digit zero1 awards

ರಿಲಯಸ್ಸಿನ ಹಳೆಯ JioPhone ಮತ್ತು ಹೊಸ JioPhone 2 ಫೋನ್ಗಳ 4G VoLTE ಫೀಚರ್ ಹೇಗೆ ಭಿನ್ನವಾಗಿವೆ ಗೋತ್ತಾ…!

ರಿಲಯಸ್ಸಿನ ಹಳೆಯ JioPhone ಮತ್ತು ಹೊಸ JioPhone 2 ಫೋನ್ಗಳ 4G VoLTE ಫೀಚರ್ ಹೇಗೆ ಭಿನ್ನವಾಗಿವೆ ಗೋತ್ತಾ…!
HIGHLIGHTS

ಯಾವುದೇ ಹಳೆಯ ರಿಲಯನ್ಸ್ ಫೀಚರ್ ಫೋನಿನೊಂದಿಗೆ 501 ರೂಗಳನ್ನು ನೀಡಿ ಹೊಸ JioPhone 2 ಅನ್ನು ಪಡೆಯಬವುದು

ಈ ವರ್ಷ ಭಾರತದಲ್ಲಿ ಮುಖೇಶ್ ಅಂಬಾನಿಯವರ ಟೆಲಿಕಾಂ ಸರ್ವಿಸ್ ಪ್ರೊವೈಡರ್ ಆದ ರಿಲಯನ್ಸ್ ಜಿಯೋ ಕಳೆದ ಗುರುವಾರದಂದು ಹೊಸ ಫುಲ್ ಕ್ವೆರ್ಟಿ (QWERTY) ಕೀಬೋರ್ಡ್ ಮತ್ತು ಸಮತಲವಾದ 2.4 ಇಂಚೀನ ಸ್ಕ್ರೀನ್ವುಳ್ಳ ಬ್ಲ್ಯಾಕ್ಬೆರಿ ಪ್ರೇರಿತ 4G ವೊಲ್ಟೈ ಫೀಚರ್ ಫೋನಾದ JioPhone 2 ಅನ್ನು ಬಿಡುಗಡೆಗೊಳಿಸಿದರು. ಇದು ಸಾಮಾನ್ಯ ಜನರ ಕೈಗೆ ಇದೇ ಆಗಸ್ಟ್ 15 ರಿಂದ ಈ ಫೋನ್ ಕೇವಲ 2999 ರೂಪಾಯಿಗಳಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದರು.

ಇದಲ್ಲದೆ ರಿಲಯನ್ಸ್ ಈ ಹೊಸ JioPhone 2 ನ ಬಿಡುಗಡೆಯ ಜೊತೆಯಲ್ಲಿ JioPhone ಮಾನ್ಸೂನ್ ಹಂಗಮಾ ಎಂಬ ಹೊಸ ಪ್ರಸ್ತಾಪವನ್ನು ಸಹ ಕಂಪೆನಿಯು ಘೋಷಿಸಿದೆ. ಇದು ಕಂಪನಿಯ ಮೊದಲ ಜಿಯೋಫೋನಿನ ಪುನರಾವರ್ತನೆಯಾಗಿದ್ದು ಯಾವುದೇ ರಿಲಯನ್ಸ್ ಜಿಯೋ ಫೀಚರ್ ಫೋನನ್ನು ಬದಲಾಯಿಸಿಕೊಳ್ಳಲು ಕೇವಲ ಆ ಫೋನಿನ ಜೋತೆಯಲ್ಲಿ 501 ರೂಗಳಷ್ಟು ನೀಡಿ ಹೊಸ JioPhone 2 ಅನ್ನು ಪಡೆಯುವ ಸುವರ್ಣಾವಕಾಶವನ್ನು ನೀಡಿದ್ದಾರೆ.

JioPhone ಮತ್ತು JioPhone 2 ಎರಡೂ 2.4 ಇಂಚಿನ ಸ್ಕ್ರೀನ್ ಸ್ಪೋರ್ಟ್ ಹೊಂದಿವೆ ಆದರೆ ವಿವಿಧ ದೃಷ್ಟಿಕೋನದಲ್ಲಿ ಜಿಯೋಫೋನ್ನಲ್ಲಿರುವ ಸ್ಕ್ರೀನ್ ಇತರ ಫೀಚರ್ ಫೋನ್ಗಳಂತೆ ಲಂಬವಾದ ದೃಷ್ಟಿಕೋನದಲ್ಲಿ ಹೊಂದಿಸಲಾಗಿದೆ. ಇನ್ನೊಂದೆಡೆಯಲ್ಲಿ JioPhone 2 ರಲ್ಲಿ ಸ್ಕ್ರೀನ್ ಸಮತಲ ದೃಷ್ಟಿಕೋನಕ್ಕೆ ಹೊಂದಿಸಲಾಗಿದೆ. ಇದು ಮಲ್ಟಿಮೀಡಿಯಾ ವಿಷಯವನ್ನು ವೀಕ್ಷಿಸಲು ವಿಶಾಲ ಮತ್ತು ಅನುಕೂಲಕರವಾಗಿದೆ.

https://technonow.in/wp-content/uploads/2018/07/jio-gigafiber-jio-phone-2-edited-images-.2.jpg

Keyboard : ಈ ಹೊಸ JioPhone 4 Way ಸಂಚರಣೆ ಕೀಲಿಗಳೊಂದಿಗೆ ಆಲ್ಫಾ ಸಂಖ್ಯಾ ಕೀಬೋರ್ಡ್ ಹೊಂದಿದೆ. ಈ ಹೊಸ JioPhone 2 ಇದರಲ್ಲಿ ನಿಮಗೆ 4 ವೇ ನ್ಯಾವಿಗೇಶನ್ ಕೀ ಮತ್ತು ವಾಯ್ಸ್ ಕಮೆಂಡ್ಗಳಿಗೆ ಮೀಸಲಾಗಿರುವ ಕೀಲಿಯೊಂದಿಗೆ ಸಂಪೂರ್ಣ QWERTY ಕೀಬೋರ್ಡ್ ಹೊಂದಿದೆ.

Operating system : ಈ ಫೀಚರ್ ಫೋನ್ಗಳು ಎರಡಲ್ಲೂ KAI OS ನಲ್ಲಿ ಕಾರ್ಯನಿರ್ವಹಿಸುತ್ತವೆ ಆದರೆ JioPhone 2 ನಲ್ಲಿ ನಿಮಗೆ ಸೋಶಿಯಲ್ ಮೀಡಿಯಾ ಮತ್ತು ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ಗಳೊಂದಿಗೆ ಪೂರ್ವ ಸ್ಥಾಪಿತವಾಗಲಿದೆ ಅಂದ್ರೆ Facebook, YouTube ಮತ್ತು WhatsApp ಬರುತ್ತವೆ. ಆದರೆ ಈ ಅಪ್ಲಿಕೇಶನ್ಗಳು ಜಿಯೋಫೋನ್ಗೆ ಕೆಲವು ಸಮಯದ ನಂತರ ಸಾಫ್ಟ್ವೇರ್ ಅಪ್ಗ್ರೇಡ್ ಅಥವಾ ಸೈಡ್ ಲೋಡ್ ಮಾಡಿದ ನಂತರ ಪೂರ್ತಿಯಾಗಿ ಬಳಸುವ ಅವಕಾಶ ನೀಡುತ್ತಿವೆ.

High definition voice calls : ಎರಡೂ ವೈಶಿಷ್ಟ್ಯ ಫೋನ್ಗಳು VoLTE ಕರೆ ವೈಶಿಷ್ಟ್ಯವನ್ನು ಬೆಂಬಲಿಸುತ್ತವೆ. ಇದು ಡೇಟಾ ಪ್ಯಾಕೆಟ್ಗಳನ್ನು ಬಳಸುವ ಧ್ವನಿ ಕರೆಗಳನ್ನು ಅನುಮತಿಸುತ್ತದೆ. ಆದ್ದರಿಂದ ಹೆಚ್ಚಿನ ವ್ಯಾಖ್ಯಾನ ಧ್ವನಿ ಕರೆಗಳನ್ನು ಅನುಮತಿಸುತ್ತದೆ.

Voice commands : ನಿಮ್ಮ ವಾಯ್ಸ್ ಆದೇಶಗಳನ್ನು ಬಳಸಿ ಫೋನ್ಗಳನ್ನು ಕಾರ್ಯಾಚರಣೆ ಮಾಡಬಹುದು. ಧ್ವನಿ ಕಮಾಂಡ್ ವೈಶಿಷ್ಟ್ಯವು ಕರೆ ಮತ್ತು ಸಂದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಫೋನ್ನ ಅಪ್ಲಿಕೇಶನ್ಗಳನ್ನು ನಿರ್ವಹಿಸಲು – ಮ್ಯೂಸಿಕ್ ಪ್ಲೇಬ್ಯಾಕ್, ಯೂಟ್ಯೂಬ್ ಮತ್ತು ವೀಡಿಯೋ ಪ್ಲೇಬ್ಯಾಕ್, ಇತ್ಯಾದಿಗಳನ್ನು ಬಳಸಬವುದು.

Near Field Communication (NFC) :  ಫೋನ್ಗಳು ಎನ್ಎಫ್ಸಿ ಚಿಪ್ನೊಂದಿಗೆ ಸಜ್ಜುಗೊಂಡಿವೆ, ಇದು ಭವಿಷ್ಯದಲ್ಲಿ ಡಿಜಿಟಲ್ ಪಾವತಿ ಸೇವೆಗೆ ಬೆಂಬಲ ನೀಡುತ್ತದೆ. ಎನ್ಎಫ್ಸಿ ಟೆಕ್ನಾಲಜಿಯೊಂದಿಗೆ ಬಳಕೆದಾರರು ತಮ್ಮ ಜನ್ ಧನ್ ಖಾತೆ, ಬ್ಯಾಂಕ್ ಖಾತೆಗಳು ಮತ್ತು ಜಿಯೊ ಹಣ ಅಪ್ಲಿಕೇಶನ್ ಮೂಲಕ ಡಿಜಿಟಲ್ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.

https://technonow.in/wp-content/uploads/2018/07/jio-gigafiber-jio-phone-2-edited-images-.3.jpg

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo