ನಿಮಗಿದು ಗೋತ್ತಾ Xiaomi ಕಂಪನಿ ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ಫೋನ್ಗಳ ಜೋತೆಯಲ್ಲಿ ಹೆಡ್ಫೋನ್ ಏಕೆ ಕೋಡೋಲ್ಲ..

ನಿಮಗಿದು ಗೋತ್ತಾ Xiaomi ಕಂಪನಿ ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ಫೋನ್ಗಳ ಜೋತೆಯಲ್ಲಿ ಹೆಡ್ಫೋನ್ ಏಕೆ ಕೋಡೋಲ್ಲ..

ಇದು ವೆಚ್ಚ ಕಡಿತ ಮಾಡುವ ತಂತ್ರವಾಗಿದೆಯೇ Xiaomi ಸಾಧನಗಳನ್ನು MI5 ನಂತಹ ಉನ್ನತ ಮಟ್ಟದ ಸಾಧನಗಳನ್ನು ಹೊರತುಪಡಿಸಿ ಹೆಚ್ಚಿನ ಫೋನ್ಗಳನ್ನು ಅತ್ಯಂತ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ ಸಾಮಾನ್ಯವಾಗಿ ನಿರ್ಮಿಸಲಾಗುತ್ತದೆ. ಅಲ್ಲದೆ ಈ ಬ್ರಾಂಡ್ ಇತ್ತೀಚೆಗೆ ಕೆಲವೇ ವರ್ಷಗಳಿಂದ ಬೆಳೆಯುತ್ತಿರುವ ಹೊಸ ಸ್ಮಾರ್ಟ್ಫೋನ್ ಕಂಪನಿಯಾಗಿದ್ದು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ತನ್ನ ಹೊಸ ಉಡಾವಣೆಗಳನ್ನು ಸರಬರಾಜು ಮಾಡುವ ಇಂದಿನ ದಿನಗಳಲ್ಲಿ ಬೆಲೆ ನಿಗದಿ ಮಾಡುವುದು ಬಹಳ ಮುಖ್ಯವಾದ ಅಂಶವಾಗಿದೆ. 

ನೀವು ಈವರೆಗೆ Xiaomi ಯ ಲಭ್ಯವಿರುವ ಎಲ್ಲಾ ಫೋನಗಳ ಬೆಳೆಯನ್ನು ಒಮ್ಮೆ ನೀವು ನೋಡಬವುದು ಇವೇಲ್ಲ ಮಧ್ಯಮ ಅಂದ್ರೆ ಒಂದು ರೀತಿಯ ಬಜೆಟ್ ಫೋನ್ಗಳೆಂದು ಹೇಳಬವುದು. ಅಲ್ಲದೆ ಇದರ ಪವರ್ ಬ್ಯಾಂಕ್ ಮತ್ತು ಕೆಲ ಹೆಡ್ಫೋನ್ಗಳು ಸಹ ವೆಚ್ಚಗಳ ಮಧ್ಯಮ ವ್ಯಾಪ್ತಿಯಲ್ಲಿವೆ ಎಂದು ಗಮನಿಸಬವುದು. ಈ ಬೆಲೆಯು ಕಂಪನಿಯ ಉತ್ಪಾದನಾ ವೆಚ್ಚ, ಬಾಕ್ಸಿಂಗ್ ವೆಚ್ಚ, ವರ್ಗಾವಣ ಶುಲ್ಕಗಳು, ತೆರಿಗೆಗಳು, ಆಮದು ಸುಂಕ, ಲಾಭಾಂಶ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. 

ಈ ಎಲ್ಲಾ ವೆಚ್ಚಗಳ ನಂತರ ಅವರು ಚಾರ್ಜರ್, ಯುಎಸ್ಬಿ ಕೇಬಲ್ ಇತ್ಯಾದಿಗಳನ್ನು ಪ್ರತಿ ಫೋನಿನ ಜೋತೆಯಲ್ಲಿ ಸಾಮಾನ್ಯವಾಗಿಯೇ ಒದಗಿಸುತ್ತಾರೆ. ಆದ್ದರಿಂದ ಒಟ್ಟಾರೆಯ ವೆಚ್ಚ ತುಂಬಾ ಹೆಚ್ಚಾಗುತ್ತದೆ ಮತ್ತು ಲಾಭಾಂಶ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಮಾರ್ಟ್ಫೋನ್ ಇಯರ್ಫೋನ್ಗಳನ್ನು ಒದಗಿಸುವುದಿಲ್ಲ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಅವರು ಇಯರ್ಫೋನ್ಗಳನ್ನು ಒದಗಿಸಿದರೂ ಅದು ಕಡಿಮೆ ಗುಣಮಟ್ಟದ್ದಾಗಿರುತ್ತದೆ.

ಆದ್ದರಿಂದ ಕಡಿಮೆ ಗುಣಮಟ್ಟದ ಫೋನ್ಗಳನ್ನು ಒದಗಿಸುವ ಮೂಲಕ ತಮ್ಮ ಫೋನ್ ಗುಣಮಟ್ಟ ಗ್ರಹಿಕೆಯನ್ನು ಕೆಳದರ್ಜೆಗಿಳಿಸಲು ಅವರು ಶಕ್ತರಾಗಿರುವುದಿಲ್ಲ. ಅದಕ್ಕಾಗಿಯೇ ಇಯರ್ಫೋನ್ಗಳನ್ನು ತೊಡೆದುಹಾಕಲು ಉತ್ತಮ ನಿರ್ಧಾರವಾಗಿದೆ. ಇದರ ಮೂಲ ಬೆಲೆಯೆ ಕಡಿಮೆಯಾಗಿದ್ದು ಅವರು ಯಾವಾಗಲೂ ಆನ್ಲೈನ್ನಲ್ಲಿ ಏಕೆ ಮಾರಾಟ ಮಾಡುತ್ತಾರೆಂದು ನಿಮಗೆ ಆಶ್ಚರ್ಯವೇನಿಲ್ಲವೇ? ಅದೇ ಪ್ರಕಾರ ನೀವು ಇದನ್ನು ಆಫ್ಲೈನಿನಲ್ಲಿ ಪಡೆದರೆ ಇದರ ಬೆಲೆ ಭಾರಿ ಹೆಚ್ಚಾಗುತ್ತದೆ. 

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳೇನು? ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo