ಈಗ ನೀವು ನಿಮಗೆ ಬೇಕಾದ ನಿಮ್ಮ ಕುಟುಂಭ ಮತ್ತು ಸ್ನೇಹಿತರಿಗೆ ಯಾವುದೇ ವೀಡಿಯೊ ಅಥವಾ ಫೋಟೋಗಳನ್ನು ಕಳುಹಿಸುವಂತೆಯೇ ವಾಟ್ಸಪ್ಪ್ ಈಗ ಡಿಜಿಟಲ್ ಪೇಮೆಂಟ್ಗಳನ್ನುಸಹ ಕಳುಹಿಸಲು ನಿಮಗೆ ಅವಕಾಶ ನೀಡುವ ಹೊಸ ವೈಶಿಷ್ಟ್ಯವನ್ನು ಕಂಪನಿ ಇತ್ತೀಚೆಗೆ ಪರಿಚಯ ಮಾಡಿದೆ. ಈಗ ನೀವು WhatsApp Pay ಅನ್ನು ನಿಮ್ಮ ಆಂಡ್ರಾಯ್ಡ್ ಮತ್ತು iOS ಎರಡಲ್ಲೂ ಲಭ್ಯವಿದೆ ಮತ್ತು ಇದು ಶೀಘ್ರವೇ ಮೊದಲು ಭಾರತಕ್ಕೆ ಮಾತ್ರ ಪ್ರವೇಶಿಸುವ ನಿರೀಕ್ಷೆಯಿದೆ. ಇದರಲ್ಲಿ ಸ್ನೇಹಿತರೇ ನಿಮಗೆ 2 ರೀತಿಯ ಕೆಲಸ ಮಾಡಬೇಕಾಗುತ್ತದೆ. ಅದೇನು ಮತ್ತು ಹೇಗೆ ಎಂಬುದನ್ನು ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ.
>ನಿಮ್ಮ ವಾಟ್ಸಪ್ಪ್ ಅಕೌಂಟಿಂಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಬೇಕಾಗುತ್ತದೆ.
>ನಂತರ ಬೇಕಾದವರಿಗೆ ಹಣವನ್ನು ನಿಮ್ಮ ವಾಟ್ಸಪ್ಪಿನಿಂದ ಕಳುಯಿಸುವುದು.
ಬ್ಯಾಂಕ್ ಖಾತೆಯನ್ನು ವಾಟ್ಸಾಪ್ಪ್ಗೆ ಸೇರಿಸುವುದೇಗೆ?
ಹಂತ 1: WhatsApp ತೆರೆದು > ಸೆಟ್ಟಿಂಗ್ ಹೋಗಿ > ಪೆಮೇಟ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ 2: ಪೇಮೆಂಟ್ ಪುಟದಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಿ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
ಹಂತ 3: ನೀವು ಇದರ ನಿಯಮಗಳು ಮತ್ತು ಷರತ್ತುಗಳಿಗೆ ಒಪ್ಪಿದರೆ Accept ಮತ್ತು Continue ಮೇಲೆ ಟ್ಯಾಪ್ ಮಾಡಿ.
ಹಂತ 4: ನಿಮಗೆ ಬಂದ SMS ಮೂಲಕ ಪರಿಶೀಲನೆ ಮಾಡಿ ಮತ್ತು ಲಿಂಕ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ವಿಧಾನವನ್ನು ಅನುಸರಿಸಿ.
ಹಂತ 5: ಇದೀಗ ನೀವು ಎಲ್ಲಾ UPI ಬೆಂಬಲಿತ ಬ್ಯಾಂಕುಗಳ ಪಟ್ಟಿಯನ್ನು ನೋಡುವಿರಿ. ಈ ಸ್ವರೂಪವು ಸಾಮಾನ್ಯವಾಗಿ ಬ್ಯಾಂಕ್ ಹೆಸರು ಮತ್ತು ನಿಮ್ಮ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಗಳು ಲಭ್ಯವಿರುತ್ತದೆ.
ಹಂತ 6: ನೀವು ಒಂದೇ ಬ್ಯಾಂಕಿನಲ್ಲಿ ಅನೇಕ ಖಾತೆಗಳನ್ನು ಹೊಂದಿದ್ದರೆ ಅದು ಬಹು ಆಯ್ಕೆಗಳನ್ನು ತೋರಿಸುತ್ತದೆ. ಆ ಮೂಲಕ ನೀವು ಅಪ್ಲಿಕೇಶನ್ಗೆ ಲಿಂಕ್ ಮಾಡಲು ಬಯಸುವ ಒಂದನ್ನು ನೀವು ಅಲ್ಲಿಂದ ಆರಿಸಬೇಕಾಗುತ್ತದೆ.
ಹಂತ 7: ಬ್ಯಾಂಕನ್ನು ಆಯ್ಕೆ ಮಾಡಿದ ನಂತರ ಅಪ್ಲಿಕೇಶನ್ ವಿವರಗಳನ್ನು ಪಡೆದು ಮತ್ತು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ತೋರಿಸುತ್ತದೆ. ಎಲ್ಲವನ್ನೂ ಒಮ್ಮೆ ಮಾಡಿದ ನಂತರ Complete ಎಂಬ ಸಂದೇಶವನ್ನು ನೀವು ನೋಡುತ್ತೀರಿ. ಅಂದರೆ ನಿಮ್ಮ ವಾಟ್ಸಪ್ಪ್ ಅಕೌಂಟಿಂಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಿದ್ದಿರಿ ಎಂಧಾರ್ಥ.
ಈಗ ನಿಮಗೆ ಬೇಕಾದವರಿಗೆ ಹಣವನ್ನು ನಿಮ್ಮ ವಾಟ್ಸಪ್ಪಿನಿಂದ ಕಳುಯಿಸುವುದೇಗೆ?
ಹಂತ 1: ಮೊದಲು ನೀವು ಹಣ ಕಳುಹಿಸಲು ಬಯಸುವವರಿಗೆ WhatsApp ಚಾಟ್ ಮೇಲೆ ಟ್ಯಾಪ್ ಮಾಡಿ.
ಹಂತ 2: ಇದು ಆಂಡ್ರಾಯ್ಡ್ಗೆ ಬಂದಾಗ Attach (ಪಿನ್) ಬಟನ್ ಟ್ಯಾಪ್ ಮೇಲೆ ಮಾಡಿ ಮತ್ತು ಪ್ಲಸ್ ಬಟನ್ ಮೇಲೆ ಐಫೋನ್ ಟ್ಯಾಪ್ನಲ್ಲಿ ಟ್ಯಾಪ್ ಮಾಡಿ.
ಹಂತ 3: ಇದೀಗ ಹಣವನ್ನು ಕಳುಹಿಸಲು Payment ಟ್ಯಾಪ್ ಮಾಡಿ ಮತ್ತು ನೀವು ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ. ಹೆಚ್ಚುವರಿಗಾಗಿ ಬಳಕೆದಾರರು ಸಣ್ಣ ಮೆಸೇಜನ್ನು ಸಹ ಸೇರಿಸಬಹುದು.
ಹಂತ 4: Payment ಆಯ್ಕೆಯನ್ನು ಖಚಿತಪಡಿಸಲು ನೀವು ಲಿಂಕ್ ಮಾಡಿದ ಬ್ಯಾಂಕ್ ಖಾತೆಯ UPI PIN ಅನ್ನು ನಮೂದಿಸಿ.
ಹಂತ 5: ಒಮ್ಮೆ ನಿಮ್ಮ Transaction ಪೂರ್ಣಗೊಂಡ ನಂತರ ನಿಮ್ಮ Conversation ಪುಟದಲ್ಲಿ ಇದರ ಸಂದೇಶವನ್ನು ತೋರಿಸಲಾಗುತ್ತದೆ. ಈ ರೀತಿಯಲ್ಲಿ ಒಂದೇ ನಿಮಿಷದಲ್ಲಿ ಹಣ ಕಳುಯಿಸಬವುದು.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.