ಇದು ಫಿಫಾ ವರ್ಲ್ಡ್ ಕಪ್ ಆಫರ್: ದಿನಕ್ಕೆ 4GB ಯ ಡೇಟಾ ಕೇವಲ 149 ರೂಗಳಲ್ಲಿ ನೀಡುವ ಮೂಲಕ BSNL ತಮ್ಮ ಗ್ರಾಹಕರಿಗೆ ಆನಂದವನ್ನುಂಟು ಮಾಡಲಿದೆ.

ಇದು ಫಿಫಾ ವರ್ಲ್ಡ್ ಕಪ್ ಆಫರ್: ದಿನಕ್ಕೆ 4GB ಯ ಡೇಟಾ ಕೇವಲ 149 ರೂಗಳಲ್ಲಿ ನೀಡುವ ಮೂಲಕ BSNL ತಮ್ಮ ಗ್ರಾಹಕರಿಗೆ ಆನಂದವನ್ನುಂಟು ಮಾಡಲಿದೆ.
HIGHLIGHTS

ಇದು ಜೂನ್ 14 ರಿಂದ ಆರಂಭವಾಗಲಿದೆ. BSNLಡೇಟಾ STV 149 ನಿಮಗೆ 15ನೇ ಜುಲೈ 2018 ರವರೆಗೆ ಲಭ್ಯವಿರುತ್ತದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಫಿಫಾ 2018 ರ ವಿಶ್ವ ಕಪ್ ರಷ್ಯಾದಲ್ಲಿ ನಾಳೆ ಶುಕ್ರವಾರ ಆರಂಭವಾಗಲಿದೆ ಮತ್ತು BSNL ಗ್ರಾಹಕರು ಹೊಸ ಡೇಟಾವನ್ನು ದಿನಕ್ಕೆ 4GB ಯ ಡೇಟಾದೊಂದಿಗೆ ಒದಗಿಸುತ್ತಿದೆ ಎಂದು ತೋರುತ್ತಿದೆ. ಮುಂಬರಲಿರುವ ಫೀಫಾ 2018 ಯೋಜನೆಗಾಗಿ BSNL ಟ್ವಿಟ್ಟರ್ ಖಾತೆಯು ಟೀಸರನ್ನು ಹಂಚಿಕೊಂಡಿದೆ. ಆದರೆ ಅಧಿಕೃತವಾಗಿ ಯಾವುದೇ ವಿವರಗಳನ್ನು ಬಹಿರಂಗಪಡಿಸಲಿಲ್ಲ. 

BSNL ಕಾರ್ಯನಿರ್ವಾಹಕರಾದ ಬಂದನ್ ಪ್ರೆತ್ ಸಿಂಗ್ ಅವರ ಹಂಚಿಕೊಂಡ ಟ್ವಿಟ್ಟರ್ ಮುಂಬರುವ ರೂ 149 ಯೋಜನೆ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದೆ. BSNL ಹೊಸ ಡೇಟಾ STV 149 ಈ ವರ್ಷದ ಫಿಫಾ ವಿಶ್ವಕಪ್ 2018 ಕ್ಕೆ ಬಿಡುಗಡೆಯಾಗಲಿದೆ. ಇದು ಜೂನ್ 14 ರಿಂದ ಆರಂಭವಾಗಲಿದೆ. BSNLಡೇಟಾ STV 149 ನಿಮಗೆ 15ನೇ ಜುಲೈ 2018 ರವರೆಗೆ ಲಭ್ಯವಿರುತ್ತದೆ.

https://www.sakshi.com/sites/default/files/styles/storypage_main/public/article_images/2018/02/9/BSNL.jpg?itok=2gIFhT0T

ಇದರಲ್ಲಿ ನಿಮಗೆ ದಿನಕ್ಕೆ 4GB ಡೇಟಾ ಒಟ್ಟು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. BSNL ಈ ಯೋಜನೆ ಸದ್ಯಕ್ಕೆ ಮುಂಬಯಿ ಮತ್ತು ದೆಹಲಿಗೆ ಮಾನ್ಯವಾಗಿಲ್ಲ. BSNL ಫಿಫಾ ವಿಶ್ವ ಕಪ್ 2018 ರ 149 ಯೋಜನೆಗೆ ಉಚಿತ ಕರೆಗಳು ಅಥವಾ SMS ಪ್ಲಾನ್ಗಳನ್ನು ಒಳಗೊಂಡಿರುವುದಿಲ್ಲ. ಮುಖ್ಯವಾಗಿ ಈ ಪ್ಲಾನ್ ಕೇವಲ ಇದು ಡೇಟಾ ಮಾತ್ರ ನೀಡುವ ಪ್ಲಾನ್ ಆಗಿದೆ.

BSNL ಈ ಹೊಸ ಪ್ಲಾನನ್ನು ನೀವು ಪಡೆಯುವ ಮೊದಲು ಒಮ್ಮೆ ನಿಮ್ಮ ನಂಬರಿಂದ BSNL ಕಸ್ಟಮರ್ ಕೇರ್ಗೆ ಕರೆ ಮಾಡಿ ಈ ಪ್ಲಾನ್ ನಿಮ್ಮ ನಂಬರ್ಗೆ ಲಭ್ಯವಿದೆಯೇ ಇಲ್ವೋ ಖಚಿತಪಡಿಸಿಕೊಳ್ಳಿ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo