ನಿಮ್ಮ Google ಅಥವಾ Gmail ಅಕೌಂಟನ್ನು ಸರಳ ಮತ್ತು ಸುಲಭವಾಗಿ ಡಿಲೀಟ್ ಮಾಡುವುದೇಗೆ ಎನ್ನುವುದನ್ನು ಇಲ್ಲಿಂದ ತಿಳಿಯಿರಿ

ನಿಮ್ಮ Google ಅಥವಾ Gmail ಅಕೌಂಟನ್ನು ಸರಳ ಮತ್ತು ಸುಲಭವಾಗಿ ಡಿಲೀಟ್ ಮಾಡುವುದೇಗೆ ಎನ್ನುವುದನ್ನು ಇಲ್ಲಿಂದ ತಿಳಿಯಿರಿ
HIGHLIGHTS

ನಿಮ್ಮ Google ನಲ್ಲಿರುವ Gmail ಅಕೌಂಟ್ ಮಾಹಿತಿಯನ್ನು ಡಿಲೀಟ್ ಮಾಡಲು ಬಯಸಿದರೆ

ನಿಮ್ಮ Google ಅಕೌಂಟ್ ನಿಮಗೆ ತನ್ನದೆಯಾದ  ರೀತಿಯ ಸೇವೆಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಅದರಲ್ಲಿ ಮುಖ್ಯವಾಗಿ Gmail, YouTube, Google+, Drive ಇನ್ನು ಮುಂತಾದವುಗಳು. ಹಾಗಾಗಿ ಒಂದು ವೇಳೆ ನೀವು ಇದರಿಂದ ಹೊರ ಹೋಗಲು ಬಯಸಿದರೆ ಅಥವಾ ನಿಮ್ಮ Google ನಲ್ಲಿರುವ Gmail ಅಕೌಂಟ್ ಮಾಹಿತಿಯನ್ನು ಡಿಲೀಟ್ ಮಾಡಲು ಬಯಸಿದರೆ ನೀವು ಯಾವುದೇ ತೊಂದರೆಗಳಿಲ್ಲದೆ ಶಾಶ್ವವಾತವಾಗಿ ಡಿಲೀಟ್ ಮಾಡಬವುದು.

ಇದನ್ನು ಡಿಲೀಟ್ ಮಾಡುವ ಮುನ್ನ ಇದನ್ನು ಗಮನದಲ್ಲಿಡಿ ಇದನ್ನು ನೀವು ಡಿಲೀಟ್ ಮಾಡಿದರೆ ಅದರಲ್ಲಿರುವ ಎಲ್ಲ ಡೇಟಾ ಸಹ ಡಿಲೀಟ್ ಆಗುತ್ತದೆ. ಇದರರ್ಥ ನೀವು ಬೇರೆ ಒಂದು ಇಮೇಲ್ ಐಡಿ ಅಪ್ಡೇಟ್ ಮಾಡಿ ನಿಮ್ಮ ಡೇಟಾವನ್ನು ಪಡೆಯಬವುದು. ನಂತರ ನೀವು ಒಮ್ಮೆ ನಿಮ್ಮ ಈ ಗೂಗಲ್ ಅಕೌಂಟನ್ನು ಡಿಲೀಟ್ ಮಾಡಿದರೆ Gmail, YouTube, Google+, Drive ಮುಂತಾದವುಗಳ ಸೇವೆಗಳನ್ನು ಬಳಸಲಾಗುವುದೆಲ್ಲ.

ನೀವು ಟೈಂಪಾಸ್ಗಾಗಿ ಅಥವಾ ಕೆಲ ಸಮಯಕ್ಕಾಗಿ ನಿಮ್ಮ Google ಖಾತೆಯನ್ನು ಬಳಸಿದ್ದರೆ ಇಮೇಲ್ಗಳು, ನೋಟ್ಗಳು, ಫೋಟೋಗಳು ಮತ್ತು ಇತರ ಮಾಹಿತಿಗಳಂತಹ ಉಳಿಸುವ ಅಗತ್ಯವಿರುವ ಕೆಲವು ಪ್ರಮುಖ ಡೇಟಾವನ್ನು ನೀವು ಹೊಂದಿರಬಹುದು. ಇದರಲ್ಲಿ ಸಾಕಷ್ಟು ಇಲ್ಲದಿದ್ದರೆ ನೀವು ಅವುಗಳನ್ನು ಪ್ರತ್ಯೇಕವಾಗಿ ಡೌನ್ಲೋಡ್ ಮಾಡಬಹುದು.  ಆದರೆ ನಿಮ್ಮ ಎಲ್ಲ ಡೇಟಾವನ್ನು ಬ್ಯಾಕಪ್ ಮಾಡಲು Google ಸರಳ ಮಾರ್ಗವನ್ನು ಸಹ ಒದಗಿಸುತ್ತದೆ.

google servics 

1. ಮೊದಲಿಗೆ Accounts.google.com ಗೆ ಹೋಗುವ ಮೂಲಕ ನಿಮ್ಮ Google ಖಾತೆ ಸೆಟ್ಟಿಂಗ್ಗಳನ್ನು ತೆರೆಯಿರಿ.

2. ಇಲ್ಲಿ Personal info & Privacy ಆಯ್ಕೆಯಡಿಯಲ್ಲಿ 'Control your content' ಮೇಲೆ ಕ್ಲಿಕ್ ಮಾಡಿ.

3. ಒಮ್ಮೆ ಇದನ್ನು ತೆರೆದಾಗ 'Create Archive' ಮೇಲೆ ಕ್ಲಿಕ್ ಮಾಡಿ. ಅಲ್ಲಿಂದ ನೀವು ಉಳಿಸಿದ ಮಾಹಿತಿಯನ್ನು Google ಪ್ರಾಡಕ್ಟ್ಗಳ ಆಯ್ಕೆ ಮಾಡಬಹುದು.

4. ಇದರ ನಂತರ ನೀವು Archive ಫೈಲ್ ಟೈಪನ್ನು ಆಯ್ಕೆ ಮಾಡಬಹುದು ಮತ್ತು ನೀವು ಅದನ್ನು ಉಳಿಸಲು ಬಯಸುವಿರಿ. 

5. ಇಮೇಲ್ ಮೂಲಕ ಡೌನ್ಲೋಡ್ ಲಿಂಕ್ ಅನ್ನು ಪಡೆಯಲು ನೀವು ಆಯ್ಕೆ ಮಾಡಬಹುದು ಅಥವಾ ಡ್ರೈವ್, ಒನ್ಡ್ರೈವ್ ಅಥವಾ ಡ್ರಾಪ್ಬಾಕ್ಸ್ನಂತಹ ಕ್ಲೌಡ್ ಸೇವೆಗಳಿಗೆ ಅದನ್ನು ಉಳಿಸಬಹುದು.

6. Archive ಮಾಡಲಾದ ಎಷ್ಟು ಮಾಹಿತಿಯನ್ನು ಆಧರಿಸಿ ಇಡೀ ಪ್ರಕ್ರಿಯೆಯನ್ನು ಸ್ವಲ್ಪ ಸಮಯದಲ್ಲಿ ತೆಗೆದುಕೊಳ್ಳಬಹುದು.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo