ನಮ್ಮ ನಿಮ್ಮೆಲ್ಲರಿಗೂ ತಿಳಿದಂತೆ ಡಿಜಿಟಲ್ ಪ್ರಪಂಚವು ವೇಗವಾದ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂಬುದು ನಮಗೆ ತಿಳಿದಿದೆ. ನಾವು ಸುತ್ತಲೂ ನೋಡಿದರೆ ಫೇಸ್ಬುಕ್ ನಂತಹ ಸಾಮಾಜಿಕ ನೆಟ್ವರ್ಕಿಂಗ್ ಟ್ವೀಟರ್ ಇತ್ಯಾದಿಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ಗಾಗಿ ತನ್ನ ಸ್ವಂತ ಅಪ್ಲಿಕೇಶನನ್ನು ಹೊಂದಿವೆ. ನಾವು ತ್ವರಿತವಾದ ಮೆಸೇಜ್ ಅಪ್ಲಿಕೇಶನ್ಗಳು, ಫೇಸ್ಬುಕ್ ಮೆಸೆಂಜರ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡಿದರೆ ಇವು ನಮ್ಮ ಜೀವನದ ಮುಖ್ಯ ಭಾಗವಾಗಿಯೇ ಮಾರ್ಪಟ್ಟಿದೆ.
Hide Last Seen: ಇದು ಅಧಿಕೃತ WhatsApp ಅಪ್ಲಿಕೇಶನ್ನಲ್ಲಿ ಲಭ್ಯವಿರುವ ವೈಶಿಷ್ಟ್ಯವಾಗಿದೆ. ಇದರಲ್ಲಿ ಒಟ್ಟು 3 ಆಯ್ಕೆಗಳಿವೆ.
Everyone – ನಿಮ್ಮ ನಂಬರ್ ಯಾರ್ಯಾರ ಬಳಿ ಸೇವ್ ಇದೆಯೋ ಅವರೆಲ್ಲ ನಿಮ್ಮ ಲಾಸ್ಟ ಸೀನ್ ನೋಡಬವುದು.
My contacts – ಕೇವಲ ಫೋನ್ ಲಿಸ್ಟಲ್ಲಿ ಸೇವ್ ಆಗಿರುವವರು ಮಾತ್ರ ನಿಮ್ಮ ಲಾಸ್ಟ ಸೀನ್ ನೋಡಬವುದು.
Nobody – ಯಾರು ನಿಮ್ಮ ಲಾಸ್ಟ ಸೀನ್ ನೋಡಲಾಗುವುದಿಲ್ಲ. (ಆದರೆ ನೀವು ಮತ್ತು ನೀವು ಚಾಟ್ ಮಾಡುವವರು ಮಾತ್ರ ಚಾಟ್ ಮಾಡುವ ಸಮಯದಲ್ಲಿ ಒಬ್ಬರನೊಬ್ಬರು Online ನೋಡಬವುದು ಅಷ್ಟೇ.
Hide Blue Ticks: ಈಗ ಬ್ಲೂ ಟಿಕ್ ಮಾರ್ಕ್ಸ್ ಅನ್ನು ಮರೆಮಾಡಲು ಅನುಮತಿಸುವ ಒಂದು ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದರರ್ಥ ನೀವು ಸಂದೇಶವನ್ನು ಓದಿದರೂ ಕಳುಹಿಸುವವರು ಬ್ಲೂ ಟಿಕ್ ಮಾರ್ಕ್ಸ್ ಅನ್ನು ನೋಡುವುದಿಲ್ಲ.
Hide The Double Tick: ಮೇಲಿನ ವೈಶಿಷ್ಟ್ಯದಂತೆ ಇದು ಬಳಕೆದಾರರಿಗೆ ಡಬಲ್ ಟಿಕ್ ಅನ್ನು ಮರೆಮಾಡಲು ಅನುಮತಿಸುತ್ತದೆ. ಸಂದೇಶವನ್ನು ಇನ್ಬಾಕ್ಸ್ಗೆ ತಲುಪಿಸಲಾಗಿದೆಯೆಂದು ಕಳುಹಿಸುವವರಿಗೆ ಎಂದಿಗೂ ತಿಳಿದಿರುವುದಿಲ್ಲ.
Hide Typing Status: ಇದು ಬಹಳ ಉಪಯುಕ್ತವಾದ ಸಂಗತಿಯಾಗಿದೆ ಟೈಪಿಂಗ್ ಸ್ಥಿತಿಯನ್ನು ಮರೆಮಾಡಲು ಆಯ್ಕೆಯನ್ನು WhatsApp ಒದಗಿಸುವುದಿಲ್ಲ. ಆದಾಗ್ಯೂ WhatsAppನೊಂದಿಗೆ ನೀವು ಟೈಪಿಂಗ್ ಸ್ಥಿತಿಯನ್ನು ಮರೆಮಾಡಬಹುದು.
Maximum Upload Limit: ನೀವು ಈಗ WhatsApp ಅಪ್ಡೇಟೆಡ್ ಸಹಾಯದಿಂದ ನೀವು 50MB ಯಷ್ಟು ವೀಡಿಯೊಗಳನ್ನು ಮತ್ತು 16MB ಯಷ್ಟು ಆಡಿಯೊ ಫೈಲ್ಗಳನ್ನು ಸುಲಭವಾಗಿ ಕಳುಹಿಸಬಹುದು.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile