ಐಡಿಯಾ ಸೆಲ್ಯುಲರ್ ನೆಟ್ವರ್ಕ್ ಈಗ ದೇಶದಲ್ಲಿ 2.6 ದಶಲಕ್ಷ ಸೈಟ್ಗಳೊಂದಿಗೆ ವಿಸ್ತರಿಸಿದೆ.!!

Updated on 19-Sep-2017

ಐಡಿಯಾ ಸೆಲ್ಯುಲರ್ ಕಂಪನಿಯಾ ಪ್ರಕಾರ ಕಳೆದ 12 ತಿಂಗಳುಗಳಲ್ಲಿ ಸರಿ ಸುಮಾರು 50,000 ಕ್ಕೂ ಹೆಚ್ಚು ಬ್ರಾಡ್ಬ್ಯಾಂಡ್ ಸೈಟ್ಗಳಿಗೆ ಸಂಪರ್ಕವನ್ನು ಹೊಂದಿದ್ದಾರೆ. ಅಲ್ಲದೆ ಸುಮಾರು 5,888 ನಗರ ಮತ್ತು ಹಳ್ಳಿ ಪ್ರದೇಶವನ್ನು ಒಳಗೊಂಡಿತ್ತು. ಈಗ ಇದು ಒಟ್ಟಾರೆಯಾಗಿ 1,05,755 ಹಳ್ಳಿಗಳನ್ನು ಒಳಗೊಂಡಿದೆ ಮತ್ತು ದೇಶದ ಜನಸಂಖ್ಯೆಯ ಬಳಕೆದಾರರ ಸುಮಾರು 45% ಪ್ರತಿಶತವನ್ನು ತಲುಪುತ್ತದೆ.

ಐಡಿಯಾ ಸೆಲ್ಯುಲರ್ ದೇಶಾದ್ಯಂತ ತಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಿದೆ. ಮತ್ತು ಅದರ ಸೈಟ್ಗಳ ಸಂಖ್ಯೆ ಸುಮಾರು 260,000 ಕ್ಕೆ ಹೆಚ್ಚು ಏರಿಕೆಯಾಗಿದೆ. ಆದ್ದರಿಂದ ಈಗಾಗಲೇ ದೇಶದ 50% ಪ್ರತಿಶತ ಸೈಟ್ಗಳು ಮೊಬೈಲ್ ಬ್ರಾಡ್ಬ್ಯಾಂಡ್ ಸೇವೆಗಳನ್ನು ಹೊಂದಿವೆ. ಐಡಿಯಾ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಇದನ್ನು ಘೋಷಿಸಿತು.

ಕಂಪನಿಯ ಪ್ರಕಾರ ಅವರು ಕಳೆದ 12 ತಿಂಗಳುಗಳಲ್ಲಿ ಸುಮಾರು 50,000 ಬ್ರಾಡ್ಬ್ಯಾಂಡ್ ಸೈಟ್ಗಳನ್ನು ಸೇರಿಸಿದ್ದಾರೆ. ಇದರಲ್ಲಿ ಒಟ್ಟಾರೆಯಾಗಿ 5,888 ನಗರಗಳನ್ನು ಒಳಗೊಂಡಿದೆ. ಇದು ಸುಮಾರು 1,05,755 ಹಳ್ಳಿಗಳನ್ನು ಆವರಿಸುತ್ತದೆ ಮತ್ತು ದೇಶದ ಜನಸಂಖ್ಯೆಯ 45% ಕ್ಕಿಂತ ಹೆಚ್ಚು ಪ್ರತಿಶತದಷ್ಟು ತಲುಪುತ್ತದೆ.

2018 ರ ಹಣಕಾಸು ವರ್ಷದಲ್ಲಿ ದೇಶವು ತನ್ನ ನಿಸ್ತಂತು ಜಾಲವನ್ನು ವಿಸ್ತರಿಸಲು ಬಯಸಿದೆ ಮತ್ತು ತನ್ನ ಒಟ್ಟು ಬಂಡವಾಳ 6,000 ಕೋಟಿ ಬಂಡವಾಳದಲ್ಲಿ ಹೂಡಲಿದೆ.

ಮತ್ತೊಂದು ವಿಶೇಷತೆ ಈ ವರೆಗೆ ಐಡಿಯಾ ಟೆಲಿಕಾಂ ತನ್ನ ಕೆಲ ಹೊಚ್ಚ ಹೊಸ ಪ್ಲಾನ್ ಅಧಿಕೃತವಾಗಿ ಘೋಷಣೆ ಹೊರಡಿಸಿಲ್ಲ. ಆದರೆ ಹಲವು ಗ್ರಾಹಕರು ಇದರ ಮೆಸೇಜ್  ಸ್ವೀಕರಿಸಿರುವುದಾಗಿ ಒಪ್ಪಿದ್ದಾರೆ. ಅಲ್ಲದೇ ಇದರಲ್ಲಿ ಅತಿ ಸರಳವಾದ ಅನ್ಲಿಮಿಟೆಡ್ ಕರೆ ಮತ್ತು ಪ್ಯಾಕ್‌ಗಳನ್ನು ಸಬ್‌ಸ್ಕ್ರೈಬ್‌ ಮಾಡಿಕೊಳ್ಳಲು ತನ್ನ ವೆಬ್ಸೈಟ್ ಮತ್ತು IVR ಗಳ ಮೂಲಕ ಹೇಳಿದೆ.

 

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :