ಇದು ಹೊಚ್ಚ ಹೊಸ Fitbit ionic ಸ್ಮಾರ್ಟ್ವಾಚ್ ಇದರ ಸಾಮರ್ಥ್ಯ ಕೇಳಿದ್ರೆ ನಿಜಕ್ಕೂ ಅಬ್ಬಾ ಅನ್ಬೇಕಾಗುತ್ತದೆ.

Updated on 30-May-2018

ಇವತ್ತು ನಾವು ಒಂದು ಹೊಚ್ಚ ಹೊಸ Fitbit ionic ಸ್ಮಾರ್ಟ್ವಾಚೀನ ಸಂಪೂರ್ಣವಾದ ವಿವರಣೆ ನೋಡೋಣ. ಇಂದಿನ ದಿನಗಲ್ಲಿ ಸ್ಮಾರ್ಟ್ಫೋನ್ಗಳಂತೆ ಸ್ಮಾರ್ಟ್ ವಾಚ್ಗಳು ಸಹ ಸ್ಮಾರ್ಟ್ ಮಾರುಕಟ್ಟೆಯಲ್ಲಿ ತಲೆ ಎತ್ತುತ್ತಿವೆ. ಏನಪ್ಪಾ ಈ Fitbit ionic ಸ್ಮಾರ್ಟ್ವಾಚ್ ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದ್ರ ಬಗ್ಗೆ ಇಲ್ಲಿ ತಿಳ್ಕೊಳೋಣ.

ಈ ಹೊಸ OS2.0 ತಮ್ಮದೇಯಾದ PurePuls ತಂತ್ರಜ್ಞಾನವನ್ನು ಬಳಸಿಕೊಂಡು ಆಪ್ಟಿಕಲ್ ಹಾರ್ಟ್ ರೇಟ್ ಮಾನಿಟರನ್ನು ಹೊಂದಿದೆ. ಇದರಲ್ಲಿ ಸ್ಥಿರವಾದ ಹಾರ್ಟ್ ರೇಟ್ ಮೇಲ್ವಿಚಾರಣೆಯನ್ನು ನಿಮಗೆ ಒದಗಿಸುತ್ತದೆ. ಈ ವಾಚ್ 50 ಮೀಟರ್ಗಳಷ್ಟು ನೀರು ನಿರೋಧಕವಾಗಿದ್ದು 348x250p ರೆಸೊಲ್ಯೂಶನ್ನೊಂದಿಗೆ 1.42 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ನಿಮ್ಮ ರನ್ನಿಂಗ್, ಎಕ್ಸರ್ಸೈಜ್ಗಳನ್ನು ಟ್ರ್ಯಾಕ್ ಮಾಡಿ ಸರಿಯಾದ ಡೇಟಾವನ್ನು ಹೊಸಾಗಿಸುತ್ತದೆ.

ಒಂದು ವೇಳೆ ಜಿಮ್ ವರ್ಕೌಟ್ ಮಾಡುವವರಲ್ಲಿ ಒಬ್ಬರಾಗಿದ್ದಾರೆ ಇದು ನಿಮಗೆ ಅತ್ಯುತ್ತಮವಾದ ಆಯ್ಕೆಯಾದಾಗಿದೆ. ಅಲ್ಲದೆ ಈಗಾಗಲೇ ಹೇಳಿದಂತೆ ಇದು ನೀರು ನಿರೋಧಕವಾಗಿದ್ದು ನೀವು ಈಜುವಾಗ, ಸ್ನಾನ ಮಾಡುವಾಗ, ನೀರಿನಲ್ಲಿ ಕೆಲಸ ಮಾಡಲು ಸಹ ಬಳಸಬವುದಾಗಿದೆ. ಅಷ್ಠೆಯಲ್ಲಿದೆ ಇದರಲ್ಲಿ ಫಿಟ್ಬಿಟ್ ಅಯೋನಿಕಲ್ಲಿ ಹೊಸ ತಂತ್ರಜ್ಞಾನದ OS2.0, ಹಾರ್ಡ್ವೇರ್, ಜೈರೊ ಸೆನ್ಸರ್,ಎಸ್ಲೇರಿಮೀಟರ್, ಅಲ್ಟಿಮೀಟರ್ ಒಟ್ಟೆರೆಯಾಗಿ ಇವೇಲ್ಲ ನಿಮ್ಮ ಎಲ್ಲ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ. ಈಗ ಇದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತೆ ಇದರ ಕಾರ್ಯಗೇನು ತಿಳಿಯೋಣ.         

ಈ ಹೊಸ ಫಿಟ್ಬಿಟ್ OS2.0 ನಿಮ್ಮೊಂದಿಗಿರುವಾಗ ನಿಮ್ಮ ಸ್ಮಾರ್ಟ್ಫೋನ್ ನೀವು ವಾಚ್ನಲ್ಲಿ ನಿಮ್ಮ ಅಧಿಸೂಚನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಆದರೆ ನೀವು ಸಂವಹನ ಮಾಡಲು ಸಾಧ್ಯವಿಲ್ಲ ಅವರು. ನೀವು 2GB ಇಂಟರ್ನಲ್ ಸ್ಟೋರೇಜಿನ ಭಾಗವನ್ನು ಬಳಸುವ ವಾಚ್ನಲ್ಲಿ ಅಪ್ಲಿಕೇಶನ್ಗಳನ್ನು ಸ್ಥಾಪಿಸಬಹುದು, ಆದರೆ ಇದೀಗ Fitbit OS 2.0 ಗೆ ಹೊಂದಿಕೊಳ್ಳುವ ಕೆಲವೇ ಆಯ್ಕೆಗಳಿವೆ. ಈ ಹೊಸ ಸ್ಮಾರ್ಟ್ ವಾಚ್ ತನ್ನದೆಯಾದ smartwatch/fitnesstracker ನ ಅಪರೇಟಿಂಗ್ ಸಿಸ್ಟಮಿಂದ ತಯಾರಾಗಿದ್ದು ಹಲವಾರು ರೀತಿಯ ಅನುಕೂಲತೆಗಳನ್ನು ನೀಡುತ್ತದೆ. 

ಇದರಲ್ಲಿನ ಅಪ್ಲಿಕೇಶನನ್ನು ನಿಮ್ಮ ಆಂಡ್ರಾಯ್ಡ್ ಅಥವಾ iOS ಮೂಲಕ ಇದರಲ್ಲಿನ ನೋಟಿಫಿಕೇಶನ್, ಕರೆಗಳನ್ನು ಪಡೆಯಬವುದು. ಆದರೆ ನೀವೊಬ್ಬ iOS ಬಳಕೆದಾರರಾಗಿದ್ದರೆ ಸದ್ಯಕ್ಕೆ ಇದರಲ್ಲಿನ ಮೆಸೇಜ್ಗಳಿಗೆ ರೆಸ್ಪೋನ್ಸ್ ಮಾಡಲಾಗುವುದಿಲ್ಲ. ಫಿಟ್ಬಿಟ್ ತನ್ನದೆಯಾದ ಹೊಸ ಅಪ್ಡೇಟ್ಗಳನ್ನು ಬಿಟ್ಟಿದೆ ಇದರಿಂದ ಆಂಡ್ರಾಯ್ಡ್ ಬಳಕೆದಾರರು ಮೆಸೇಜ್ಗಳಿಗೆ ರಿಪ್ಲೇ ಮಾಡಬವುದು. ಈ ಹೊಸ ಫಿಟ್ಬಿಟ್ ಐಕೊನಿಕಲ್ಲಿನ OS ಏನಪ್ಪಾ ಮಾಡುತ್ತೆ ಅಂದ್ರೆ ಇದು ಹಲವಾರು ಅಪ್ಲಿಕೇಶನ್ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ.

ಅದರಲ್ಲಿ ಫಿಟ್ಬಿಟ್ ಕೋಚ್ ಒಂದಾಗಿದೆ. ಏನಪ್ಪಾ ಈ ಫಿಟ್ಬಿಟ್ ಕೋಚ್ ಇದು ನಮಗೆ ಹೇಗೆ ಸಹಾಯ ಮಾಡುತ್ತೆ ಅಂದ್ರೆ ಇದ್ರಲ್ಲಿ ಈಗಾಗಲೇ ಪ್ರೀ ವರ್ಕೌಟ್ ಪ್ರೋಗ್ರಾಮ್ಗಳನ್ನು ಅಪ್ಲೋಡ್ ಮಾಡಲಾಗಿದ್ದು ಇದರ ಟಚ್ಸ್ಕ್ರೀನ್ ನಿಮಗೊಬ್ಬ ಒಳ್ಳೆ ಗೈಡಾಗಿ ಏನು ಮಾಡಬೇಕು ಎಷ್ಟು ಮಾಡಬೇಕು ಅನ್ನುವ ಎಲ್ಲ ಮಾಹಿತಿಯನ್ನು ನೀಡುತ್ತದೆ. ಅಂದ್ರೆ ಇದರ ಫಿಟ್ಬಿಟ್ ಕೋಚ್ ನಿಜಕ್ಕೂ ಹೆಚ್ಚು ಆಕರ್ಷಣೀಯವಾಗಿದ್ದು ನೀವು ಇದರೊಂದಿಗೆ ಮನೆಯಲ್ಲೇ ಅದ್ಭುತವಾದ ಎಕ್ಸರ್ಸೈಜ್ಗಳನ್ನು ಮಾಡಬವುದು. 

ಕೊನೆಯದಾಗಿ ಇದರ ಬ್ಯಾಟರಿ ಬಾಳಿಕೆಯ ಬಗ್ಗೆ ಹೇಳಬೇಕಾದರೆ ಇದು ನಿಮಗೆ 5 ದಿನಗಳ ಧೀರ್ಘಕಾಲದ ಬ್ಯಾಟರಿ ಲೈಫನ್ನು ನೀಡುತ್ತದೆ. ಮತ್ತು ಇದರ ಬೆಲೆ 22,990 ರೂಗಳಾಗಿದ್ದು ಅಮೆಜಾನಿನಲ್ಲಿ ಡೀಲ್ ಸೇಲಲ್ಲಿ ಕೆಲವೋಮ್ಮೆ ಕಡಿಮೆ ಬೆಲೆಗೂ ಲಭಿಸುತ್ತದೆ. ಒಟ್ಟಾರೆಯಾಗಿ ಫಿಟ್ಬಿಟ್ ಐಕೊನಿಕ್ ಈ ಒಂದು ಬೆಲೆಯ ರೇಂಜಲ್ಲಿ ಅತ್ಯುತ್ತಮವಾದ ಟ್ರಕರ್ ಮಾತ್ರವಲ್ಲದೆ ಡಿಸೆಂಟ್ ಲುಕ್ ನೀಡುವ ಸ್ಮಾರ್ಟ್ವಾಚಾಗಿದೆ. 

ಇದು ಸಿಂಪಲಾಗಿ ತೆಳ್ಳಗಿದ್ದು ಇದರಲ್ಲಿನ ಟಚ್ ನಿಜಕ್ಕೂ ಹೆಚ್ಚು ಆಕರ್ಷಣೀಯವಾಗಿದೆ.  ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :