ಜಿಯೋ ತಂದಿದೆ ತನ್ನ ಹಳೆಯ 149 ಪ್ಲಾನ್ ಹೊಸ ಅಪ್ಡೇಟ್ನೊಂದಿಗೆ ಓಲ್ಡ್ ಈಸ್ ಗೋಲ್ಡ್!

Updated on 03-Oct-2017

ಭಾರತದಲ್ಲಿ ಸದ್ಯಕ್ಕೆ ಅತಿದೊಡ್ಡ ದಿಗ್ಗಜನಾದ ಜಿಯೋ ಈಗ ಭಾರತೀಯ ಜನತೆಗಾಗಿ ಹೆಚ್ಚಿನ ಲಾಭವನ್ನು ಮಾಡಿಕೊಡಲು ಜಿಯೋ ಈಗ ಮುಂದಾಗಿದ್ದು ಜಿಯೋ ತಂದಿದೆ ತನ್ನ ಹಳೆಯ 149 ಪ್ಲಾನ್ ಹೊಸ ರೂಪದಲ್ಲಿ ಹೊರಹೊಮ್ಮಿ ಓಲ್ಡ್ ಈಸ್ ಗೋಲ್ಡ್ ಎಂಬ ಮಾತನ್ನು ನೆನೆಪಿಸಿದೆ.

ಈಗ ಜಿಯೋ ನೀಡುತ್ತಿದೆ 149 ನಲ್ಲಿ 28 ದಿನಗಳ ವ್ಯಾಲಿಡಿಟಿ ಮತ್ತು ಅನ್ಲಿಮಿಟೆಡ್ ಡಾಟಾದೊಂದಿಗೆ ಸದ್ಯಕ್ಕಿಂತ ಹೆಚ್ಚು ಕಾಲಿಂಗ್ ಸೌಲಭ್ಯ. ಈ ಪ್ಲಾನಿನಲ್ಲಿ ನೀಡುವ 28 ದಿನಗಳ ವ್ಯಾಲಿಡಿಟಿ ಅಷ್ಟಾಗಿ ವಿಶೇಷವೆನ್ನಲ್ಲ. ಏಕೆಂದರೆ ಈ ವ್ಯಾಲಿಡಿಟಿ ಈಗ ಮಾರುಕಟ್ಟೆಯಲ್ಲಿರುವ ಎಲ್ಲಾ ಟೆಲಿಕಾಂ ಅಪರೇಟರ್ಗಳು ನೀಡುತ್ತಿದೆ.

ಜಿಯೋವಿನ ಡೇಟಾದ ಬಗ್ಗೆ ನೋಡಿದರೆ ಈಗ ಸುಮಾರು ದಿನಕ್ಕೆ 2GB ಯಾ 4G ಡೇಟಾವನ್ನು ನೀಡಿದ್ದು 2GB ಅದೇ ದಿನದಲ್ಲಿ ಮುಗಿದೋದರೆ ನಿಮಗೆ 128kbps ವೇಗದಲ್ಲಿ ಅನ್ಲಿಮಿಟೆಡ್ ಡೇಟಾವನ್ನು ನೀವು ಉಪಯೋಗಿಸಬವುದು.ಅಂದ್ರೆ ನಿಮ್ಮ 2GB ನಂತರ ನಿಮ್ಮ 4G ಸ್ಪೀಡ್ 128kbps ನಲ್ಲಿ ನಡೆಯುತ್ತದೆ.

ಜಿಯೋವಿನ ಆಫರ್ನಲ್ಲಿ ಅನ್ಲಿಮಿಟೆಡ್ ಕಾಲಿಂಗಿಗೆ ಬ್ರೇಕ್ (ಇದು ಕೆಲ ದುರ್ಬಳಕೆ ಮತ್ತು ತೊಂದರೆಗೊಳಪಟ್ಟ ಕಾರಣದಿಂದಾಗಿ) ಹಾಕಿ ದಿನಕ್ಕೆ 300 ನಿಮಿಷಗಳ ಉಚಿತ ಕರೆಯನ್ನು ನೀಡಲಾಗಿದೆ ಎಂಬ ಸುದ್ದಿ ಹರಡಿದೆ.

ಅಲ್ಲದೆ ಜಿಯೋ ಇದೇ ದೀಪಾವಳಿಯ ಒಳಗೆ ತನ್ನ ಎಲ್ಲಾ ಬಳಕೆದಾರರಿಗೆ ಈ ಪ್ಲಾನನ್ನು ಮಾರುಕಟ್ಟೆಯಲ್ಲಿ ನೀಡಲಿದೆ. ಜಿಯೋವಿನ ಈ ಪ್ಲಾನ್ Airtel, Idea, Vodafone ಮತ್ತು BSNL ಕೂಡ ಅನ್ಲಿಮಿಟೆಡ್ ಪ್ಲ್ಯಾನ್ಸ್ ಅನ್ನು ಪರಿಚಯಿಸಲಾಯಿತು. ಆದರೆ ಜಿಯೋ ಅನ್ಲಿಮಿಟೆಡ್ 4G ಡೇಟಾ ಪರಿಚಯಿಸಿದ ಪ್ರಥಮ ಟೆಲಿಕಾಂ ಆಗಿದೆ.

Rs. 149 Plan

Plan Validity 28 Days          
Data Usage 2GB, 4G Data/Month
Voice Calling 300 Minuts free to all networks

 

ಸೋರ್ಸ್

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :