ಸರ್ಟಿಫೈಡಾದ ಆಂಡ್ರಾಯ್ಡ್ ಡಿವೈಸ್ಗಳನ್ನು ಬಳಸುವ ಅದರ ಅರ್ಹತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಗೂಗಲ್ ಹೊಸ ವೆಬ್ಸೈಟ್ ಅನ್ನು ಪ್ರಾರಂಭಿಸಿದೆ. ದೃಢೀಕೃತ ಆಂಡ್ರಾಯ್ಡ್ ಸಾಧನವನ್ನು ಬಳಸುವಗ ಅದರ ಪ್ರಯೋಜನಗಳನ್ನು ಕುರಿತು ಮಾಹಿತಿಯನ್ನು ಈ ವೆಬ್ಸೈಟ್ ಒದಗಿಸುತ್ತದೆ. ಮತ್ತು ಆಂಡ್ರಾಯ್ಡ್ ಪರಿಸರದಲ್ಲಿ ಸುರಕ್ಷತೆಯ ಪಾತ್ರವನ್ನು ರೂಪಿಸುತ್ತದೆ. ಪ್ರಪಂಚದಾದ್ಯಂತದ ತಯಾರಕರು ತಮ್ಮ ಡಿವೈಸ್ಗಳಲ್ಲಿ Google ಅಪ್ಲಿಕೇಶನ್ಗಳನ್ನು ಪೂರ್ವ-ಸ್ಥಾಪಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ವೆಬ್ಸೈಟ್ ಗಮನಸೆಳೆದಿದೆ.
ಯಾವುದೇ ಒಂದು ಡಿವೈಸ್ನಲ್ಲಿ ಪೂರ್ವ-ಸ್ಥಾಪಿಸಲಾದ Google ಅಪ್ಲಿಕೇಶನ್ಗಳು ಅಧಿಕೃತವಾಗಿವೆಯೋ ಅದನ್ನು Google ನಲ್ಲಿರುವ ಆಂಡ್ರಾಯ್ಡ್ ತಂಡವು ಖಚಿತಪಡಿಸಿಕೊಳ್ಳುತ್ತದೆ ಎಂದು ವೆಬ್ಸೈಟ್ ಹೇಳುತ್ತದೆ. ಇದು YouTube ಹಾಗು ನಕ್ಷೆಗಳು ಮತ್ತು Gmail, Chrome ಮತ್ತು Google ಸರ್ಚ್ ದಂತಹ Google ಅಪ್ಲಿಕೇಶನ್ಗಳನ್ನು ಒಳಗೊಂಡಿದ್ದು. ಸಾಧನಗಳು ಆಂಡ್ರಾಯ್ಡ್ ಭದ್ರತೆ ಮತ್ತು ಅನುಮತಿಗಳ ಮಾದರಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ನೂರಾರು ಹೊಂದಾಣಿಕೆಯ ಪರೀಕ್ಷೆಗಳನ್ನು ನಡೆಸಲು ಜಗತ್ತಿನಾದ್ಯಂತ ತಯಾರಕರೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ.
ಈ ಸಂಪನ್ಮೂಲಗಳಲ್ಲಿ ಮುಖ್ಯವಾಗಿ ಪ್ರಮುಖ ಲಕ್ಷಣವು ಗೂಗಲ್ ಪ್ಲೇ ಪ್ರೊಟೆಕ್ಟ್ (Play Protect) ವೈಶಿಷ್ಟ್ಯವಾಗಿದೆ. ಪ್ಲೇ ಪ್ರೊಟೆಕ್ಟ್ ವೈಶಿಷ್ಟ್ಯವು ಸ್ವಯಂಚಾಲಿತ ವೈರಸ್ ಸ್ಕ್ಯಾನಿಂಗ್ ಮತ್ತು ನನ್ನ ಸಾಧನವನ್ನು (My Device) ಹುಡುಕುವ ಭದ್ರತಾ ವೈಶಿಷ್ಟ್ಯಗಳ ಸೂಟ್ ಆಗಿದೆ. ಇದು ಮಾಲ್ವೇರ್ (malware) ಪ್ರೈವಸಿಯ ಭಿನ್ನತೆಗಳು ಮತ್ತು ಹೆಚ್ಚಿನವುಗಳ ವಿರುದ್ಧ ಬೇಸ್ಲೈನ್ ರಕ್ಷಣೆಯನ್ನು ಒದಗಿಸುತ್ತದೆ. ಹೊಸ ಆಂಡ್ರಾಯ್ಡ್ ಸಾಧನಕ್ಕಾಗಿ ಶಾಪಿಂಗ್ ಮಾಡುವಾಗ ಗೂಗಲ್ ಪ್ಲೇಯಾ ಪ್ರೊಟೆಕ್ಟ್ ಲೋಗೋವನ್ನು ನೋಡಿ ಅದು ಸಾಧನವು ಪ್ರಮಾಣೀಕರಣದ ಭದ್ರತೆ ಪ್ರಯೋಜನಗಳೊಂದಿಗೆ ಬರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವೆಬ್ಸೈಟ್ ಸೂಚಿಸುತ್ತದೆ.
ನಿಮ್ಮ ಡಿವೈಸ್ ಪ್ರಮಾಣೀಕರಿಸದಿದ್ದರೆ ಏನು ಮಾಡಬೇಕೆಂಬುದರ ಬಗ್ಗೆ ಸಾಮಾನ್ಯ ಮಾರ್ಗದರ್ಶನಗಳನ್ನು ಈ ವೆಬ್ಸೈಟ್ ನೀಡುತ್ತದೆ. ಅರ್ಥಾತ್ ಗೂಗಲ್ ಮತ್ತು ಪ್ಲೇ ಸ್ಟೋರ್ನ ಮೂಲಭೂತ ಭದ್ರತಾ ವೈಶಿಷ್ಟ್ಯಗಳು ಅಥವಾ ಅಪ್ಲಿಕೇಶನ್ಗಳು ಉದ್ದೇಶಪೂರ್ವಕವಾಗಿ ಕಾರ್ಯನಿರ್ವಹಿಸದಿರಬಹುದು. ಬಳಕೆದಾರರನ್ನು ಕುರಿತು "ನಿಮ್ಮ ಸಾಧನವು ಸುರಕ್ಷಿತವಾಗಿಲ್ಲದೆ ಅಥವಾ ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು Google ಆಗ್ರಹಿಸಿದೆ" ಅಂತಹ ಸಂದರ್ಭದಲ್ಲಿ ಬಳಕೆದಾರರು ನಿಮ್ಮ ಡಿವೈಸ್ ನಿಖರವಾದ ಸಂಪೂರ್ಣವಾಗಿ ಪರೀಕ್ಷೆಗೊಳಗಾದ ಪ್ರಮಾಣೀಕರಿಸಿದ ಡಿವೈಸಾ ಅಲ್ವ ಅನ್ನುವುದರ ಬಗ್ಗೆ ತಿಳಿಯಲು ಬಳಕೆದಾರರು ತಮ್ಮ ಸಾಧನ ತಯಾರಕ ಅಥವಾ ವ್ಯಾಪಾರಿಯನ್ನು ಸಂಪರ್ಕಿಸಬಹುದು.