ಸ್ಮಾರ್ಟ್ಫೋನ್ ಬ್ರಾಂಡ್ ಕೊಮಿಯೊ ಚೀನಾದಿಂದ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಇತ್ತೀಚಿನ ಬ್ರ್ಯಾಂಡ್ ಹೊಸ ಆಗಿದೆ. ಭಾರತದಲ್ಲಿ ಮಿಡ್ ರೇಂಜ್ ವಿಭಾಗವನ್ನು ಪೂರೈಸಲು ಈ ಬ್ರ್ಯಾಂಡ್ ಹೆಚ್ಚು ಉದ್ದೇಶಿಸಿದೆ. ಭಾರತದಲ್ಲಿ ಬಿಡುಗಡೆ ಮಾಡಲು ಮೂರು ಹೊಸ ಫೋನ್ಗಳಲ್ಲಿ Comio P1, Comio S1 ಮತ್ತು Comio C1 ಸೇರಿಸಿದೆ.
Comio P1: ಈ ಹೊಸ ಸ್ಮಾರ್ಟ್ಫೋನಲ್ಲಿದೆ 5000mAh ಬ್ಯಾಟರಿ ಮತ್ತು 5.5 ಇಂಚಿನ ಎಚ್ಡಿ ಪ್ರದರ್ಶನದೊಂದಿಗೆ ಪವರ್ ಬಳಕೆದಾರರ ಮೇಲೆ ಕೇಂದ್ರೀಕರಿಸಿದೆ. ಇತರ ವೈಶಿಷ್ಟ್ಯಗಳಲ್ಲಿ 13MP ಹಿಂಬದಿಯ ಕ್ಯಾಮೆರಾ 8MP ಮುಂಭಾಗದ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಸಂವೇದಕ ಸೇರಿವೆ. ಹಾರ್ಡ್ವೇರ್ 3GB ಯ RAM ಮತ್ತು 32GB ಸ್ಟೋರೇಜನ್ನು ಒಳಗೊಂಡಿರುವುದಾಗಿ ನಿರೀಕ್ಷಿಸಲಾಗಿದೆ.
Comio S1: ಈ ಸ್ಮಾರ್ಟ್ಫೋನ್ ಲೋಹದ ಯುನಿಬಾಡಿ ಮತ್ತು 5.2 ಇಂಚಿನ ಎಚ್ಡಿ ಡಿಸ್ಪ್ಲೇಯೊಂದಿಗೆ ಸ್ಲಿಮ್ ಸಾಧನವಾಗಿ ತಯಾರಿಸಲಾಯಿದೆ. ಇದರ ಬ್ಯಾಕಲ್ಲಿದೆ 13MP ಕ್ಯಾಮೆರಾ ಮತ್ತು ಫ್ರಂಟಲ್ಲಿ 8MP ಕ್ಯಾಮರಾ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದರ ಹಾರ್ಡ್ವೇರ್ನಲ್ಲಿ 2GB ಯ RAM ಮತ್ತು ನಿಮಗೆ 32GB ಸ್ಟೋರೇಜ್ ಮತ್ತು 2700mAh ಬ್ಯಾಟರಿ ಒಳಗೊಂಡಿರುವುದಾಗಿ ನಿರೀಕ್ಷಿಸಲಾಗಿದೆ.
Comio C1: ಈ ಸ್ಮಾರ್ಟ್ಫೋನಲ್ಲಿ ನಿಮಗೆ ಸರೌಂಡ್ ಸೌಂಡ್ ಜೊತೆಗೆ ಹೈ-ಫೈ ಮ್ಯೂಸಿಕ್ ಸಾಮರ್ಥ್ಯದೊಂದಿಗೆ 5 ಇಂಚಿನ ಎಚ್ಡಿ ಡಿಸ್ಪ್ಲೇ ಮತ್ತು 1GB ಯ RAM ಮತ್ತು 32GB ಯ ಸ್ಟೋರೇಜಿನೊಂದಿಗೆ 2200mAh ಬ್ಯಾಟರಿಯೊಂದಿಗೆ 5MP ಬ್ಯಾಕ್ ಮತ್ತು 8MP ಫ್ರಂಟ್ ಕ್ಯಾಮೆರಾ ಹೊಂದಿದೆ.
ಈ ಎಲ್ಲಾ ಸ್ಮಾರ್ಟ್ಫೋನ್ಗಳಾದ್ಯಂತ ಸಾಮಾನ್ಯವಾದ ವೈಶಿಷ್ಟ್ಯಗಳು ಅಂದ್ರೆ 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ಗಳು, ಡ್ಯುಯಲ್ ಸಿಮ್ ಸ್ಲಾಟ್, ವಿಸ್ತರಿಸಬಹುದಾದ ಸ್ಟೋರೇಜ್, 4G ವೋಲ್ಟಿ, ವೈಫೈ, ಬ್ಲೂಟೂತ್, ಮತ್ತು ಜಿಪಿಎಸ್. ಎಲ್ಲಾ ಫೋನ್ಗಳು ಇತ್ತೀಚಿನ ಆಂಡ್ರಾಯ್ಡ್ 7.0 ನೊಂದಿಗೆ ಬಾಕ್ಸ್ನಿಂದ ಹೊರ ಬರುತ್ತವೆ. ಮತ್ತು ಯಾವುದೇ ಬ್ಲೋಟ್ವೇರ್ ಪೂರ್ವ ಲೋಡ್ ಆಗಿರುವುದಿಲ್ಲ.
ಅಲ್ಲದೆ ಇದರಲ್ಲಿ ನಿಮಗೆ ಆಂಟಿವೈರಸ್ ಆಂಟಿ ಥೆಫ್ಟ್ ಮತ್ತು ಇನ್ಟ್ರುಡಾರ್ ಸೆಲ್ಫ್ ಫೀಚರ್ ಸೇರಿದಂತೆ ಎಲ್ಲ ಫೋನ್ಗಳು ಪೂರ್ವ ಲೋಡ್ ಆಗಿರುವ ಭದ್ರತಾ ಪರಿಹಾರದೊಂದಿಗೆ ಬರುತ್ತದೆ. ಜಿಯೋ ಬಳಕೆದಾರರಿಗೆ Comio ಸ್ಮಾರ್ಟ್ಫೋನ್ನೊಂದಿಗೆ ಹೆಚ್ಚುವರಿ 20GB ಡೇಟಾವನ್ನು ಸಹ ಪಡೆಯುತ್ತದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.