ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 14% ರಷ್ಟು ಬೆಳವಣಿಗೆಯಾಗಿದ್ದು ಭಾರತಕ್ಕೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಸ್ಮಾರ್ಟ್‌ಪೋನ್‌ಗಳ ಪ್ರಮಾಣ ಕೂಡ ಭಾರೀ ಹೆಚ್ಚಾಗಿದೆ. 2016 ರಲ್ಲಿ 24 ಕೋಟಿ ಸ್ಮಾರ್ಟ್‌ಪೋನ್‌ಗಳನ್ನು ಆಮದುಮಾಡಿಕೊಂಡಿದ್ದರೆ, 2017 ರಲ್ಲಿ ಒಟ್ಟು 28 ಕೋಟಿ ಸ್ಮಾರ್ಟ್‌ಪೋನ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ.
ಭಾರತದಲ್ಲಿ 4G ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರಮಾಣ ಶೇ 19 ರಷ್ಟು ಏರಿಕೆಯಾಗಿದ್ದು ನಿರೀಕ್ಷಿತವೆಂಬಂತೆ 3G ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರಮಾಣ 17% ರಷ್ಟು ಇಳಿಕೆಯಾಗಿದೆ. ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಜಿಯೋ 4G ಫೀಚರ್ ಫೋನ್ 27% ಮಾರುಕಟ್ಟೆಯನ್ನು ಪಡೆದುಕೊಂಡಿದೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೋರೇಷನ್ ವರದಿ ಮಾಡಿದೆ.
ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ 25% ರಷ್ಟು ಪಾಲು ಪಡೆಯುವ ಮೂಲಕ ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. 21% ರಷ್ಟು ಮಾರುಕಟ್ಟೆ ಪಾಲು ಪಡೆದಿರುವ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದ್ದರೆ.ಲೆನೆವೊ, ವಿವೊ ಮತ್ತು ಒಪ್ಪೊ ಕಂಪೆನಿಗಳು ನಂತರದ ಸ್ಥಾನದಲ್ಲಿವೆ.
ಇನ್ನು ಭಾರತದ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಕೇವಲ ಒಂದೇ ವರ್ಷದಲ್ಲಿ 10 ಮಿಲಿಯನ್‌ಗೂ ಹೆಚ್ಚು ಮಾರಾಟಕಂಡಿರುವ ಜಿಯೋ 4G ಫೀಚರ್ ಫೋನ್ 27 ಪರ್ಸೆಂಟ್ ಮಾರುಕಟ್ಟೆಯನ್ನು ಪಡೆದುಕೊಂಡು ಫೀಚರ್ ಫೋನ್ ಮಾರುಕಟ್ಟೆಯ ದಿಗ್ಗಜನಾಗಿದೆ ಎಂದು ಇಂಟರ್ನ್ಯಾಷನಲ್ ಡೇಟಾ ಕಾರ್ಪೋರೇಷನ್ ತನ್ನ ವರದಿಯಲ್ಲಿ ತಿಳಿಸಿದೆ.
ಆನ್‌ಲೈನ್ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಮುಂದಿದ್ದರೆ, ಆಫ್‌ಲೈನ್ ಮೊಬೈಲ್ ಮಾರುಕಟ್ಟೆಯಲ್ಲಿ ಈಗಲೂ ಸ್ಯಾಮ್‌ಸಂಗ್ ಕಂಪೆನಿಯೇ ದಿಗ್ಗಜ ಕಂಪೆನಿಯಾಗಿದೆ. ನಂತರದ ಸ್ಥಾನಗಳಲ್ಲಿ ವಿವೊ ಮತ್ತು ಒಪ್ಪೊ ಕಂಪೆನಿಗಳು ಜಾಗ ಪಡೆದಿವೆ. ಮಿ ಹೋಮ್‌ಗಳ ಮೂಲಕ ಆಫ್‌ಲೈನ್ ಮಾರುಕಟ್ಟೆಗೆ ಶಿಯೋಮಿ ಈಗ ಕಾಲಿಡುತ್ತಿರುವುದು ಇದಕ್ಕೆ ಕಾರಣ ಎನ್ನಬಹುದು.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.