ಇಂದಿನ ದಿನಗಳಲ್ಲಿನ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟರೆ ಸಾಕು ಎಲ್ಲಕ್ಕೂ ಮೊದಲು ಅವರು YouTube ತೆರೆದು ನೋಡುತ್ತಾರೆ ಎಂಬುದು ಹಲವಾರು ಪೋಷಕರನ್ನು ಆತಂಕಕ್ಕೆ ನೂಕುತ್ತದೆ. ಯಾಕಪ್ಪ ಈ ವಿಷಯ ಇಷ್ಟು ಗಂಭೀರ ಅಂತೀರಾ ಮಕ್ಕಳು ಯೂಟ್ಯೂಬ್ನಲ್ಲಿ ಮನರಂಜನೆಗಾಗಿ ನೀಡಿರುವ ವಿಡಿಯೋಗಳನ್ನು ನೋಡಿದರೆ ಪರವಾಗಿಲ್ಲ.
ಆದರೆ ಅದರಲ್ಲಿ ಕೆಲವೊಮ್ಮೆ ಕಾಣಿಸುವ ಅಶ್ಲೀಲತೆಯಂತಹ ವಿಡಿಯೋಗಳು ಅಥವಾ ಹಿಂಸಾತ್ಮಕ ವಿಡಿಯೋಗಳನ್ನು ವೀಕ್ಷಿಸುವುದರಿಂದ ಅವು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಮತ್ತು ಅವರ ಭಾವನೆ ಮತ್ತು ಗಂಭೀರತೆಯನ್ನು ಹಾಳು ಮಾಡುತ್ತವೆಂಬ ಭಯ ಪೋಷಕರಿಗೆ ಕಾಡುತ್ತಿರುತ್ತದೆ.
ಹಾಗಾಗಿಯೇ ಜಗತ್ಪ್ರಸಿದ್ದ ಸಾಮಾಜಿಕ ಜಾಲತಾಣಗಳೆಲ್ಲವೂ ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅಂದ್ರೆ ಒಂದು ವಯಸ್ಸಿನ ರೇಂಜಿನಲ್ಲಿ ಮಕ್ಕಳು ಯಾವುವದನ್ನು ಬಳಸಬೇಕು ಯಾವುವದನ್ನು ಬಳಸಬಾರದು ಎಂಬುದನ್ನು ಪೋಷಕರು ನಿಯಂತ್ರಿಸುವಂತೆಹ ಆಯ್ಕೆಗಳನ್ನು ನೀಡುತ್ತಿವೆ. ಇದು ಪೋಷಕರಿಗೆ ಮರುಭೂಮಿಯಲ್ಲಿ ಮರೀಚಿಯೇ ಸರಿ. ಏಕೆಂದರೆ ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬ ಗಾದೆಯಂತೆ ತಪ್ಪು ದಾರಿಯನ್ನು ತುಳಿಯುವವರು ಏನೇ ಮಾಡಿದರು ತುಳಿದೆಬಿಡುತ್ತಾರೆ.
ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಯೂಟ್ಯೂಬ್ ಸಹ ಕಿಡ್ಸ್ ಟೂಲ್ ಅನ್ನು ಬಿಡುಗಡೆ ಮಾಡಿದೆ. ಹೊಸ ಆಯ್ಕೆಯ ಮೂಲಕ ಪೋಷಕರು ತಾವು ಯಾವ ವಿಷಯ, ಚಾನಲ್ ಗಳನ್ನು ಪಟ್ಟಿ ಮಾಡುತ್ತಾರೋ ಆ ವಿಷಯಗಳಿಗೆ ಸಂಬಂಧಿಸಿದಂತಹ ವಿಡಿಯೋ, ಚಾನಲ್ ಗಳನ್ನು ಮಾತ್ರ ಮಕ್ಕಳು ಯೂಟ್ಯೂಬ್ ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಇಲ್ಲಿ ಪೋಷಕರು ಅನುಮೋದಿಸುವ ಕಂಟೆಂಟ್ ಅನ್ನು ಮಾತ್ರ ಮಕ್ಕಳು ವೀಕ್ಷಿಸಲು ಸಾಧ್ಯವಿದ್ದು ಸರ್ಚ್ ಆಫ್ ಕಂಟ್ರೋಲ್ ಆಯ್ಕೆಯನ್ನೂ ನೀಡಲಾಗಿದೆ. ಈಗ ಪೋಷಕರಿಗೆ ತಮ್ಮ ಮಕ್ಕಳು ಕಲೆ, ಕರಕುಶಲ, ಕ್ರೀಡೆ, ಕಲಿಕೆ ಮುಂತಾದ ವಿಷಯಗಳ ಕುರಿತ ವಿಡಿಯೋಗಳನ್ನು ನೋಡಬೇಕೆಂಬುದನ್ನೂ ಪಟ್ಟಿ ಮಾಡುವ ಆಯ್ಕೆ ನೀಡಲಾಗಿದೆ ಎಂದು ಯುಟ್ಯೂಬ್ ಹೇಳಿದೆ.
ಇದನ್ನು ಈ ವಾರ ಪ್ರಾರಂಭಿಸಿ ಹುಡುಕಾಟವನ್ನು ಆಫ್ ಮಾಡುವುದು ಯುಟ್ಯೂಬ್ ಕಿಡ್ಸ್ ಅನುಭವವನ್ನು YouTube ಕಿಡ್ಸ್ ತಂಡವು ಪರಿಶೀಲಿಸಿದ ಚಾನಲ್ಗಳಿಗೆ YouTube ಕಿಡ್ಸ್ ಅನುಭವವನ್ನು ಮಿತಿಗೊಳಿಸುತ್ತಿದೆ. ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಹಿಂಸಾತ್ಮಕ ಉಗ್ರಗಾಮಿತ್ವವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಸುಮಾರು 10,000 ಜನರನ್ನು ನೇಮಿಸಿಕೊಳ್ಳುವಂತೆ YouTube ಹೇಳಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile