ಇದು ಏರ್ಟೆಲ್ನ ಅದ್ದೂರಿ ಆಫರ್, ಏರ್ಟೆಲ್ 3GB ಯ 4G ಡೇಟಾ ಕೇವಲ 50 ರೂಪಾಯಿಗಳಲ್ಲಿ ನೀಡುತ್ತಿದೆ

Updated on 02-May-2018

ಭಾರ್ತಿ ಏರ್ಟೆಲ್ ಈಗ ಭಾರತದಲ್ಲಿ ಇಂದು ಸದ್ಯಕ್ಕೆ ಕೆಲ ಆಯ್ದ ಗ್ರಾಹಕರಿಗೆ 3GB ಯ 4G ಡೇಟಾವನ್ನು ಕೇವಲ 49 ರೂಪಾಯಿಗಳಿಗೆ ನೀಡಲು ಆರಂಭಿಸಿದೆ. ಆದರೆ ಯೋಜನೆಯ ವ್ಯಾಲಿಡಿಟಿ ಕೇವಲ ಒಂದು ದಿನ ಮಾತ್ರ. ಅಲ್ಲದೆ ಇದು ಪ್ರಿಪೇಡ್ ಪ್ಲಾನ್ ಆಗಿದ್ದು ಸದ್ಯಕ್ಕೆ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ಮಾನ್ಯವಾಗಿಲ್ಲ.

ಏರ್ಟೆಲ್ನ ಈ ಪ್ರಿಪೇಯ್ಡ್ ಪ್ಲಾನಲ್ಲಿ ಹೆಚ್ಚಿನದು ನೋಡಿದಂತೆ ಈ ಡೇಟಾ ಪ್ಯಾಕ್ ದೇಶದಾದ್ಯಂತ ಆಯ್ದ ಬಳಕೆದಾರರಿಗೆ ಮಾನ್ಯವಾಗಿದೆ. ಮತ್ತು ಎಲ್ಲಾ ಬಳಕೆದಾರರಿಗಾಗಿ ಏರ್ಟೆಲ್ ಕಂಪನಿಯು ಇದೇ ಬೆಲೆಯಲ್ಲಿ 1GB ಯ ಡೇಟಾವನ್ನು 49 ಡಾಟಾ ಯೋಜನೆಗಳೊಂದಿಗೆ ನೀಡುತ್ತಿದೆ. ಈ ಯೋಜನೆಯ ಅರ್ಹತೆಯನ್ನು ಪರಿಶೀಲಿಸಲು ನೀವು ಬಯಸಿದರೆ ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ಏರ್ಟೆಲ್ ವೆಬ್ಸೈಟ್ಗೆ ಹೋಗಿ ನಿಮ್ಮ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಬವುದು.

ಏರ್ಟೆಲ್ ಕಂಪನಿಯು ಈ 49 ಪ್ಲಾನನ್ನು ಈಗಾಗಲೇ ಒದಗಿಸುತ್ತಿದೆ ಮತ್ತು ಪ್ರತಿ ಏರ್ಟೆಲ್ ಗ್ರಾಹಕರಿಗೆ ಇನ್ನೂ ಯೋಜನೆಯನ್ನು ಒದಗಿಸಲು ಅದೇ ಬೆಲೆಯಲ್ಲಿ ಈಗ 3GB ಯ 4G ಡೇಟಾವನ್ನು ನೀಡಲು ಬಯಸಿದೆ. ಆದರೆ ಸದ್ಯಕ್ಕೆ ಈ ಆಫರ್ ಮೇಲೆ ಹೇಳಿದಂತೆ ಸದ್ಯಕ್ಕೆ 3GB ಸೌಲಭ್ಯ ದೇಶದಾಂತ್ಯ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯವಿದೆ.

ಇದರ ಜೋತೆ ಇದರ ವ್ಯಾಲಿಡಿಟಿಯನ್ನು ಸಹ ಕೊಂಚ ಹೆಚ್ಚಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಭಾರ್ತಿ ಏರ್ಟೆಲ್ನ 49 ಡೇಟಾ ಪ್ಯಾಕ್ ಜೊತೆಗೆ ಏರ್ಟೆಲ್ ಸಹ 100 ಕ್ಕಿಂತಲೂ ಕಡಿಮೆ ಆಕರ್ಷಕ ಡೇಟಾ ಯೋಜನೆಗಳನ್ನು ಹೊಂದಿದೆ. ಏರ್ಟೆಲ್ನ 65 ಡೇಟಾ ಪ್ಯಾಕ್ ಸಹ ಇದಕ್ಕೆ ತಕ್ಕ ಉತ್ತಮವಾದ ಉದಾಹರಣೆಯಾಗಿದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :