ಹೊಚ್ಚ ಹೊಸ ಮತ್ತು Upcoming ಅಂದ್ರೆ ಮುಂದೆ ಬಿಡುಗಡೆಯಾಗಲಿರುವ ಫೋನ್ಗಳ ಪಟ್ಟಿ ಇಲ್ಲಿದೆ.

Updated on 05-Apr-2018

ಹೊಚ್ಚ ಹೊಸ ಮತ್ತು Upcoming ಅಂದ್ರೆ ಮುಂದೆ ಬಿಡುಗಡೆಯಾಗಲಿರುವ ಫೋನ್ಗಳ ಬಗ್ಗೆ ಮಾತನಾಡೋಣ ಮುಂಬರಲಿರುವ ದಿನಗಳಲ್ಲಿ ಹೊಸ ಸ್ಮಾರ್ಟ್ಫೋನನ್ನು ಖರೀದಿಸಲು ನೀವು ಯೋಜಿಸುತ್ತಿದ್ದರೆ ನಿಮ್ಮ ಮುಂದೆ ಆಯ್ಕೆ ಮಾಡಲು ನಿಮಗೆ ಸಾಕಷ್ಟು ಅವಕಾಶಗಳಿವೆ. ಆದರೆ ಇಷ್ಟು ಸ್ಮಾರ್ಟ್ಫೋನ್ಗಳಲ್ಲಿ ನೀವು ಯಾವುದನ್ನು ಆರಿಸಬೇಕು? ಆ ಫೋನಲ್ಲಿ ನಿಮ್ಮ ಪ್ರಮುಖ್ಯತೆ ಏನು? ಅದು ಬಜೆಟಿಗೆ ಸರಿಯಾದ ಫೋನಾ? ಈ ರೀತಿಯ ಹಲವಾರು ಪ್ರಶ್ನೆಗಳು ನಿಮ್ಮ ತಲೆ ಏರಿ ಇಳಿಯುತ್ತವೆ.

ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.

ಅದನ್ನು ಸುಲಭಗೊಳಿಸಲು ನಾವು ಅಂದ್ರೆ ಡಿಜಿಟ್ ಕನ್ನಡ ಮುಖ್ಯವಾಗಿ ಬರಿ 5 ಹೊಸ ಮತ್ತು ಮುಂಬರುವ ಫೋನ್ಗಳ ಪಟ್ಟಿಯನ್ನು ಇಲ್ಲಿ ಒಟ್ಟುಗೂಡಿಸಿದ್ದೇವೆ. ಈಗ ಆಯ್ಕೆ ಮಾಡಲು ಸಾಕಷ್ಟು ಸ್ಮಾರ್ಟ್ಫೋನ್ಗಳು ಇದ್ದರೂ ನಾವು ಈ ಪಟ್ಟಿಯಲ್ಲಿ ಕೆಲವು ಅತ್ಯುತ್ತಮವಾದ ಫೋನ್ಗಳನ್ನು ಇಟ್ಟಿದ್ದೇವೆ. ಇದರಲ್ಲಿ ಕೆಲವೊಂದು ಈಗಾಗಲೇ ಲಭ್ಯವಿವೆ ಮತ್ತು ಕೆಲವು ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿವೆ.

Redmi Note 5 Pro: ನೀವು ಒಂದು ಅತ್ಯುತ್ತಮವಾದಂತಹ ಸ್ಮಾರ್ಟ್ಫೋನನ್ನು 10 ರಿಂದ 15000 ರೂಪಾಯಿಗಳೊಳಗೆ ಹುಡುಕುತ್ತಿದ್ದರೆ ನೀವು ಶೋಮಿಯ ಹೊಚ್ಚ ಹೊಸ Redmi Note 5 Pro ಪಡೆಯಿರಿ. ಏಕೆಂದರೆ ಇದು Snapdragon 636 ರ ಚಿಪ್ಸೆಟಿನ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಇದಾಗಿದೆ. ಅದ್ದೂರಿಯ ಪರ್ಫಾರ್ಮೆನ್ಸ್ ಜೋತೆಗೆ ಉತ್ತಮವಾದ ಬೆಲೆಗೆ ತಕ್ಕ ಕ್ಯಾಮೆರಾ ನೀಡುತ್ತದೆ. ಅಲ್ಲದೆ ಇದರಲ್ಲಿದೆ Excellent ಬ್ಯಾಟರಿ ಲೈಫ್ ಮತ್ತು ನಯವಾದ ಸುಂದರ ಡಿಸ್ಪ್ಲೇ ಹೊಂದಿದೆ. ಆದರೆ ಇದರಲ್ಲಿನ ಆಂಡ್ರಾಯ್ಡ್ ವರ್ಷನ್ Android 8.0 Oreo out of the box ಪಡೆಯಲು ಬೆಂಬಲಿಸಿದರೆ ನಾನು ಇನ್ನು ಹೆಚ್ಚು ಸಂತೋಷಪಡುತ್ತಿದ್ದೆ. 

OnePlus 6: ಇದರ ಬಗ್ಗೆ ಕೆಲ ವದಂತಿಗಳು ಅನ್ನು ಗಾಳಿಯಲ್ಲಿಯೇ ಇದೆ. ಮತ್ತು ನೀವು OnePlus ಫ್ಯಾನಾಗಿದ್ದು ಬೆಸ್ಟ್ OnePlu ಫೋನನ್ನು ಹುಡುಕುತ್ತಿದ್ದರೆ ನೀವು ಮುಂಬರಲಿರುವ  ಸಾಧನಕ್ಕಾಗಿ ಸ್ವಲ್ಪ ದಿನಗಳ ಕಾಲ ಕಾಯ್ದರೆ ಒಳ್ಳೆಯದು.

Sony Xperia XZ2: ಸೋನಿ ಫ್ಯಾನ್ಗಳಿಗೆ ಈ ವರ್ಷ ಸಹಿಸುದ್ದಿಯೆಂದರೆ ಸೋನಿಯು 18:9 ಡಿಸ್ಪ್ಲೇಯೊಂದಿಗೆ Snapdragon 845 ರ ಚಿಪ್ಸೆಟಿನ ಜೋತೆಯಲ್ಲಿ ಈ ಹೊಚ್ಚ ಹೊಸ Sony Xperia XZ2 ಅನ್ನು ಬಿಡುಗಡೆ ಮಾಡಲಿದೆ. ಇದನ್ನು ನಾವು MWC ಯಲ್ಲಿ ನೋಡಿದೆವು. ಆದರೆ ಇದರ ಸಂಕ್ಷಿಪ್ತವಾದ ಮಾಹಿತಿಗಾಗಿ ಇನ್ನು ಸ್ವಲ್ಪ ದಿನ ಕಾಯಬೇಕಿದೆ.      

Nokia 8 Sirocco: ನೀವು ಈ ನೋಕಿಯಾ 8 ಸಿರೊಕ್ಕಾವನ್ನು ನೋಡುವಾಗ ಎಲ್ಲಕ್ಕೂ ಮೊದಲು ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಇದರ Design ಅಂದ್ರೆ ಇದನ್ನು ತಯಾರಿಸಿದ  ವಿನ್ಯಾಸ. ಈ ಫೋನ್ ಸಮಯಕ್ಕೆ ಸರಿಯಾದ ಆಂಡ್ರಾಯ್ಡ್ ಮತ್ತು ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತದೆ ಎಂದು ನೋಕಿಯಾ ಭರವಸೆ ನೀಡಿದೆ. ಫೋನ್ ಉತ್ತಮ ಹಾರ್ಡ್ವೇರನ್ನು ಹೊಂದಿದ್ದು ಇದರ ಮೇಲೆ ನಮ್ಮ ಕೈಗಳು ಹಾದು ಹೋಗಲು ಕಾಯುತ್ತಿವೆ. 

Samsung Galaxy S9 Plus: ನೀವು ಈಗ ಒಂದು ಪ್ರಮುಖ ಸ್ಯಾಮ್ಸಂಗ್ನ ಆಂಡ್ರಾಯ್ಡ್ ಫೋನ್ ಬಯಸಿದರೆ ನೀವು ಈ ಹೊಸ ಗ್ಯಾಲಕ್ಸಿ S9 ಪ್ಲಸ್ ಪರಿಗಣಿಸಬಹುದು. ಈ ಹೊಸ ಫೋನ್ ಇತ್ತೀಚಿಗೆ ಬಿಡುಗಡೆಗೊಂಡಿದೆ. ಇದು ಡ್ಯೂಯಲ್ ಅಪರ್ಚರ್ ಕ್ಯಾಮೆರಾವನ್ನು ಹೊಂದಿದ್ದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊರತುಪಡಿಸಿ ಅದ್ಭುತವಾಗಿದೆ. ಅಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ಪ್ಲಸ್ ನಿಜವಾಗಿಯೂ ಗ್ಯಾಲಕ್ಸಿ S8 ಸರಣಿಯ ಮೇಲೆ ಒಂದು ದೊಡ್ಡ ಅಪ್ಡೇಟ್ ಏನು ಅಲ್ಲ. ಇದರ ಡ್ಯುಯಲ್ ಅಪೆರ್ಚರ್ ವೈಶಿಷ್ಟ್ಯವು ನೀವು ಯೋಚಿಸುವುದಕ್ಕಿಂತ ಕಡಿಮೆ ವ್ಯತ್ಯಾಸವನ್ನುನೀಡುತ್ತದೆ. ಮತ್ತು ಇದಕ್ಕೆ ಹೋಲಿಸಿದರೆ ಪಿಕ್ಸೆಲ್ 2 ಉತ್ತಮವಾದ ಕ್ಯಾಮೆರಾ ಫೋನ್ ಆಗಿದೆ.

ಇವುಗಳ ಬಗ್ಗೆ ನೀವೇನು ಅಂತೀರಾ? ಇವುಗಳನ್ನು ಬಿಟ್ಟು ನಿಮ್ಮ ಪ್ರಕಾರ ಬೇರೆ ಯಾವುದನ್ನಾದರೂ ಈ ಪಟ್ಟಿಗೆ ತರಲು ಬಯಸುವಿರಾ ಹಾಗಾದರೆ ಅವುಗಳ ಹೆಸರನ್ನು ಈ ಕೆಳಕೆ ಕಾಮೆಂಟ್ ಮಾಡಿ ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :