ಇದನ್ನು ನೀವು ಮನೆ, ಅಂಗಡಿ, ಮಾಲ್, ಮತ್ತು ಕಚೇರಿಗಳಲ್ಲಿ ಬಳಸಲು ಉತ್ತಮವಾಗಿದೆ
ಭಾರತದಲ್ಲಿ ಡೇಟಾ ರಾಜನಾಗಿರುವ ರಿಲಯನ್ಸ್ ಜಿಯೋ ಇಂದು ವೊಡಾಫೋನ್, ಏರ್ಟೆಲ್, ಐಡಿಯಾ ಮುಂತಾದ ಇತರ ಟೆಲಿಕಾಂ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಪ್ರತಿಯೊಂಬ್ಬರು ಇಷ್ಟಪಡುವ ಅಚ್ಚುಮೆಚ್ಚಿನ ಮತ್ತು ಅತ್ಯುತ್ತಮವಾದ ಕೊಡುಗೆಗಳ ಕಾರಣದಿಂದಾಗಿ ವಾಯ್ಸ್ ಕರೆ ಮತ್ತು ಅನ್ಲಿಮಿಟೆಡ್ 4G ಡೇಟಾ ಸೇವೆಗಳನ್ನು ಒಳಗೊಂಡಿದೆ. ಈಗ ಮತ್ತೊಂಮ್ಮೆ ಟೆಲಿಕಾಂ ಆಪರೇಟರ್ಗಳಿಗೆ ತನ್ನತ್ತ ನೋಡಲು ಜಿಯೋ ಮೂರು ಹೊಸ 699, 2099, 4199 ಯೋಜನೆಗಳನ್ನು ಕಡಿಮೆ ಬೆಲೆಗೆ ಅತಿ ಹೆಚ್ಚು ಪ್ರಯೋಜನಗಳೊಂದಿಗೆ ತಂದಿದೆ.
ರಿಲಯನ್ಸ್ ಜಿಯೋ ಈಗ ಜಿಯೋಲಿಂಕ್ ಎಂಬ ಹೆಸರನ್ನು ಒದಗಿಸುತ್ತಿದೆ. ಇದು ಒಳಾಂಗಣದ 4G WiFi ಹಾಟ್ಸ್ಪಾಟ್ ಹೈ ಸ್ಪೀಡ್ ಇಂಟರ್ನೆಟನ್ನು ನೀಡುತ್ತದೆ. ಮತ್ತು ಇದನ್ನು ನೀವು ಮನೆ, ಅಂಗಡಿ, ಮಾಲ್, ಮತ್ತು ಕಚೇರಿಗಳಲ್ಲಿ ಬಳಸಲು ಉತ್ತಮವಾಗಿದೆ. ಈ JioLink ಅಧಿಕೃತವಾಗಿ ಶೀಘ್ರದಲ್ಲೇ ಪ್ರಾರಂಭಿಸಲು ನಿರೀಕ್ಷಿಸಲಾಗಿದೆ. ಇದರ ಮುನ್ನೋಟ ಪ್ರಸ್ತಾಪದಲ್ಲಿ ಸದ್ಯಕ್ಕೆ ಪರೀಕ್ಷೆಗಾಗಿ ಕೆಲವು ಪ್ರದೇಶಗಳಲ್ಲಿ ಸುಮಾರು 2500 ರೂಗಳ ಬೆಲೆಯಲ್ಲಿ ಲಭ್ಯವಾಗುವ ವರದಿಯಾಗಿದೆ. ರಿಲಯನ್ಸ್ ಜಿಯೋಲಿಂಕ್ ಹೊಂದಿರುವವರು ಈ ಮೂರು ಹೊಸ ಯೋಜನೆಗಳನ್ನು ಪಡೆಯಬಹುದು.
ಮೊದಲ ಪ್ಲಾನ್ 699 ರೂನಲ್ಲಿ 28 ದಿನಗಳ ಮಾನ್ಯತೆ ಇರುತ್ತದೆ. ಅಲ್ಲಿ 140GB ಡೇಟಾವನ್ನು 5GB ದೈನಂದಿನ ಮಿತಿಯನ್ನು ಪಡೆದುಕೊಳ್ಳಬಹುದು. ಎರಡನೆಯ ಯೋಜನೆಯು 2099 ರೂಗಳ ಆಗಿದ್ದು ಇದು 98 ದಿನಗಳ ಅವಧಿಯೊಂದಿಗೆ 5GB ದೈನಂದಿನ ಡೇಟಾವನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ದೈನಂದಿನ ಮಿತಿ ಇಲ್ಲಿ ನೀವು 64Kbps ವೇಗದಲ್ಲಿ ಬ್ರೌಸಿಂಗ್ ಮುಂದುವರಿಸಬಹುದು. ಮೂರನೇ ಯೋಜನೆ 4199 ರೂಗಳ ಮತ್ತು 5GB ದೈನಂದಿನ ಡೇಟಾವನ್ನು 196 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
ಎಲ್ಲಾ ಯೋಜನೆಗಳು ಜಿಯೋ ಅಪ್ಲಿಕೇಶನ್ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ಬರುತ್ತವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದಾಗ್ಯೂ ಈ ಯೋಜನೆಗಳು ಡೇಟಾಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ನಿಮಗೆ ಯಾವುದೇ ರೀತಿಯ ವಾಯ್ಸ್ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿರುವುದಿಲ್ಲ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile