ಕಳೆದ ದಿನಗಳಲ್ಲಿ ಫ್ಲಿಪ್ಕಾರ್ಟ್ನಿಂದ ಬಹಳಷ್ಟು ಕೊಡುಗೆಗಳು ಮತ್ತು ರಿಯಾಯಿತಿಗಳು ನೀಡಿದ್ದನ್ನು ನೀವು ಕಾಣುವಿರಿ ಅದೇ ರೀತಿಯಲ್ಲಿ ಈಗ ಗೂಗಲ್ ಪಿಕ್ಸೆಲ್ ಫೋನ್ನ ಹಲವು ವ್ಯವಹಾರಗಳ ನಂತರ ಫ್ಲಿಪ್ಕಾರ್ಟ್ ಅದರ ಬಿಗ್ ಶಾಪಿಂಗ್ ಡೇಸ್ ಮಾರಾಟವನ್ನು ನಾಳೆ 13ನೇ ಮೇ ರಂದು ಪ್ರಾರಂಭಿಸುತ್ತದೆ ಎಂದು ಬಹಿರಂಗಪಡಿಸಿದೆ. ಇದರಲ್ಲಿ ಹಾನರ್ 9, ಹಾನರ್ 9 ಲೈಟ್, ಹಾನರ್ 7X, ಹಾನರ್ 9i, ಹಾನರ್ 8 ಪ್ರೊ ಮತ್ತು ಮುಂಬರುವ ಶಾಪಿಂಗ್ ಮಾರಾಟದಲ್ಲಿ ಈ ಸಾಧನಗಳು 7000 ರೂಗಳಿಂದ ಶುರುವಾಗಿ ಮತ್ತು 10% ಕ್ಯಾಶ್ಬ್ಯಾಕ್ಗಳ ರಿಯಾಯಿತಿಗಳನ್ನು ನೀಡಲಿವೆ.
ಅದೇ ರೀತಿಯಲ್ಲಿ ಕೆಲವು ಸಾಧನಗಳ ಫ್ಲಾಶ್ ಮಾರಾಟದೊಂದಿಗೆ ನೋಟ್ಬುಕ್ಗಳು, ಕ್ಯಾಮೆರಾಗಳು, ಸ್ಟ್ರೀಮಿಂಗ್ ಸಾಧನಗಳು, ಬ್ಲೂಟೂತ್ ಮತ್ತು ಸ್ಮಾರ್ಟ್ ಸ್ಪೀಕರ್ಗಳು, ಹೆಡ್ಫೋನ್ಗಳು, ವೈರ್ಲೆಸ್ ಸೌಂಡ್ಬಾರ್ಗಳು, ಮೊಬೈಲ್ ಬಿಡಿಭಾಗಗಳು, ಟೇಬಲ್;ಟ್ಯಾಬ್ಲೆಟ್ಗಳು, ಪವರ್ ಬ್ಯಾಂಕ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಇತರ ಸಾಧನಗಳಲ್ಲಿ ಹಲವಾರು ರಿಯಾಯಿತಿಗಳನ್ನು ಪಡೆಯಬಹುದು. ಗ್ರಾಹಕರಿಗೆ ಸುಲಭವಾದ ಕಂತುಗಳನ್ನು EMI ನೀಡಲು ಇ ಕಾಮರ್ಸ್ ದೈತ್ಯ ಸಹ HDFC ಬ್ಯಾಂಕಿನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.
ಇದು HDFC ಬ್ಯಾಂಕ್ ಕಾರ್ಡ್ ಬಳಸುವ ಬಳಕೆದಾರರಿಗೆ 10% ರಿಯಾಯಿತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇನ್ಫಿನಿಕ್ಸ್, ಒಪೊಪೊ, ಸ್ಯಾಮ್ಸಂಗ್ ಮತ್ತು ಶೋಮಿಯಂತಹ ಇತರ ಬ್ರಾಂಡ್ಗಳನ್ನು ಸಹ ಈ ಪ್ರಸ್ತಾಪವನ್ನು ಒಳಗೊಂಡಿದೆ. ಮತ್ತು ಈ ಮಾರಾಟದ ಅಡಿಯಲ್ಲಿ 3GB ರಾಮ್ ಮತ್ತು 32GB ಸ್ಟೋರೇಜ್ ರೆಡ್ಮಿ ನೋಟ್ 5 ರೂ 8,999 ದರದಲ್ಲಿ ಬರುತ್ತದೆ ಆದರೆ ಇದರ ಮೂಲ ಬೆಲೆಗೆ 1000 ರೂ ಹೆಚ್ಚಿಸಿದೆ.
ಅದೇ ರೀತಿಯಲ್ಲಿ ಮತ್ತೊಂದು ಪ್ರೀಮಿಯಂ ಹ್ಯಾಂಡ್ಸೆಟ್ Mi Mix 2 ಇದು ನಿಮಗೆ ಫ್ಲಿಪ್ಕಾರ್ಟ್ನಲ್ಲಿ 25,999 ರೂಗಳಲ್ಲಿ ಲಭ್ಯವಾಗುತ್ತವೆ. ಮತ್ತು ಇದರ ವಿನಿಮಯಕ್ಕೆ 2000 ಹೆಚ್ಚುವರಿ ರಿಯಾಯಿತಿ ನೀಡಲಿದೆ. ಇದಲ್ಲದೆ ಹೊಸ ಮೋಟೋ X4 ಫೋನಿನ 3GB ಯ ರಾಮ್ ಕೇವಲ 15,999 ನಲ್ಲಿ ಮಾರಾಟ ಮಾಡಲಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.