ಸ್ಯಾಮ್ಸಂಗ್ ಇತ್ತೀಚೆಗೆ ತಮ್ಮ ಹೊಸ Samsung Galaxy Note 9 ಫೋನನ್ನು ಹೊಸ ಕುತೂಹಲಕಾರಿ ವೈಶಿಷ್ಟ್ಯಗಳೊಂದಿಗೆ ಅಮೇರಿಕಾದಲ್ಲಿ ಹೊರ ತಂದಿದೆ. ಇದರ ಒಂದು ಪ್ರಮುಖ ಹೈಲೈಟ್ ಅಂದ್ರೆ ಇದರ ಹೊಸ S Pen ಆಗಿದೆ. ಇದರಲ್ಲಿ ಈಗ ಬ್ಲೂಟೂತ್ ಸಂಪರ್ಕದೊಂದಿಗೆ ಲೋಡ್ ಮಾಡಬವುದು. ಇದರರ್ಥ ಬಳಕೆದಾರರು ಈ S Pen ಬ್ಲೂಟೂತ್ ಮೂಲಕ ಸೆಲ್ಫಿ ಫೋಟೋವನ್ನು ಕ್ಲಿಕ್ ಮಾಡಬಹುದು. YouTube ವೀಡಿಯೊಗಳನ್ನು ನೋಡಬವುದು. ಮತ್ತು ಹೆಚ್ಚಿನದನ್ನು ಈ ರೀತಿಯ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಇದು 24ನೇ ಆಗಸ್ಟ್ 2018 ರಿಂದ ಸ್ಮಾರ್ಟ್ಫೋನ್ ಖರೀದಿಸಲು ಲಭ್ಯವಿರುತ್ತದೆ.
ಈ ಹೊಸ ನೋಟ್ ನಿಮಗೆ 6.4 ಇಂಚಿನ QHD+ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ 2960 x 1440 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಮತ್ತು 516 PPI ಪಿಕ್ಸೆಲ್ ಸಾಂದ್ರತೆಯೊಂದಿಗೆ ಲೋಡ್ ಆಗುತ್ತದೆ. ಈ ಫೋನ್ ಅಮೇರಿಕ ಮಾರುಕಟ್ಟೆಯ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ನಿಂದ ಸ್ಮಾರ್ಟ್ಫೋನ್ ಶಕ್ತಿಯನ್ನು ಹೊಂದುತ್ತದೆ. ಅದೇ ರೀತಿಯಲ್ಲಿ Exynos 9810 ಸಿಸ್ಟಮ್ ಚಿಪ್ ಒಳಗೊಂಡಿದೆ. ಈ ಫೋನ್ ಎರಡು ಮೆಮೊರಿ ಕಾನ್ಫಿಗರೇಶನ್ಗಳಲ್ಲಿ ಬರುತ್ತದೆ. 6GB ಯ RAM ಮತ್ತು 128GB ಸ್ಟೋರೇಜ್ ಆಯ್ಕೆ ಮತ್ತು 8GB ಯ RAM ಮತ್ತು 512GB ಯ ಇಂಟರ್ನಲ್ ಸ್ಟೋರೇಜಿನೊಂದಿಗೆ 1 ಮೈಕ್ರೋ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ ಮತ್ತಷ್ಟು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ.
ಇದರ ಡ್ಯೂಯಲ್ ಕ್ಯಾಮರಾ ಸೆಟಪ್ 12MP ಪ್ರೈಮರಿ ಸೆನ್ಸರೊಂದಿಗೆ ಸಂಯೋಜನೆಯೊಂದಿಗೆ ವೇರಿಯಬಲಾಗಿ ಬರುತ್ತದೆ. ಅಂದರೆ f/ 1.5 ಮತ್ತು f/ 2.4 ರಂಧ್ರಗಳ ನಡುವಿನ ಒಂದು ಸ್ವಿಚ್ ನಿಆಡಲಾಗಿದೆ. ಇದರ ಡುಯಲ್ ಸೆನ್ಸರ್ 12 ಮೆಗಾಪಿಕ್ಸೆಲ್ ಟೆಲಿಫೋಟೋ ಸಂವೇದಕವನ್ನು 2x ಆಪ್ಟಿಕಲ್ ಝೂಮ್ ಮತ್ತು f/ 2.4 ಅಪೆರ್ಚರ್ ಅಳವಡಿಸಿಕೊಂಡಿರುತ್ತದೆ. ಮತ್ತು ಮುಂದೆ ಫೋನ್ 8 ಮೆಗಾಪಿಕ್ಸೆಲ್ ಶೂಟರ್ ಹೊಂದಿದೆ.
ಈ ಫೋನ್ ಫಾಸ್ಟ್ ಚಾರ್ಜಿಂಗ್ ಮತ್ತು ವಯರ್ಲೆಸ್ ಚಾರ್ಜಿಂಗ್ನೊಂದಿಗೆ 4000mAh ಬ್ಯಾಟರಿ ಹೊಂದಿದೆ. ಕಂಪೆನಿಯು ನೋಟ್ ಸರಣಿಯಲ್ಲಿ ಸೇರಿಸಿದ ಅತಿದೊಡ್ಡ ಬ್ಯಾಟರಿ ಎಂದು ಕಂಪನಿ ಹೇಳುತ್ತದೆ. IP68 ಪ್ರಮಾಣೀಕರಣ ಐರಿಸ್ ಸ್ಕ್ಯಾನಿಂಗ್, ಫಿಂಗರ್ಪ್ರಿಂಟ್ ಸಂವೇದಕ ಮತ್ತು ಫೇಸ್ ಅನ್ಲಾಕ್ನೊಂದಿಗೆ ಫೋನ್ ಸೇರಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.