ಇದು ಹೊಸ ಇಂದಿನ ಯುವ ವಯಸ್ಸಿನವರ ಫೋಟೋ, ವಿಡಿಯೋ ಮತ್ತು ವಿಡಿಯೋ ಕರೆಗಳನ್ನು ಹಂಚಿಕೆ ಮಾಡುವ ಅಪ್ಲಿಕೇಶನ್ ಇದರ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಜನರೊಂದಿಗೆ ಸಾಮಾಜಿಕವಾಗಿ ಒಂದು ದೊಡ್ಡ ವೇದಿಕೆಯನ್ನು ರಚಿಸಿಕೊಂಡಿದೆ. ಇದರಲ್ಲಿ ಈಗ ಹೊಸ ಫೀಚರ್ಗಳೊಂದಿಗೆ ಬ್ಯುಸಿನೆಸ್ ಮಾಡಿ ಉತ್ತಮ ಹಣವನ್ನು ಪಡೆಯಲು ಸಹ ಅನುಮತಿಸುತ್ತದೆ. ಮುಖ್ಯವಾಗಿ ಯುವಕರು ಸಂಪೂರ್ಣವಾಗಿ ಇದರೊಂದಿಗೆ ಕೊಂಡಿಯಾಗಿರಿಸಿಕೊಂಡಿದ್ದಾರೆ. ಇದರಲ್ಲಿ ವೀಡಿಯೊ ಕರೆಗೆ ಇತ್ತೀಚಿನ Instagram ವಾಯ್ಸ್ ಮೆಸೇಜ್ಗಳಿಂದ ತನ್ನ ವ್ಯಾಪ್ತಿಯನ್ನು ವಿಸ್ತಾರವಾಗಿ ವಿಸ್ತರಿಸಿದೆ. ಇಂದು ಇಲ್ಲಿ ನೀವು ಇನ್ಸ್ಟಾಗ್ರಾಮ್ ನೀವು ತಿಳಿಯಬೇಕಾದ 5 ಅತ್ಯುತ್ತಮವಾದ ಟ್ರಿಕ್ಗಳನ್ನು ತಿಳಿಯೋಣ.
1. ಇನ್ಸ್ಟಾಗ್ರ್ಯಾಮ್ ವೀಡಿಯೊ ಕರೆ ಮಾಡುವಿಕೆ ಸಂವಹನವನ್ನು ಹೆಚ್ಚು ಆಕರ್ಷಕವಾಗಿ ಮತ್ತು ಜನಪ್ರಿಯವಾಗಲು ಲೈವ್ Instagram ನಲ್ಲಿ ಇದೀಗ ವೀಡಿಯೊ ಮೆಸೇಜ್ಗಳನ್ನು ಮಾಡಿ ಕೇವಲ ಮೆಸೇಜ್ ಮಾತ್ರ ಮಾಡುತ್ತಿರಬೇಡಿ. ಹೇಗೆಂದರೆ ನೀವು ವೀಡಿಯೊ ಕರೆ ಮಾಡಲು ಬಯಸುವ ಬಳಕೆದಾರರ ಚಾಟ್ ಮೇಲೆ ಕ್ಲಿಕ್ ಮಾಡಿ ಮೇಲಿನ ಬಲ ಮೂಲೆಯಲ್ಲಿರುವ ವೀಡಿಯೊ ಐಕಾನ್ ಕ್ಲಿಕ್ ಮಾಡಿ ಮತ್ತು ವೀಡಿಯೊ ಕರೆಗಳನ್ನು ಆನಂದಿಸಿ.
2. ಜನರನ್ನು ಮ್ಯೂಟ್ ಮಾಡಿ ದೈನಂದಿನ ಬೇರೊಬ್ಬರ ನಿಮಗೆ ಅವಶ್ಯವಿಲ್ಲದವದರ ಅಥವಾ ನಿಮಗೆ ಇಷ್ಟವಿಲ್ಲದ ಇಮೇಜ್ ಅಥವಾ ವ್ಯಕ್ತಿಯ ಅಕೌಂಟನ್ನು ಅವುಗಳಿಗೆ ತಿಳಿಯದೆಯೇ ಅವುಗಳನ್ನು ಮ್ಯೂಟ್ ಮಾಡಬವುದು. ಹೇಗೆಂದರೆ ಬಳಕೆದಾರನ ಅಕೌಂಟ್ ಮೇನ್ ಮೆನುಗೆ ಹೋಗಿ ಬಲಭಾಗದ ಮೂಲೆಯಲ್ಲಿರುವ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಮ್ಯೂಟ್ ಕ್ಲಿಕ್ ಮಾಡಿ. ಅವರ ಪೋಸ್ಟ್ಗಳು, ಸ್ಟೋರಿ ಅಥವಾ ಎರಡೂ ಪ್ರಕಾರಗಳನ್ನು ಸಹ ನೀವು ಮ್ಯೂಟ್ ಮಾಡಬಹುದು.
3. ನಿಮ್ಮ ಸ್ಟೋರಿಗಳಿಗೆ ಮ್ಯೂಸಿಕ್ ಸೇರಿಸಿ Instagram ಮ್ಯೂಸಿಕ್ ಲೈಬ್ರರಿಯಿಂದ ಸೌಂಡ್ಟ್ರ್ಯಾಕ್ಗಳನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ ಸ್ಟೋರಿಗಳನ್ನು ಇನ್ನಷ್ಟು ಜನರೊಂದಿಗೆ ಪರಿಚಯವಾಗಬವುದು. ಹೇಗೆಂದರೆ ಯಾವುದಾದರೊಂದು ಸ್ಟೋರಿ, ವೀಡಿಯೊ ಅಥವಾ ಫೋಟೋವನ್ನು ಆಯ್ಕೆ ಮಾಡಿ ಅಪ್ಲೋಡ್ ಮಾಡಿ ನಂತರ ಇದರ ಮೇಲ್ಭಾಗದಲ್ಲಿ ಮುಚ್ಚಿದ 'ಸ್ಮಾಲ್' ಕ್ಲಿಕ್ ಮಾಡಿ ಮತ್ತು ನೀಡಿದ ಮ್ಯೂಸಿಕ್ ಸ್ಟಿಕರ್ ಅನ್ನು ಟ್ಯಾಪ್ ಮಾಡಿ ನಿಮಗೆ ಬೇಕಾದ ಹಾಡನ್ನು ಆಯ್ಕೆ ಮಾಡಿ.
4. ಕ್ಲಿಯರ್ ಸರ್ಚ್ ಹಿಸ್ಟರಿ ಅಂದ್ರೆ ಹಿಂದಿನ ನಿಮ್ಮ ಸರ್ಚ್ ರಹಸ್ಯವಾಗಿಡಬೇಡಿ ಯಾಕೆನ್ದರೆ ನಿಮ್ಮ ಫೋನ್ನಲ್ಲಿ ನಿಮ್ಮ ಸ್ನೇಹಿತರು ಸ್ನೂಪ್ ಮಾಡಿದಾಗ ಯಾರ್ಯಾರನ್ನು ಸರ್ಚ್ ಮಾಡಿದ್ದೀರೆನ್ನುವುದು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅದನ್ನು ಮರೆಮಾಡಲು ಸರ್ಚ್ ಹಿಸ್ಟರಿಯನ್ನು ಕ್ಲಿಯರ್ ಮಾಡಿ. ಹೇಗೆಂದರೆ ನಿಮ್ಮ ಪ್ರೊಫೈಲ್ಗೆ ಹೋಗಿ ಸೆಟ್ಟಿಂಗ್ಗಳಿಗೆ ಹೋಗಿ ನಂತರ ಸರ್ಚ್ ಹಿಸ್ಟರಿಯನ್ನು ಟ್ಯಾಪ್ ಮಾಡಿ ಮತ್ತು ಸರ್ಚ್ ಹಿಸ್ಟರಿಯನ್ನು ತೆರವುಗೊಳಿಸಿ.
5. ವಾಯ್ಸ್ ಮೆಸೇಜ್ಗಳನ್ನು ಕಳುಹಿಸುವುದು ದೊಡ್ಡ ಮೆಸೇಜ್ಗಳನ್ನು ಟೈಪ್ ಮಾಡುವ ತೊಂದರೆಯಿಂದ ನಿಮ್ಮನ್ನು ಉಳಿಸುತ್ತದೆ.
ಹೇಗೆಂದರೆ ಚಾಟ್ ಬಾಕ್ಸ್ ತೆರೆದು ಮತ್ತು ಕೆಳಗಿನ 'ಮೈಕ್ ಐಕಾನ್' ಅನ್ನು ಟ್ಯಾಪ್ ಮಾಡಿ ಮತ್ತು ವಾಯ್ಸ್ ಮೆಸೇಜನ್ನು ಕಳುಹಿಸಲು ದೀರ್ಘ ಕಾಲ ಒತ್ತಿ ಹಿಡಿಯಿರಿ. ನಿಮ್ಮ ಮೆಸೇಜ್ ಮುಗಿದ ನಂತರ ಮೈಕ್ ಐಕಾನ್ ಬಿಟ್ಟುಬಿಡಿ ಅದು ಸೆಂಡ್ ಆಗುತ್ತೆ ಇದರಿಂದ ಅರ್ಥ ಕೆಡುವುದಿಲ್ಲ ಮತ್ತು ನಿಮ್ಮ ಸಮಯವು ಬಚಾವ್ ಆಗುತ್ತದೆ.