ಈಗ ಐಡಿಯಾ ಸೆಲ್ಯುಲರ್ ಭಾರ್ತಿ ಏರ್ಟೆಲ್ ನಂತೆ 399 ರೂ ಪ್ಲಾನಿನಲ್ಲಿದೆ ಅನ್ಲಿಮಿಟೆಡ್ ಧ್ವನಿ ಕರೆ ಮತ್ತು ದಿನಕ್ಕೆ 1GB 4G ಡೇಟಾ.

Updated on 24-Oct-2017

ಭಾರತೀಯ ಐಡಿಯಾ ಸೆಲ್ಯುಲಾರ್ ಇಂದು ದೇಶದಾದ್ಯಂತ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಹೊಸ ರೇಟ್ ಪ್ಲಾನನ್ನು ರಚಿಸಿದೆ. ಈ ಯೋಜನೆಯನ್ನು ಐಡಿಯಾ ಪೋಸ್ಟ್ಪೇಯ್ಡ್ ನೆಟ್ವರ್ಕ್ಗೆಗೆ ಸೇರಲು ಬಯಸುವ ಹೊಸ ಬಳಕೆದಾರರಿಗೆ ಹೆಚ್ಚು ಮಾನ್ಯವಾಗಿದೆ. ಈ ಯೋಜನೆಯಲ್ಲಿ ಏನಿದೆ ಇದರ ಪ್ರಯೋಜನಗಳೇನು ಎಂದು ಮೊದಲು ಚರ್ಚೆಸೋಣ. ಐಡಿಯಾ ಸೆಲ್ಯುಲರ್ನಿಂದ 399 ರೂಗಳ ಈ ಹೊಸ ಪೋಸ್ಟ್ಪೇಯ್ಡ್ ಪ್ಲಾನ್ ಸಂಪೂರ್ಣ ಒಂದು ಬಿಲ್ಲಿಂಗ್ ಸೈಕಲ್ಗಾಗಿ ಅಂದರೆ ದಿನಕ್ಕೆ ಅನ್ಲಿಮಿಟೆಡ್ ಕರೆ ಮತ್ತು 1GB ಯಾ ಡೇಟಾವನ್ನು ನೀಡುತ್ತದೆ. 

ಇದು ಅತ್ಯುತ್ತಮ ಯೋಜನೆ ಮತ್ತು ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಇದು ಮೊದಲನೆಯದಾಗಿದೆ. ಇದಕ್ಕೆ ವಿರುದ್ಧವಾಗಿ ಭಾರ್ತಿ ಏರ್ಟೆಲ್ 399 ರೂನಲ್ಲಿ 10GBಯನ್ನು ಪೋಸ್ಟ್ಪೇಯ್ಡ್ ಯೋಜನೆ ಬಳಕೆದಾರರಿಗೆ ನೀಡುತ್ತಿದೆ. ಐಡಿಯಾ ಯೋಜನೆಯೊಂದಿಗೆ ಧ್ವನಿ ಕರೆಮಾಡುವಿಕೆಯ ಲಾಭಗಳ ಕುರಿತಾಗಿ ಮಾತನಾಡುವುದಾದರೆ ಐಡಿಯಾ ಸೆಲ್ಯುಲಾರ್ ನಿಮಗೆ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒದಗಿಸುತ್ತಿದೆ. ಅಲ್ಲದೆ ಐಡಿಯಾ ಬಳಕೆದಾರರ ಸಿಮ್ ರಿಜಿಸ್ಟರಾದ ರಾಜ್ಯದಿಂದ ಯಾವುದೇ ನೆಟ್ವರ್ಕ್ಗೆಗೆ ಕರೆಗಳನ್ನು ಮಾಡಬಹುದು. 

ಅಲ್ಲದೆ ಒಳಬರುವ ರೋಮಿಂಗ್ (Incomming) ಕರೆಗಳು ಈ ಯೋಜನೆಯಲ್ಲಿ ಫ್ರೀಯಾಗಿರುತ್ತವೆ. ಆದರೆ ಹೊರಹೋಗುವ ರೋಮಿಂಗ್ ಕರೆಗಳನ್ನು ಸಾಮಾನ್ಯ ಕರೆ ದರಗಳನ್ನು ವಿಧಿಸಲಾಗುವುದು. ಏರ್ಟೆಲ್ನ 399 ಯೋಜನೆ ಏರ್ಟೆಲ್ನಿಂದ ಈ ಯೋಜನೆಯನ್ನು ಬೇರ್ಪಡಿಸುವ ಮಾಹಿತಿಯಂತೆ ಇಡೀ ಬಿಲ್ಲಿಂಗ್ ಸೈಕಲ್ಗೆ ದಿನಕ್ಕೆ 100 SMS ಸಹ ನೀಡುತ್ತದೆ.

ಐಡಿಯಾ ಸೆಲ್ಯುಲಾರ್ನಿಂದ ವೆಬ್ಸೈಟ್ನಿಂದ ಹೊಸ ಪೋಸ್ಟ್ಪೇಯ್ಡ್ ಸಂಪರ್ಕಕ್ಕಾಗಿ ಆದೇಶಿಸುವ ಮೂಲಕ ಗ್ರಾಹಕರು ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಆದ್ದರಿಂದ ಹೊಸ ಪೋಸ್ಟ್ಪೇಯ್ಡ್ ಕನೆಕ್ಷನ್ ಪಡೆಯಲು ನಿಮ್ಮ ಪಿನ್ ಕೋಡ್ ಮತ್ತು ವಿಳಾಸವನ್ನು ನೀಡಿ ಮತ್ತು ನಂತರ ಐಡಿಯಾ ಕಾರ್ಯನಿರ್ವಾಹಕ ಮತ್ತಷ್ಟು ಹಂತಗಳಿಗಾಗಿ ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ. ನಿಮ್ಮ ವಿವರಗಳ ಪೋಸ್ಟ್ ಪರಿಶೀಲನೆಯಾ ನಂತರ ಐಡಿಯಾ ನಿಮ್ಮ ಮನೆ ಬಾಗಿಲಿಗೆ ಸಿಮ್ ಕಾರ್ಡ್ ತಲುಪಿಸುತ್ತದೆ. ಮತ್ತು ಅದೇ ಸಮಯದಲ್ಲಿ ನಿಮ್ಮ ಡಾಕ್ಯುಮೆಂಟ್ಗಳನ್ನು ಪುರಾವೆಯಾಗಿ ಸಲ್ಲಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. 

ಅಲ್ಲದೆ ಐಡಿಯಾ ಸೆಲ್ಯುಲಾರ್ನಿಂದ ಈ ಹೊಸ ಯೋಜನೆ ದೇಶದಾದ್ಯಂತದ ಎಲ್ಲಾ ನಗರಗಳಲ್ಲಿ ಈಗಾಗಲೇ ಮಾನ್ಯವಾಗಿದೆ. ಐಡಿಯಾ ಸೆಲ್ಯುಲರ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹೊಸ ಪೋಸ್ಟ್ಪೇಡ್ ಸಂಪರ್ಕಕ್ಕಾಗಿ ನೀವು ಆದೇಶಿಸಬಹುದು. ಇದಲ್ಲದೆ ಬಳಕೆದಾರರು ಇತರ ಯೋಜನೆಗಳ ಮೂಲಕ ಈ ಯೋಜನೆಯಡಿಯಲ್ಲಿ ಐಡಿಯಾಗೆ ಪೋರ್ಟ್-ಇನ್ ಮಾಡಬಹುದು. ಅಲ್ಲದೆ ಐಡಿಯಾ ಇದೇ ರೀತಿಯಲ್ಲಿ ಇನ್ನು ಹಲವಾರು ಪ್ಲಾನ್ಗಳನ್ನು ರಾಜ್ಯಕ್ಕೆ ತಕ್ಕಂತೆ ನೀಡಿದೆ ಒಮ್ಮೆ ಇದರ ಬಗ್ಗೆ ಓದಬವುದು.

 

ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :