ಹೊಸ Panasonic Eluga i7 ಬ್ಲಾಕ್ 16GB ಯ ಸ್ಟೋರೇಜ್ 2GB ಯ RAM ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟಿನಲ್ಲಿ ಮಾರಾಟ ಮಾಡುತ್ತಿದೆ.

ಹೊಸ Panasonic Eluga i7 ಬ್ಲಾಕ್ 16GB ಯ ಸ್ಟೋರೇಜ್ 2GB ಯ RAM ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟಿನಲ್ಲಿ ಮಾರಾಟ ಮಾಡುತ್ತಿದೆ.

ಪ್ಯಾನಸೋನಿಕ್ ತನ್ನ ಹೊಸ ಸ್ಮಾರ್ಟ್ಫೋನ್ ಆದ Panasonic Eluga I7 (Black, 16 GB)  (2 GB RAM) ಅನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟಿನಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೆ ಇದು 1440 ಪಿಕ್ಸೆಲ್ಗಳ 720 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿರುವ 5.45 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಮೂಡಿ ಬರುತ್ತದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 7,990 ರೂಪಾಯಿಗಳು ಆದರೆ ಫ್ಲಿಪ್ಕಾರ್ಟ್ ಇದರ ಮೇಲೆ 18% ಆಫ್ ಮಾಡಿ ಕೇವಲ 6,499 ರೂಪಾಯಿಗಳಲ್ಲಿ ನೀಡುತ್ತಿದೆ.

ಈ ಫೋನ್ 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ MT6737H ಪ್ರೊಸೆಸರ್ ಹೊಂದಿದ್ದು 2GB RAM ಜೋತೆಯಾಗಿ ಬರುತ್ತದೆ. ಅಲ್ಲದೆ ನೀವು ಇದರಲ್ಲಿ ಮೈಕ್ರೋ SD ಕಾರ್ಡ್ ಸೇರಿಸುವ ಮೂಲಕ ಸುಮಾರು 128GB ವರೆಗೆ ವಿಸ್ತರಿಸಬಹುದು. ಅಲ್ಲದೆ ಈ ಫೋನ್ 16GB ಯ ಇಂಟರ್ನಲ್ ಸ್ಟೋರೇಜನ್ನು ಪ್ಯಾಕ್ ಮಾಡುತ್ತದೆ. ಇದರ ಕ್ಯಾಮೆರಾಗಳ ಬಗ್ಗೆ ಮಾತನಾಡಬೇಕಾದರೆ ಇದರ ಬ್ಯಾಕ್ 8MP ಪ್ರೈಮರಿ ಕ್ಯಾಮೆರಾ ಮತ್ತು 8MP ಯ ಫ್ರಂಟ್ ಶೂಟರನ್ನು ಸೆಲ್ಫ್ಸ್ಗಾಗಿ ಹೊಂದಿದೆ.

ಪ್ಯಾನಾಸಾನಿಕಿನ ಈ ಹೊಸ ಸ್ಮಾರ್ಟ್ಫೋನಲ್ಲಿ ಆಂಡ್ರಾಯ್ಡ್ 7.0 ಅನ್ನು ನಡೆಸುತ್ತ ಧೀರ್ಘಕಾಲ ನೀಡುವ 4000mAh ಸಾಮರ್ಥ್ಯವನ್ನು  ಹೊಂದಿದೆ. ಇದರ ವಿನ್ಯಾಸದಲ್ಲಿ ಕಣ್ಮನ ಸೆಳೆಯುತ್ತ ಕೇವಲ 168 ಗ್ರಾಂ ಮಾತ್ರ ತೂಕವನ್ನು ಹೊಂದಿದೆ.  ಇದರಲ್ಲಿದೆ ಡ್ಯೂಯಲ್ ಸಿಮ್ (GSM ಮತ್ತು GSM) ಹೊಂದಿದೆ.

ಇದರಲ್ಲಿನ ಕನೆಕ್ಟಿವಿಟಿಯ ಬಗ್ಗೆ ಹೇಳಬೆಂದರೆ Wi-Fi, ಬ್ಲೂಟೂತ್,USB OTG, 3G ಮತ್ತು 4G, LTE ನೆಟ್ವರ್ಕ್ಗಳು ಬಳಸುವ ಬ್ಯಾಂಡ್ ಸೇರಿಸುತ್ತದೆ. ಈ ಫೋನ್ನಲ್ಲಿರುವ ಸೆನ್ಸೋರ್ಗಳೆಂದರೆ ಕಂಪಾಸ್ ಮ್ಯಾಗ್ನೆಟೊಮೀಟರ್, ಪ್ರಾಕ್ಸಿಮಿಟಿ ಸಂವೇದಕ, ಅಕ್ಸೆಲೆರೊಮೀಟರ್ ಮತ್ತು ಆಂಬಿಯಂಟ್ ಲೈಟ್ ಸೆನ್ಸರನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo