‘Google’ ತನ್ನ ಪಿಕ್ಸೆಲ್ ಮತ್ತು ನೆಕ್ಸಸ್ ಸಾಧನಗಳಿಗಾಗಿ ಸೆಪ್ಟೆಂಬರ್ನಲ್ಲಿ ಹೊಸ ಭದ್ರತೇಯ ಪ್ಯಾಚನ್ನು ಪ್ರಾರಂಭಿಸಲಿದೆ.!

‘Google’ ತನ್ನ ಪಿಕ್ಸೆಲ್ ಮತ್ತು ನೆಕ್ಸಸ್ ಸಾಧನಗಳಿಗಾಗಿ ಸೆಪ್ಟೆಂಬರ್ನಲ್ಲಿ ಹೊಸ ಭದ್ರತೇಯ ಪ್ಯಾಚನ್ನು ಪ್ರಾರಂಭಿಸಲಿದೆ.!
HIGHLIGHTS

ಓರಿಯೋ ಆಗಸ್ಟ್ನಲ್ಲಿನ ಆರಂಭಿಕ ಭದ್ರತಾ ಪ್ಯಾಚ್ನೊಂದಿಗೆ ಹೊಂದಾಣಿಕೆಯ ಸಾಧನಗಳನ್ನು ನವೀಕರಿಸಿತ್ತು. ಇದರಿಂದಾಗಿ "ಇತ್ತೀಚಿನ ಅಪ್ಡೇಟ್ಗಳು ತಪ್ಪಾದ ಸಂಖ್ಯೆಯನ್ನು ಪ್ರದರ್ಶಿಸಲು ತೋರುತ್ತಿದೆ" ಎಂದು ಕೆಲ ಬಳಕೆದಾರರು ಈಗ ಗೊಂದಲಕ್ಕೊಳಗಾಗಿದ್ದಾರೆ.

ಸೆಪ್ಟೆಂಬರ್ ನಲ್ಲಿ ನಡೆದ ಆಂಡ್ರಾಯ್ಡ್ ಭದ್ರತಾ ಪ್ಯಾಚ್ ಗೆ ಅಪ್ಗ್ರೇಡ್ ಮಾಡಲು ಗೂಗಲ್ ಪಿಕ್ಸೆಲ್ ಮತ್ತು ನೆಕ್ಸಸ್ ಸಾಧನಗಳಿಗಾಗಿ ಸಾಫ್ಟ್ವೇರ್  OTA ವನ್ನು ಪ್ರಾರಂಭಿಸಿದೆ. ಅಲ್ಲದೆ  ಪೋಲಿಸೀನ ವರದಿ ಮಾಡಿರುವ ಪ್ರಕಾರ ಹಲವು ಆಂಡ್ರಾಯ್ಡ್ ಓರಿಯೊ ಅಪ್ಡೇಟ್ನೊಂದಿಗೆ ಹೊಂದಾಣಿಕೆಯ ಸಾಧನಗಳು ಸೆಪ್ಟೆಂಬರ್ನಲ್ಲಿ ಭದ್ರತಾ ಪ್ಯಾಚ್ ಅನ್ನು ಪ್ರಾರಂಭಿಸುವುದಾಗಿ ಗೂಗಲ್ ಹೇಳಿದೆ. ಇದರ ಅನೇಕ ಬಳಕೆದಾರರು ತಾವು ಇನ್ನೂ ಆಗಸ್ಟ್ ಭದ್ರತಾ ಪ್ಯಾಚ್ನೊಂದಿಗೆ ಅಂಟಿಕೊಂಡಿದ್ದಾರೆಂದು ವರದಿ ಮಾಡಿದರು. ಸೆಪ್ಟೆಂಬರ್ ಭದ್ರತಾ ಪ್ಯಾಚ್ ಅನ್ನು ಎಲ್ಲಾ ಹೊಂದಾಣಿಕೆಯ ಸಾಧನಗಳಿಗೆ ಗೂಗಲ್ ಸದ್ದಿಲ್ಲದೆ ಪ್ರಾರಂಭಿಸಿದೆ ಎಂದು ತೋರುತ್ತಿವೆ.

ಇತ್ತೀಚಿನ OTA ನವೀಕರಣಗಳನ್ನು ವೆರಿಝೋನ್ ಬಳಕೆದಾರರು ದೃಢೀಕರಿಸಿದ್ದಾರೆ ಮತ್ತು ವೆರಿಝೋನ್ ಸ್ವತಃ USನಲ್ಲಿ ನವೀಕರಣದ ನಿರ್ಮಾಣದ ಸಂಖ್ಯೆಯನ್ನು ತಿಳಿಸುವ ಮಾಹಿತಿಯನ್ನು ಪೋಸ್ಟ್ ಮಾಡಿದೆ ಎಂದು ವರದಿಗಳು ಹೇಳುತ್ತವೆ. ಭದ್ರತಾ ಪ್ಯಾಚೀನ ಮಟ್ಟವು ಇದೆ ಸೆಪ್ಟೆಂಬರ್ 1 ರಿಂದ ಶುರುವಾಗಿದೆ ಎಂದು ಹೇಳಲಾಗುತ್ತದೆ. US ಮತ್ತು UK ಗಳಲ್ಲಿನ ವೆರಿಝೋನ್ ಅಲ್ಲದ ಪಿಕ್ಸೆಲ್ ಮತ್ತು ನೆಕ್ಸಸ್ನ ಇತರ ಹಲವು ಬಳಕೆದಾರರು ಸೆಪ್ಟೆಂಬರ್ ಆಂಡ್ರಾಯ್ಡ್ ಭದ್ರತಾ ಪ್ಯಾಚ್  OTA ನವೀಕರಣವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಈ ಹೊಸ ನವೀಕರಣಗಳ ಹೆಸರಿನ ಬಗ್ಗೆ ಕೆಲವು ಗೊಂದಲವಿದೆ. ತೆಗೆದುಕೊಂಡಿರುವ OTA ಅಧಿಸೂಚನೆಗಳಲ್ಲಿ ಆಂಡ್ರಾಯ್ಡ್ 7.1.2 ಎಂದು ಹೆಸರಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಅದರ ನವೀಕರಣದ ನಂತರ ಸಾಧನಗಳು ಆಂಡ್ರಾಯ್ಡ್ 8.0 ಓರಿಯೊವನ್ನು ಇತ್ತೀಚಿನ ಸೆಪ್ಟೆಂಬರ್ನಲ್ಲಿ ಭದ್ರತಾ ಪ್ಯಾಚ್ನೊಂದಿಗೆ ಸೆಟ್ಟಿಂಗ್ಗಳಲ್ಲಿ ಆಂಡ್ರಾಯ್ಡ್ ಆವೃತ್ತಿಯಂತೆ ಚಿತ್ರಿಸುತ್ತದೆ.

ಆಂಡ್ರಾಯ್ಡ್ ಓರಿಯೊ ಕಳೆದ ವಾರ ಅಧಿಕೃತವಾಗಿ ಬಿಡುಗಡೆಗೊಂಡಿತು ಮತ್ತು ಗೂಗಲ್ ಪಿಕ್ಸೆಲ್ ಮತ್ತು ನೆಕ್ಸಸ್ ಹ್ಯಾಂಡ್ಸೆಟ್ಗಳಿಗೆ ಲಭ್ಯವಿದೆ. ಆಂಡ್ರಾಯ್ಡ್ ಓರಿಯೊ ಪಿಕ್ಚರ್ ಮೋಡ್ನಲ್ಲಿನ ಚಿತ್ರ ನೋಟಿಫಿಕೇಶನ್ ಪರಿಷ್ಕರಿಸಿದ ಸೆಟ್ಟಿಂಗ್ಗಳನ್ನು ಒದಗಿಸುತ್ತದೆ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo