ವಾಟ್ಸಾಪ್‌ನಲ್ಲಿ ಬರುವ Photo, Video ಡೌನ್ಲೋಡ್ ಮಾಡದೇ ಒಮ್ಮ್ಮೆ ನೋಡಿ ಆಟೋಮೆಟಿಕ್ಕಾಗಿ Delete ಮಾಡೋದು ಹೇಗೆ?
ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ WhatsApp ವಿಶ್ವದ ಶತಕೋಟಿ ಬಳಕೆದಾರಿಗೆ ಹೊಸ ನವೀಕರಣವನ್ನು ನೀಡುತ್ತಿದೆ.
View Once ವೈಶಿಷ್ಟ್ಯವು ವಾಟ್ಸಾಪ್‌ನಲ್ಲಿ Android ಮತ್ತು iOS ಬಳಕೆದಾರರಿಗೆ ಲಭ್ಯವಿದೆ.
WhatsApp ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ವಾಟ್ಸಾಪ್ ವೆಬ್ ಬಳಸುವ ಆಯ್ಕೆಯೂ ಶೀಘ್ರದಲ್ಲೇ ಬರಲಿದೆ.
ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ WhatsApp ವಿಶ್ವದ ಶತಕೋಟಿ ಬಳಕೆದಾರಿಗೆ ಹೊಸ ನವೀಕರಣವನ್ನು ನೀಡುತ್ತಿದೆ. ವಾಟ್ಸಾಪ್‌ನಲ್ಲಿ ಈಗಾಗಲೇ ಅಳಿಸಲಾದ ಸಂದೇಶಗಳನ್ನು ಓದಲು, ಡಿಪಿಯನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು Third Party ಅಪ್ಲಿಕೇಶನ್‌ಗಳು ಲಭ್ಯವಿದೆ. WhatsAppನಲ್ಲಿ ಫೋಟೋ, ವಿಡಿಯೋ ನೋಡಿದ ಮೇಲೆ ಅಟೋಮೆಟಿಕ್ ಡಿಲೀಟ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ Third Party ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಬದಲಿಗೆ ಈ ಆಯ್ಕೆಯೇ ನಿಮ್ಮ ವಾಟ್ಸಾಪ್‌ನಲ್ಲಿದೆ.
ಹೌದು View Once ವೈಶಿಷ್ಟ್ಯವು ವಾಟ್ಸಾಪ್‌ನಲ್ಲಿ Android ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ನೀವು ಯಾವುದೇ ಫೋಟೋ ಅಥವಾ ವಿಡಿಯೋ(Photo and Video)ವನ್ನು ತೆರೆದ ತಕ್ಷಣ ಅದು ಕಣ್ಮರೆಯಾಗುತ್ತದೆ. ಮಾತ್ರವಲ್ಲ ಫೋನ್‌ನ ಮೆಮೊರಿಯಲ್ಲಿ ಎಲ್ಲಿಯೂ ಸಂಗ್ರಹವಾಗುವುದಿಲ್ಲ. ವಾಟ್ಸಾಪ್ ಪರಿಚಯಿಸಿರುವ ಈ ಹೊಸ ಸಿಂಗಲ್ ವೀವಿಂಗ್ ಆಯ್ಕೆಯನ್ನು (Single Viewing) ಹಲವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಕೊನೆಯ ಸೀನ್, ಸ್ಟೇಟಸ್, ಪ್ರೊಫೈಲ್ ಫೋಟೋ ಡೀಟೇಲ್ಸ್ WhatsApp ನಲ್ಲಿ ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಲು ಅನುಮತಿಸುತ್ತದೆ.
ವ್ಯೂ ಒನ್ಸ್ ವೈಶಿಷ್ಟ್ಯವು (View Once Features) ಹೇಗೆ ಕಾರ್ಯನಿರ್ವಹಿಸುತ್ತದೆ?
ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ (ChatBox) ಅನ್ನು ತೆರೆಯಲು ಮತ್ತು ಫೋಟೋ ಅಥವಾ ವಿಡಿಯೋವನ್ನು ಕಳುಹಿಸಲು ಬಯಸಿದರೆ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಫೋಟೋ ಅಥವಾ ವಿಡಿಯೋವನ್ನು ಆಯ್ಕೆ ಮಾಡಿ ಮತ್ತು ವ್ಯೂ ಒನ್ಸ್ ಮೋಡ್ (View Once)ಆಯ್ಕೆಯ ಪಕ್ಕದಲ್ಲಿರುವ Send ಬಟನ್ ಒತ್ತಿರಿ. ಇದರಿಂದ ನೀವು ಅವರಿಗೆ ಕಳುಹಿಸಿದ ಫೈಲ್ ಅನ್ನು ಒಮ್ಮೆ ಮಾತ್ರ ತೆರೆಯಬಹುದು. ಈ ವ್ಯೂ ಒನ್ಸ್ ವೈಶಿಷ್ಟ್ಯವು (View Once Features) ತನ್ನದೇ ಆದ ಅನುಕೂಲಗಳು ಮತ್ತು ಕೆಲವು ಅನಾನುಕೂಲಗಳನ್ನು ಹೊಂದಿದೆ. ಹೊಸ ವೈಶಿಷ್ಟ್ಯದ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ನೀವು ಚಾಟ್ ಅನ್ನು ತೆರೆದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಕಣ್ಮರೆಯಾಗುತ್ತದೆ.
ಈ ಚಾಟ್ ಅಥವಾ ಅದರ ಫೋಟೋವನ್ನು ವಿಡಿಯೋ ಫೋನ್‌ನಲ್ಲಿ ಎಲ್ಲಿಯೂ Save ಆಗಲ್ಲ ಮತ್ತು ನೀವು ಅದನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಲು ಸಹ ಸಾಧ್ಯವಿಲ್ಲ ಎಂಬುವುದು ಬೇಸರದ ಸಂಗತಿ. WhatsAppಗೆ ಮುಂದಿನ ಸಾಲಿನ ನವೀಕರಣಗಳು ಸಿದ್ಧವಾಗಿವೆ. ಶೀಘ್ರದಲ್ಲೇ ಫೇಸ್‌ಬುಕ್(Facebook)ನಲ್ಲಿರುವಂತೆಯೇ ಸಂದೇಶ ಪ್ರತಿಕ್ರಿಯೆ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಇದರ ಜೊತೆಗೆ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ವಾಟ್ಸಾಪ್ ವೆಬ್ ಬಳಸುವ ಆಯ್ಕೆಯೂ ಶೀಘ್ರದಲ್ಲೇ ಬರಲಿದೆ. ಅಂತೆಯೇ Last Seen ಮತ್ತು ಪ್ರೊಫೈಲ್ ಫೋಟೋಗಳ ಹೊಸ ಆಯ್ಕೆ ಬರುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile