ಇವು ಈ ವರ್ಷ ಕೇವಲ 15,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾ ಫೋನ್ಗಳು.

ಇವು ಈ ವರ್ಷ ಕೇವಲ 15,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾ ಫೋನ್ಗಳು.

ಇಂದು ನಾವು 15,000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳ ಬಗ್ಗೆ ಮಾತನಾಡೋಣ. ಬಜೆಟ್ ಫೋನ್ಗಳು ಒಂದು ಕಾಲದಲ್ಲಿ ಉತ್ತಮ ಕ್ಯಾಮೆರಾ ಹೊಂದಿರಲಿಲ್ಲ. ಆದ್ರೆ ಇಂದು ಇವು ಬ್ರಾಂಡೆಡ್ Flagship ಫೋನ್ಗಳತ್ತ ತಲೆ ಎತ್ತಿವೆ. ಇಲ್ಲಿ ನಮ್ಮ ಪ್ರಕಾರ 15,000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ 5 ಕ್ಯಾಮೆರಾ ಫೋನ್ಗಳನ್ನು ಪಟ್ಟಿ ಮಾಡಿದ್ದೇವೆ. ಒಂದು ವೇಳೆ ನೀವು ಇದನ್ನು ಒಪ್ಪದಿದ್ದರೆ ನಿಮ್ಮ ಪ್ರಕಾರ 15,000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳ ಹೆಸರನ್ನು ಈ ಕೆಳಗೆ ಕಾಮೆಂಟ್ ಮಾಡಿ.

Xiaomi Redmi Note 5 Pro

ಇದರಲ್ಲಿನ Portrait ಮೂಡಿಗಾಗಿ ಹೆಸರುವಾಸಿಯಾಗಿದ್ದು ಇದು 12 ಮತ್ತು 5MP RGB (Sony IMX486) ಸೆನ್ಸಾರ್ಗಳ ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಸೆಟಪನ್ನು ಅಂದ್ರೆ f / 2.2 ಮತ್ತು f / 2.0 ಅಪೆರ್ಚರನ್ನು ಹೊಂದಿದೆ. Xiaomi ಯ ಪ್ರಕಾರ ಇದರ ದ್ವಿತೀಯ ಕ್ಯಾಮೆರಾ ಭಾವಚಿತ್ರ ಕ್ರಮದಲ್ಲಿ ಆಳವಾದ ಮತ್ತು ಕಡಿಮೆ ಬೆಳಕಿನ ಶಾಟ್ಗಳಲ್ಲಿ ಉತ್ತಮವಾದ ಹೆಚ್ಚುವರಿ ಮಾಹಿತಿಯನ್ನು ಸೆರೆಹಿಡಿಯುತ್ತದೆ. ಇದರ ಮುಂಭಾಗದಲ್ಲಿ 20MP ಕ್ಯಾಮೆರಾವನ್ನು ಹೊಂದಿದೆ. ನಮ್ಮ ಅನುಭವದ ಪ್ರಕಾರ ಈ ಸ್ಮಾರ್ಟ್ಫೋನಿನ  ಕ್ಯಾಮೆರಾ ಉತ್ತಮವಾಗಿದ್ದು ಇದರಲ್ಲಿನ ಬಣ್ಣಗಳು ನಿಜವಾದ ಛಾಯೆಗಳಿಗೆ ಶಾರ್ಪ್ ಮತ್ತು ನೈಜ ಚಿತ್ರಗಳನ್ನು ನೀಡುತ್ತದೆ. ಈ ಕ್ಯಾಮೆರಾದ ಮುಂಭಾಗದಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸಲು ಸಾಧ್ಯವಾದ ಬೊಕೆ ಎಫೆಕ್ಟ್ ಕೂಡ ಅದ್ಭುತವಾಗಿವೆ. ಇದಕ್ಕೆ ಹೋಲಿಸಿದರೆ Mi A1 ಸಹ ಸರಿಸಮನಾಗಿದೆ.  

ಇದರ ಹಿಂಭಾಗದಲ್ಲಿನ ಡ್ಯೂಯಲ್ ಕ್ಯಾಮೆರಾ ಆಪ್ಟಿಕಲ್ ಝೂಮನ್ನು ಒದಗಿಸುವುದಿಲ್ಲ. ಆದರೆ ತೆಗೆದ ಚಿತ್ರದ ಗುಣಮಟ್ಟದಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಚಿತ್ರದಲ್ಲಿನ ಉತ್ತಮ ವಿಷಯದ ಪ್ರತ್ಯೇಕತೆಯನ್ನು ನೀಡುತ್ತದೆ. ಇದರಲ್ಲಿನ ಎಲ್ಲಾ ಚಿತ್ರಗಳನ್ನು ತೆಗೆಡಿದ್ದೇವೆ. ಇದರ ಪ್ರತಿಸ್ಪರ್ಧಿಗಳಿಗಿಂತಲೂ ಇದು ಹೆಚ್ಚು ಉತ್ತಮವಾದ ಅನುಭವ ನೀಡುತ್ತದೆ. ಇದರ ಪೋಟ್ರೇಟ್ ಮೋಡ್ನಲ್ಲಿ ಸುಂದರವಾದ ಸೆಟ್ಟಿಂಗ್ಗಳು ಇರುವುದನ್ನು ನಾವು ಇಷ್ಟಪಟ್ಟಿದ್ದೇವೆ. ಇದರರ್ಥ ನೀವು Natural ಕಾಣುವ ಅದ್ಬುತ ಚಿತ್ರಗಳನ್ನು ಪಡೆಯುತ್ತೀರಿ.

Xiaomi Mi A1

ಕಳೆದ ವರ್ಷದ ಅಗ್ರಸ್ಥಾನದ ವಿಜೇತನಾಗಿದ್ದ ಈ ಫೋನ್ ಈಗ 2ನೇ ಸ್ಥಾನಕ್ಕೆ ಇಳಿದಿದೆ. Mi A1 ಇದರೊಂದಿಗೆ ಉತ್ತಮವಾದ ಡ್ಯೂಯಲ್ ಕ್ಯಾಮರಾವನ್ನು ತಂದಿದೆ. ಇದು ನಿಮಗೆ ಉತ್ತಮವಾದ ಬೊಕೆ ಚಿತ್ರಗಳನ್ನು ಮತ್ತು ಉತ್ತಮವಾದ Natural ಚಿತ್ರಗಳನ್ನು ಕ್ಲಿಕ್ ಮಾಡಲು ಚೆನ್ನಾಗಿದೆ. ನೀವು ಸ್ಟಾಕ್ ಆಂಡ್ರಾಯ್ಡ್ ಮತ್ತು ಉತ್ತಮವಾದ ಡ್ಯೂಯಲ್ ಕ್ಯಾಮರಾ ಸೆಟಪ್ನೊಂದಿಗೆ ಹೊಸ ಹುಡುಕುತ್ತಿದ್ದರೆ 15,000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಕ್ಯಾಮೆರಾ ಫೋನ್ ಇದಾಗಿದೆ. 
 
Moto G5 Plus

ಮೂರನೇಯದಾಗಿ ಈ ಪಟ್ಟಿಯಲ್ಲಿ ಮತ್ತೊಂದು ಸ್ಟಾಕ್ ಆಂಡ್ರಾಯ್ಡ್ ಫೋನ್ ಅಂದ್ರೆ ಮೋಟೊರೋಲದ Moto G5 Plus. ಇದಲ್ಲಿ ನೀವು ಉತ್ತಮವಾದ ಚಿತ್ರಗಳೊಂದಿಗೆ ಉತ್ತಮ ಬಿಳಿ ಬೆಳಕನ್ನು ಚೆಲ್ಲಿ ಪ್ರತಿ ಚಿತ್ರದಲ್ಲಿ ಸಮತೋಲನವನ್ನು ಉಂಟುಮಾಡುವ ಡ್ಯೂಯಲ್ ಕ್ಯಾಮೆರಾವನ್ನು ಹೊಂದಿದೆ. ಈ Moto G5 Plus ಈ ಶ್ರೇಣಿ ಪ್ರಸ್ತಾಪದಲ್ಲಿ ಇತರ ಕ್ಯಾಮೆರಾಗಳಿಗೆ ಗಮನಾರ್ಹವಾಗಿ ಹೋಲಿಸಿದರೆ ಇದು ಉತ್ತಮವಾಗಿದೆ. ಇದರಲ್ಲಿನ ಹೊಸ Clear ಬಣ್ಣಗಳನ್ನು ಸೂರ್ಯನ ಬೆಳಕು ಮತ್ತು ಹಗಲಿನ ಪರಿಸ್ಥಿತಿಗಳಿಗೆ ಪೈಪೋಟಿಯನ್ನು ISO ಮಟ್ಟಗಳು ಸಾಮಾನ್ಯವಾಗಿ 50 ರಿಂದ 80 ರ ನಡುವೆ ತೂಗುತ್ತದೆ.
 
Honor 7X

ನಾಲ್ಕನೆಯದಾಗಿ ಹಾನರ್ 7X ಪೂರ್ತಿಯಾಗಿ 16 ಮತ್ತು 2MP ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದರ ವಿಡಿಯೋ ಮೋಡ್ಹೆಚ್ಚು ಗಮನಾರ್ಹವಾಗಿದೆ. ಇದು ರೆಕಾರ್ಡಿಂಗನ್ನು 1080p ರ ವರೆಗೆ ನೀಡುತ್ತದೆ. ಆದ್ದರಿಂದ ನೀವು ಇದರಲ್ಲಿ 4K ವೀಡಿಯೋಗಳನ್ನು ಶೂಟ್ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಇದರ 8MP ಸೆಲ್ಫಿ ಕ್ಯಾಮೆರಾ ಸ್ಮೈಲ್ ಸೆರೆಹಿಡಿಯುತ್ತದೆ. ಗೆಸ್ಚರ್ ಆಯ್ಕೆ, ಬ್ಯೂಟಿ ಸ್ಲೈಡರ್ ಮತ್ತು ಪರ್ಫೆಕ್ಟ್ ಸೆಲ್ಫಿ ಮೋಡ್ ಅನ್ನು ಒಳಗೊಂಡಿದೆ. ಇದರಲ್ಲಿನ ಎರಡು ಸೆನ್ಸರ್ಗಳನ್ನು ಹೊಂದಿದ್ದು ವೈಡ್ ಅಪರ್ಚರ್ ಮತ್ತು ಭಾವಚಿತ್ರ ಮೋಡ್ನಲ್ಲಿ ಕೆಲವು ಸುಂದರವಾದ DSLR ರೀತಿಯ ಪರಿಣಾಮಗಳನ್ನು ರಚಿಸುತ್ತದೆ. ಇದು ಫೇಸ್-ಡಿಟೆಕ್ಷನ್ ಆಟೋಫೋಕಸ್ ಮತ್ತು ಎಲ್ಇಡಿ ಫ್ಲಾಷ್ ಅನ್ನು ಕೂಡಾ ಪ್ಯಾಕ್ ಮಾಡುತ್ತದೆ. 

Redmi Note 5

ಕೊನೆಯದಾಗಿ ರೆಡ್ಮಿ ನೋಟ್ 5 ಇದರ ಕ್ಯಾಮೆರಾದ ಕಾರ್ಯಕ್ಷಮತೆ ಅಸಮಂಜಸವಾಗಿದ್ದರೂ ಅದು ಕೆಲ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಲು ಮುಂದೆ ಬರುತ್ತದೆ. ಇದರ ಬಹುತೇಕ ಭಾಗಗಳಲ್ಲಿ Redmi Note 5 ನಲ್ಲಿನ ಕ್ಯಾಮೆರಾ ಅದರ ಪೂರ್ವವರ್ತಿಗಿಂತ ಉತ್ತಮವಾಗಿರುತ್ತದೆ. ಇದು Xiaomi ಯ ಇಂದಿನ ಜನರೇಷನ್ಗಾಗಿ ನಿರೀಕ್ಷಿಸುವ ವಿಕಸನೀಯ ಸುಧಾರಣೆಯಾಗಿದೆ. ಇದು ಉತ್ತಮ ಚಿತ್ರಗಳನ್ನು ಕ್ಲಿಕ್ ಮಾಡಿ ಭಾರಿ ಫಲಿತಾಂಶಗಳೊಂದಿಗೆ ನಿಮ್ಮನ್ನು ಸಂತೋಷಪಡಿಸುತ್ತದೆ.
 
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube  ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo