗೆ WhatsApp ಈಗಲೂ ಗ್ರೂಪ್ ಡಿಸ್ಪ್ಲೇ ಇಮೇಜ್ ಮಾತ್ರ ಸೇವ್ ಮಾಡಬವುದಾಗಿದೆ. ಆದರೆ ಅವರ ವೈಯಕ್ತಿಕ ಕಾಂಟೆಕ್ಟ್ ಇಮೇಜ್ ಸೇವ್ ಮಾಡಲು ಸಾಧ್ಯವಾಗುವುದಿಲ್ಲ.
ಇದರ ಮೇಲು ನೀವು ಸೇವ್ ಮಾಡಿಕೊಳ್ಳಬಯಸಿದರೆ ಸ್ಕ್ರೀನ್ಶಾಟ್ ಮೇಲೆ ಅವಲಂಬಿಸಬೇಕಾಗಿದೆ. WhatsApp ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದು ಬೀಟಾ ಪ್ರೋಗ್ರಾಂ ಅನ್ನು ಹೊಂದಿದೆ. ಕಂಪನಿಯು ಬೀಟಾ ಬಳಕೆದಾರರೊಂದಿಗೆ ಮುಂಬರುವ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತದೆ ಮತ್ತು ಅವರಿಂದ ಪ್ರತಿಕ್ರಿಯೆ ತೆಗೆದುಕೊಳ್ಳುತ್ತದೆ. ಮೊದಲನೆಯದಾಗಿ ಆಂಡ್ರಾಯ್ಡ್ ಮತ್ತು iOS ಪ್ಲಾಟ್ಫಾರ್ಮ್ಗಳಲ್ಲಿನ ಬೀಟಾ ಬಳಕೆದಾರರಿಗೆ ಮುಂಬರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊರಡಿಸಲಾಗುತ್ತದೆ ಮತ್ತು ಪೋಸ್ಟ್ ಅಪ್ಲಿಕೇಶನ್ ಅನ್ನು ಸ್ಥಿರವಾದ ಆವೃತ್ತಿಗಳಿಗೆ ಸೇರಿಸಲಾಗುತ್ತದೆ. WhatsApp ಅದರ ಬೀಟಾ ಬಳಕೆದಾರರೊಂದಿಗೆ ಪರೀಕ್ಷಿಸುತ್ತಿರುವುದರ ಇತ್ತೀಚಿನ ವೈಶಿಷ್ಟ್ಯವೆಂದರೆ ಪ್ರೊಫೈಲ್ ಸೇವ್ ಮಾಡುವ ಆಯ್ಕೆಯನ್ನು ನಿಷೇಧಿಸುವುದು.
ಬೇರೆ ಅಥವಾ ನಿಮ್ಮ ಕಾಂಟೆಕ್ಟ್ ಅಲ್ಲಿರುವವರ ಪ್ರೊಫೈಲ್ ಇಮೇಜ್ ಸೇವ್ ಮಾಡಿಕೊಳ್ಳುವುದು ನಿಮ್ಮ ಪ್ರಮುಖ ವಿಷಯವಾಗಿದ್ದರೆ WhatsApp ನ ಬೀಟಾ ಪ್ರೋಗ್ರಾಂನಲ್ಲಿ ಸೇರದಿರಿ. ಅಂದ್ರೆ ಯಾವುದೇ ಹೊಸ ಅಪ್ಡೇಟ್ ಮಾಡಿಕೊಳ್ಳದಿರೆಂದು ನಾವು ಸಲಹೆ ಸೂಚಿಸುತ್ತೇವೆ. ನೀವು ಈಗಾಗಲೇ ಈ ಪ್ರೋಗ್ರಾಂನ ಭಾಗಿಯಾಗಿದ್ದರೆ ನೀವು Google Play Store / Apple App Store ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಪಡೆಯಬೇಕಾಗುತ್ತದೆ. WhatsApp ನ ಸ್ಟೇಟಸ್ ಆವೃತ್ತಿಯು ಈ ವೈಶಿಷ್ಟ್ಯವನ್ನು ಇನ್ನೂ ಸ್ವೀಕರಿಸಿಲ್ಲ. ಆದ್ದರಿಂದ ನೀವು ಅದನ್ನು ಬಳಸುತ್ತಿದ್ದರೆ ಪ್ರೊಫೈಲ್ ಇಮೇಜ್ ಆಯ್ಕೆ ಮಾಡುವಿಕೆಯ ಫೀಚರ್ಗಳನ್ನು ನೀವು ಗಮನಿಸಲಾಗುವುದಿಲ್ಲ.
ಪ್ರೊಫೈಲ್ ಚಿತ್ರ ಸೇವ್ ಮಾಡುವ ಆಯ್ಕೆಯೊಂದಿಗೆ ಕಂಪನಿಯು ತನ್ನ ಐಒಎಸ್ ಬೀಟಾ ಅಪ್ಲಿಕೇಶನ್ನಲ್ಲಿ ಸ್ವಲ್ಪ ಉಪಯುಕ್ತವಾದ ಸೇವೆಗಳ ಸೇರ್ಪಡೆಗಳನ್ನು ಸೇರಿಸಿದೆ.ಅಂದ್ರೆ ನಿಮ್ಮ ಕಾಂಟೆಕ್ಟ್ ಅಲ್ಲಿರುವವವರು ಪ್ರತಿಯೊಬ್ಬರೂ ನಿಮಗೆ ಎಷ್ಟು ಐಟಂಗಳನ್ನು ಅಂದ್ರೆ ಇಮೇಜ್, ವಿಡಿಯೋ, ಆಡಿಯೋ, ಫೈಲ್, ಲೊಕೇಶನ್ಗಳನ್ನು ಕಳುಹಿಸಲಾಗಿದೆ ಎಂಬುದನ್ನು WhatsApp ಈಗ ತೋರಿಸುತ್ತದೆ. ಉದಾಹರಣೆಗೆ ನೀವು ಒಬ್ಬ ವ್ಯಕ್ತಿಯಿಂದ ಏಳು ಫೋಟೋಗಳನ್ನು ಸ್ವೀಕರಿಸಿದರೆ ಅದು ಅವರ ಹೆಸರಿನೇ ಮೇರೆಗೆ ಒಟ್ಟಾರೆಯ ಆಲ್ಬಮ್ ಗಾತ್ರದೊಂದಿಗೆ ಆಲ್ಬಮ್ನ ಒಟ್ಟು ಎಣಿಕೆ ಪ್ರದರ್ಶಿಸಲಾಗುತ್ತದೆ. ಈ ವೈಶಿಷ್ಟ್ಯವನ್ನು ಕೆಲವು ವಾರಗಳ ಹಿಂದೆ Android ಬೀಟಾ ಅಪ್ಲಿಕೇಶನ್ಗೆ ಸೇರಿಸಲಾಗಿದೆ.