ಭಾರತದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ ಗ್ರಾಹಕರನ್ನು ತಮ್ಮತ್ತ ಸೆಳೆಯಲು ದಿನದಿಂದ ದಿನಕ್ಕೆ ಹೊಸ ಹೊಸ ಆಕರ್ಷಿತವಾದ ಪ್ಲಾನ್ಗಳನ್ನು ತರುತ್ತಿವೆ. ಅದರಲ್ಲಿ BSNL ಹೊಸ ಪ್ರಿಪೇಡ್ ರೀಚಾರ್ಜ್ ಪ್ರಸ್ತಾಪವನ್ನು ಕೇವಲ 75 ರೂಪಾಯಿಗಳಿಂದ ಪ್ರಾರಂಭಿಸಿದೆ. ಇದರಲ್ಲಿ ನಿಮಗೆ ಡೇಟಾ ಮತ್ತು ಅನ್ಲಿಮಿಟೆಡ್ ಕರೆ ಮತ್ತು SMS ಸೌಲಭ್ಯಗಳನ್ನು ಸಹ ಸೇರಿವೆ. ಅಂದ್ರೆ 'BSNL Jeevitha Prepaid Plan' ಎಂಬ ಹೊಸ ಯೋಜನೆಯನ್ನು ಮೊದಲಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ವಲಯಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿದೆ.
ಈ ಹೊಸ ಪ್ಲಾನ್ ವ್ಯಾಲಿಡಿಟಿ ವಿಸ್ತರಣೆಯೊಂದಿಗೆ ಬರುತ್ತದೆ. ಇದರರ್ಥ ಗ್ರಾಹಕರು ಕಂಪನಿಯ ಇತರ STVಗಳೊಂದಿಗೆ ಪುನರ್ಭರ್ತಿ ಮಾಡುವ ಮೂಲಕ ಕೇವಲ 75 ರೂಪಾಯಿಗಳ ಲಾಭವನ್ನು ವಿಸ್ತರಿಸಬಹುದು. BSNL ಭಾರತದಾದ್ಯಂತದ ಇತರ ವಲಯಗಳಲ್ಲಿ ತನ್ನ ಈ 75 ರೂಗಳ ಪ್ರಿಪೇಯ್ಡ್ ಪ್ರಸ್ತಾಪವನ್ನು ಪರಿಚಯಿಸಲು ಯೋಜಿಸುತ್ತಿದ್ದು ಯಾವಾಗ ಎಲ್ಲಾ ರಾಜ್ಯಗಳಲ್ಲಿ ಎಲ್ಲರಿಗು ಸಿಗುತ್ತೆ ಎನ್ನುವ ಮಾಹಿತಿ ಸದ್ಯಕ್ಕೆ ಅಸ್ಪಷ್ಟವಾಗಿ ಉಳಿದಿದೆ.
BSNL ಈ 75 ರೂಗಳ ರೀಚಾರ್ಜ್ ಯೋಜನೆ ತನ್ನ ಗ್ರಾಹಕರಿಗೆ ಒಟ್ಟಾರೆಯಾಗಿ 10GB ಯ ಡೇಟಾ ಮತ್ತು ಅನ್ಲಿಮಿಟೆಡ್ ಧ್ವನಿ ಕರೆಗಳು ಮತ್ತು 500 SMSಗಳನ್ನು ಒದಗಿಸುತ್ತದೆ. ಇದು ಮುಂಬೈ ಮತ್ತು ದೆಹಲಿ ವಲಯಗಳಲ್ಲಿ ಉಚಿತ ಕರೆ ಸೌಲಭ್ಯವು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಇದರ ವ್ಯಾಲಿಡಿಟಿ 15 ದಿನಗಗಳಾಗಿದ್ದು ಬಳಕೆದಾರರು ಈ ಯೋಜನೆಯ ವ್ಯಾಲಿಡಿಟಿಯನ್ನು 180 ದಿನಗಳವರೆಗೆ ಹೆಚ್ಚಿನ ರಿಚಾರ್ಜ್ ಮಾಡಿಸಿ ವಿಸ್ತರಿಸಬಹುದಾಗಿದೆ.