ಈಗ ನೀವು ಕಳುಹಿಸಿದ ವಾಟ್ಸಾಪ್ ಮೆಸೇಜ್ ಪಡೆದವರಿಗೆ ತಿಳಿಯದಂತೆ 7 ನಿಮಿಷಗಳಾದ ಮೇಲು ಡಿಲೀಟ್ ಮಾಡಬವುದು.

Updated on 16-Jan-2018
HIGHLIGHTS

ನೀವು ಬಹುಶಃ ಈ WhatsApp ಮಾಹಿತಿ ತಿಳಿದುಕೊಂಡರೆ ಒಳಿತು.

ಸಾಮಾನ್ಯವಾಗಿ ನೀವು WhatsApp ನಲ್ಲಿ ನಿಮ್ಮ ಸಂದೇಶವನ್ನು ಅಳಿಸುವುದು ನಿಜವಾಗಿಯೂ ಇನ್ನು ಸುಲಭವಾಗಿದೆ. ನೀವು ಅದರ ಮೇಲೆ ಕ್ಲಿಕ್ ಮಾಡಿ ಹಿಡಿದುಕೊಂಡು ನಂತರ ಮೇಲಿನ ಪಟ್ಟಿಯಲ್ಲಿ ಗೋಚರಿಸುವ Bin ಐಕಾನನ್ನು ಟ್ಯಾಪ್ ಮಾಡಿ ಅಳಿಸಲು ಬಯಸುತ್ತೀರಾ? ಎಂದು ಕೇಳುವ ಸಂದೇಶಕ್ಕೆ Yes ಎಂದು ಹೇಳಿ ಡಿಲೀಟ್ ಮಾಡಿ. 

ಆದರೆ ನೀವು ಬಹುಶಃ ಈ ಮಾಹಿತಿ ತಿಳಿಯಬೇಕಾದದ್ದು ಆ ಸಂದೇಶವನ್ನು ಅಳಿಸುವುದು ಹೇಗೆಂದರೆ, ಸ್ವೀಕರಿಸುವವರಿಗೆ ಅದನ್ನು ನೋಡಲಾಗುವುದಿಲ್ಲ. ಮತ್ತು ಅದು ಸರಳವಾಗಿದೆ 'Delete for everyone' ಆಯ್ಕೆಯನ್ನು ಆರಿಸಿ. ಯಾವುದೇ ಒಂದು ಸಂದೇಶವನ್ನು ನೀವು ಕಳುಹಿಸಿದ ನಂತರ ಏಳು ನಿಮಿಷಗಳವರೆಗೆ ಅಳಿಸಲು ಸಾಧ್ಯವಾಗುತ್ತದೆ. ಮತ್ತು ಇದು ನೈಸರ್ಗಿಕವಾಗಿ ಪಡೆದವರು ನಿಜವಾಗಿ ಅದನ್ನು ಓದದಿದ್ದರೆ ಮಾತ್ರ ಉಪಯುಕ್ತವಾಗಿದೆ.

ಇದರಲ್ಲಿನ ಎರಡು ನೀಲಿ ಟಿಕ್ಗಳಿವೆಯೇ ಇಲ್ಲವೋ ಎಂಬುವುದರ ಮೂಲಕ ನಿಮಗೆ ತಿಳಿಯುತ್ತದೆ. ಇದರ ಅರ್ಥವೇನೆಂದರೆ ಅದು ಓದಲ್ಪಟ್ಟಿದೆ ಆದರೆ ಎರಡು ಬೂದು ಟಿಕ್ಗಳು ಬಂದರೆ ಅದು ಬರಿ ತಲುಪಿಸಲಾಗಿದೆ ಎಂದರ್ಥ. ನಿಮ್ಮ ಒಂದು ಸಂದೇಶವನ್ನು ಅಳಿಸಿದಾಗ ಒಂದು ಸಂದೇಶವನ್ನು ಅಳಿಸಲಾಗಿದೆ ಎಂದು ಎರಡೂ ಪಕ್ಷಗಳಿಗೆ (ಕಳುಯಿಸುವವರು & ಪಡೆಯುವವರು) ಸೂಚಿಸುವ ನೋಟಿಫಿಕೇಶನ್ ಇಬ್ಬರಿಗೂ ಬರುತ್ತದೆ. ಇದರಿಂದ ಇದು ಕೆಲ ಒಮ್ಮೆ ವಿಚಿತ್ರವಾದ ಪ್ರಶ್ನೆಗಳಿಗೆ ಕಾರಣವಾಗಬಹುದು.

Delete for everyone ಇದು WhatsApp ಸಂದೇಶಗಳನ್ನು ಎಲ್ಲಾ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂದರೆ ನೀವು Text messages, Videos, Images, GIFs ಅಥವಾ Documentsಗಳನ್ನು ಸುಲಭವಾಗಿ ಅಳಿಸಬವುದು. ಇದು iOS ಮತ್ತು ಆಂಡ್ರಾಯ್ಡ್ ಫೋನ್ಗಳಲ್ಲಿ ಕೆಲಸ ಮಾಡುತ್ತದೆ.

• Wi-Fi ಮತ್ತು ಮೊಬೈಲ್ ಡೇಟಾವನ್ನು ಆಫ್ ಮಾಡಿ. 

ಸೆಟ್ಟಿಂಗ್ಗಳಿಗೆ ಹೋಗಿ ನಿಮ್ಮ ಫೋನಿನ Time ಮತ್ತು Date ಸಂದೇಶವನ್ನು ಕಳುಹಿಸುವ ಮೊದಲು ದಿನಾಂಕವನ್ನು ಹಿಂದಕ್ಕೆ ಅಪ್ಡೇಟ್ ಮಾಡಿಕೊಳ್ಳಿ.

 

• ನಂತರ WhatsApp ತೆರೆದು ಸಂದೇಶವನ್ನು ಹುಡುಕಿ ಮತ್ತು ಯಾವುದನ್ನೂ ಡಿಲೀಟ್ ಮಾಡಬೇಕೋ ಅದನ್ನು ಆಯ್ಕೆಮಾಡಿಕೊಳ್ಳಿ, ನಂತರ Bin ಐಕಾನ್ ಟ್ಯಾಪ್ ಮಾಡಿ ಮತ್ತು 'Delete for everyone' ಡಿಲೀಟ್ ಮಾಡಿರಿ. 

 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :