ಇಂದಿನ ದಿನಗಳಲ್ಲಿ ನಿಮಗೀಗಾಗಲೇ ತಿಳಿದಿರುವಂತೆ ಭಾರತೀಯ ಟೆಲಿಕಾಂ ಉದ್ಯಮದ ಭೂದೃಶ್ಯವನ್ನು ರಿಲಯನ್ಸ್ ಜಿಯೋ ಪೂರ್ಣವಾಗಿ ಬದಲಿಸಿದೆ. ಇದರಿಂದಾಗಿ ಭಾರತಲ್ಲಿರುವ ಬೇರೆ ಟೆಲಿಕಾಂ ಆಪರೇಟರ್ಗಳು ಹೆಚ್ಚು ಪ್ರತಿಸ್ಪರ್ಧಿಗಳಾಗಿ ನಿಂತಿವೆ. ಇದರ ಮಧ್ಯೆ ರಿಲಯನ್ಸ್ ಜಿಯೋ 49 ರೂಗಳ ಅತಿ ಕಡಿಮೆಯ ಪ್ಲಾನನ್ನು ಬಿಟ್ಟು ಇನ್ನು ಬಿರುಗಾಳಿ ಎಬ್ಬಿಸಿದೆ. ಈ ರಿಲಯನ್ಸ್ ಜಿಯೋವಿನ ಪ್ಲಾನ್ ತಮ್ಮ ಗ್ರಾಹಕರಿಗೆ ಒಂದು ಬ್ಲಾಕ್ಬಸ್ಟರ್ ಹಿಟ್ ಆಗಿ ಮಾರ್ಪಟ್ಟಿದೆ.
ಮತ್ತು ಈಗ ಇತರ ಟೆಲ್ಕೊಗಳು ತಮ್ಮ ತಮ್ಮ ಗ್ರಾಹಕರಿಗೆ ಇದೇ ರೀತಿಯ ಪ್ಲಾನ್ಗಳನ್ನು ನೀಡಲು ಪ್ರಾರಂಭಿಸಿವೆ. ಅದರಲ್ಲಿ ಮುಖ್ಯವಾಗಿ ವೊಡಾಫೋನ್ ಇತ್ತೀಚೆಗೆ 47 ರೂಗಳ ಹೊಸ ಪ್ರಿಪೇಡ್ ರೀಚಾರ್ಜ್ ಪ್ಯಾಕ್ಗಳನ್ನು ಮತ್ತು ಏರ್ಟೆಲ್ ಸಹ 47 ರೂಗಳ ಹೊಸ ಪ್ರಿಪೇಡ್ ರೀಚಾರ್ಜ್ ಪ್ಯಾಕ್ಗಳನ್ನು ಬಿಡುಗಡೆ ಮಾಡಿವೆ. ಇಲ್ಲಿ ಇವುಗಳ ಸಂಪೂರ್ಣವಾದ ಹೋಲಿಕೆಯನ್ನು ನೋಡೋಣ.
ರಿಲಯನ್ಸ್ ಜಿಯೋವಿನ 49 ರೂಗಳ ಪ್ರಿಪೇಡ್ ಪ್ಲಾನ್: ಜಿಯೋ ಈ 49 ರೂಗಳ ಪ್ಲಾನ್ ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದ್ದು ಈ ಯೋಜನೆಯಲ್ಲಿ ಬಳಕೆದಾರರಿಗೆ 1GB ಯ 4G ಡೇಟಾ, ಅನ್ಲಿಮಿಟೆಡ್ ಸ್ಥಳೀಯ ಮತ್ತು STD ವಾಯ್ಸ್ ಕರೆಗಳು (VoLTE ಕರೆಗಳು) ಮತ್ತು 50 SMS ಗಳನ್ನು ಉಚಿತವಾಗಿ ನೀಡುತ್ತದೆ. ಅದೇ ರೀತಿಯಲ್ಲಿ ಈ ಪ್ಯಾಕ್ನ ವ್ಯಾಲಿಡಿಟಿ 28 ದಿನಗಳಾಗಿದ್ದು ಹೆಚ್ಚುವರಿಯಾಗಿ ಈ ಯೋಜನೆಯು ಜಿಯೋ ಅಪ್ಲಿಕೇಶನ್ಗಳ ಪರಿಭ್ರಮಣಕ್ಕೆ ಪ್ರವೇಶವನ್ನು ನೀಡುತ್ತದೆ. 1GB ಬಳಕೆಯ ನಂತರ ಇದರ ವೇಗ 64Kbps ಗೆ ಕಡಿಮೆಯಾಗುತ್ತದೆ.
ವೊಡಾಫೋನಿನ 47 ರೂಗಳ ಪ್ರಿಪೇಡ್ ಪ್ಲಾನ್: ವೊಡಾಫೋನ್ ಇತ್ತೀಚೆಗೆ ರಿಲಯನ್ಸ್ ಜಿಯೋವಿಗೆ ಠಕ್ಕರ್ ನೀಡಲು ಅದಕ್ಕಿಂತ 2 ರೂಪಾಯಿ ಕಡಿಮೆ ಬೆಲೆಯ 47 ರೀಚಾರ್ಜ್ ಪ್ಯಾಕನ್ನು ಬಿಡುಗಡೆ ಮಾಡಿದೆ. ಈ ಹೊಸ 47 ಪ್ರಿಪೇಡ್ ರೀಚಾರ್ಜ್ ಪ್ಲಾನಲ್ಲಿ ನಿಮಗೆ 125 ನಿಮಿಷಗಳು ಸ್ಥಳೀಯ ಮತ್ತು STD ವಾಯ್ಸ್ ಕರೆಗಳನ್ನು ಮತ್ತು 50 ಸ್ಥಳೀಯ ಮತ್ತು ರಾಷ್ಟ್ರೀಯ SMS ಗಳೊಂದಿಗೆ 3G / 4G ಯ 500MB ಯ ಡೇಟಾವನ್ನು ನೀಡುತ್ತದೆ. ಈ ಪ್ಯಾಕ್ ವ್ಯಾಲಿಡಿಟಿಯು 28 ದಿನಗಳಾಗಿವೆ. ಈ ಪ್ಯಾಕ್ ಗುಜರಾತ್, ಹಿಮಾಚಲ ಬಿಹಾರ, ಜಾರ್ಖಂಡ್, ಚೆನ್ನೈ, ಛತ್ತೀಸ್ಗಢ, ಕೊಲ್ಕತ್ತಾ ಮತ್ತು ಮಧ್ಯಪ್ರದೇಶದಂತಹ ವಲಯಗಳನ್ನು ಒಳಗೊಂಡು ಇಲ್ಲಿ 48 ರೂಗಳ ಪ್ಲಾನಿನ ರೂಪದಲ್ಲಿ ಲಭ್ಯವಿದೆ.
ಏರ್ಟೆಲ್ 47 ರೂಗಳ ಪ್ರಿಪೇಡ್ ಪ್ಲಾನ್: ಭಾರ್ತಿ ಏರ್ಟೆಲ್ ರೂ 47 ಯೋಜನೆ ಇದು 150 ನಿಮಿಷಗಳ ಸ್ಥಳೀಯ ಮತ್ತು STD ಧ್ವನಿ ಕರೆಗಳನ್ನು ಒದಗಿಸುತ್ತದೆ. 50 ಸ್ಥಳೀಯ ಮತ್ತು STD SMS ಗಳು ಮತ್ತು 500MB 3G / 4G ಡೇಟಾವನ್ನು ನೀಡುತ್ತದೆ. ಈ ಯೋಜನೆಗೆ ಮಾನ್ಯತೆಯ ಅವಧಿಯು 28 ದಿನಗಳು. ಏರ್ಟೆಲ್ ರೂ. 47 ವೊಡಾಫೋನ್ ಮತ್ತು ಜಿಯೊ ಜೊತೆ ಲೀಗ್ ಪಡೆಯಲು ಯೋಜನೆ. ವೊಡಾಫೋನ್ಗೆ ಹೋಲಿಸಿದರೆ ಭಾರ್ತಿ ಏರ್ಟೆಲ್ ಕೂಡಾ ಈ ಯೋಜನೆಯನ್ನು ಪ್ರತಿ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವ ಬಳಕೆದಾರರನ್ನು ಪ್ರೇರೇಪಿಸಲು ಪರಿಚಯಿಸಿತು.