ಇಲ್ಲಿನ ಜಿಯೋ, ವೊಡಾಫೋನ್ ಮತ್ತು ಏರ್ಸೆಲ್ನ ಈ ಹೊಚ್ಚಹೊಸ ಪ್ಲಾನ್ಗಳಲ್ಲಿ ಯಾವ ಪ್ಲಾನ್ ಬೆಸ್ಟ್?

Updated on 08-Jan-2018

ರಿಲಯನ್ಸ್ ಜಿಯೋ ಹೊಸ 149 ರೂಪಾಯಿಗಳಲ್ಲಿ ಲಭ್ಯವಿದೆ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾವನ್ನು ಪಡೆಯಬಹುದು. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆಗಳನ್ನು ಒದಗಿಸಲಾಗುವುದು. ಈ ಯೋಜನೆಯ ವ್ಯಾಲಿಡಿಟಿ ಕುರಿತು ನೀವು ಮಾತನಾಡಿದರೆ ಈ ಯೋಜನೆ ಮಾನ್ಯತೆ 28 ದಿನಗಳಿಗಿದ್ದು 28GB ಯಾ 4G ಡೇಟಾ ಈ ಯೋಜನೆಯಲ್ಲಿದೆ. 

ವೋಡಫೋನಿನ ಈ ಹೊಸ 179 ರೂಪಾಯಿಗಳಲ್ಲಿ ಕೆಲವು ಮುಖ್ಯಾಂಶಗಳಿವೆ. ಮೊದಲನೆಯದಾಗಿ ಇದು 3G ಅಥವಾ 2G ಪ್ಯಾಕ್ನೊಂದಿಗೆ 2G ಸ್ಪೀಡ್ನೊಂದಿಗೆ ಮಾತ್ರ ಅನ್ಲಿಮಿಟೆಡ್ ಡೇಟಾ ಲಭ್ಯವಿದೆ. ಎರಡನೆಯದಾಗಿ ಅನ್ಲಿಮಿಟೆಡ್ ಕರೆಗಳು ದೈನಂದಿನ ಮತ್ತು ವಾರದ ಮಿತಿಯೊಂದಿಗೆ ಬರುತ್ತವೆ. ಬಳಕೆದಾರರು ದಿನಕ್ಕೆ 250 ಉಚಿತ ನಿಮಿಷ ಮತ್ತು ವಾರಕ್ಕೆ 1000 ನಿಮಿಷಗಳನ್ನು ಪಡೆಯುತ್ತಾರೆ. ಅದಕ್ಕಿಂತ ಹೆಚ್ಚಿನ ಕರೆಗಳಿಗೆ ನಿಮಿಷಕ್ಕೆ 30 ಪೈಸೆಯಂತೆ ವಿಧಿಸಲಾಗುತ್ತದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.

ಏರ್ಸೆಲ್ನ ಈ 154 ರೂಪಾಯಿಯಲ್ಲಿನ ಪ್ಯಾಕ್ನ ಮಾನ್ಯತೆಯು 28 ದಿನಗಳಿದ್ದು ಈ ಪ್ಯಾಕ್ನಿಂದ ಪುನರ್ಭರ್ತಿಕಾರ್ಯದೊಂದಿಗೆ ಗ್ರಾಹಕರು ಅನ್ಲಿಮಿಟೆಡ್ ಧ್ವನಿ ಕರೆಗಳ ಅನುಕೂಲತೆಯನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ದಿನಕ್ಕೆ 2GB ಡೇಟಾವನ್ನು ಬಳಸುತ್ತಾರೆ. ಈ ರೀತಿಯಾಗಿ ಗ್ರಾಹಕರು ಒಟ್ಟಾರೆ 56GB ಡೇಟಾ ಕೇವಲ ರೂ 154 ರಲ್ಲಿ ಬಳಸಲು ಸಾಧ್ಯವಾಗುತ್ತದೆ. ಅಂದರೆ ಪ್ರತಿದಿನ 100SMS  ಈ ಪ್ಯಾಕ್ ಕೂಡ ಏರ್ಸೆಲ್ನ ನೆಟ್ವರ್ಕ್ನಲ್ಲಿ ರೋಮಿಂಗ್ನಿಂದ ಮುಕ್ತವಾಗಿರುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :