ಭಾರತದಲ್ಲಿ ಅಲ್ಕಾಟೆಲ್ 10.1 ಇಂಚಿನ IPS ಡಿಸ್ಪ್ಲೇಯೊಂದಿಗೆ Alcatel A3 10 ಟ್ಯಾಬ್ಲೆಟನ್ನು 4600mAh ಬ್ಯಾಟರಿಯೊಂದಿಗೆ ಬಿಡುಗಡೆಗೊಳಿಸಿದೆ
ಈ ಹೊಚ್ಚ ಹೊಸ Alcatel A3 10 ಟ್ಯಾಬ್ಲೆಟಿನ ಬೆಲೆ ಕೇಳಿದ್ರೆ ಈಗ್ಲೇ ಖರೀದಿಸಲು ಯೋಚಿಸುವಿರಿ!
ಈಗ ಧೀರ್ಘ ಕಾಲದ ಮನರಂಜನೆಗಾಗಿ ಆಲ್ಕಾಟೆಲ್ A3 10 ಬೃಹತ್ ಬ್ಯಾಟರಿ ಬ್ಯಾಕ್ಅಪ್ ಹೊಂದಿದೆ. ಇದು ಧ್ವನಿ ಪ್ರದರ್ಶಕ ಮತ್ತು ವೈಶಿಷ್ಟ್ಯಗಳ ಒಂದು ಶ್ರೇಣಿಯನ್ನು ಹೊಂದಿದೆ. ನೀವು ಅದ್ದೂರಿಯ ಆಟಗಳನ್ನು ಆರಾಮಾಗಿ ಆಡಬಹುದು. ಮತ್ತು ಬಹು ಅಪ್ಲಿಕೇಶನ್ಗಳನ್ನು (ಸ್ಪ್ಲಿಟ್ ಸ್ಕ್ರೀನ್) ರನ್ ಮಾಡಬವುದು. ಅಲ್ಲದೆ ಇದರಲ್ಲಿನ ಧ್ವನಿ ಕರೆಗಳನ್ನು ಹೆಚ್ಚಾಗಿ ಆಫರ್ಗಳೊಂದಿಗೆ ಆನಂದಿಸಬಹುದು. ಒಟ್ಟಾರೆಯಾಗಿ ಅಲ್ಕಾಟೆಲ್ A3 10 ಈ ಬೆಲೆ ವ್ಯಾಪ್ತಿಯಲ್ಲಿ ಅತ್ಯುತ್ತಮವಾದ ಆಯ್ಕೆಯಾಗಿದೆ.
Alcatel A3 10 16 GB 10 inch with Wi-Fi Only Tablet (Black) ಇದರ ಬೆಲೆ: 6,499 ರೂಗಳು. Alcatel A3 10 (VOLTE) 16 GB 10.1 inch with Wi-Fi+4G Tablet ಇದರ ಬೆಲೆ: 8,999 ರೂಗಳು.
ಅಲ್ಕಾಟೆಲ್ A3 10 10.1 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ. ಇದು 800 x 1280 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಟ್ಯಾಬ್ಲೆಟ್ನ ಮೆದುಳಿನಂತೆ ಕಾರ್ಯ ನಿರ್ವಹಿಸುವುದರಿಂದ 1.1GHz ಕ್ವಾಡ್ ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ 2GB ಯಷ್ಟು RAM ಸಹಾಯ ಮಾಡುತ್ತದೆ. ಆಂಡ್ರಾಯ್ಡ್ v7.0 (ನೋಗಟ್) ಆಪರೇಟಿಂಗ್ ಸಿಸ್ಟಮ್ನಲ್ಲಿ ಗ್ಯಾಜೆಟ್ ಬೂಟ್ ಆಗುತ್ತದೆ.
ಇದರಲ್ಲಿ 5MP ಬ್ಯಾಕ್ ಕ್ಯಾಮೆರಾ ಮತ್ತು 2MP ಸೆಲ್ಫಿ ಶೂಟರನ್ನು ನೀವು ನಿಮ್ಮ ಛಾಯಾಗ್ರಹಣ ಅಥವಾ ವೀಡಿಯೊಗ್ರಾಫಿ ಅಗತ್ಯಗಳಿಗಾಗಿ ಟ್ಯಾಬ್ಲೆಟ್ನಲ್ಲಿ ಸಜ್ಜುಗೊಳಿಸಲಾಗಿದೆ. ಈ ಅಲ್ಕಾಟೆಲ್ A3 10 ನಿಮಗೆ 4600mAh ಲಿ ಪಾಲಿಮರ್ ಬ್ಯಾಟರಿಯಿಂದ ಮೂಡಿದೆ. ಇದು 2G ಯಲ್ಲಿ 22 ಗಂಟೆಗಳವರೆಗೆ 22 ಗಂಟೆಗಳವರೆಗೆ 3G ಯಲ್ಲಿ 18 ಗಂಟೆಗಳವರೆಗೆ ಟಾಕ್ ಟೈಮನ್ನು ನೀಡುತ್ತದೆ. ಇದು ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆಗಳ (0% ರಿಂದ 100% ವರೆಗೆ) ಕಾಲ ತೆಗೆದುಕೊಳ್ಳುತ್ತದೆ.
ಇದರಲ್ಲಿ ಸ್ಟೋರೇಜ್ ಬಳಕೆದಾರರಿಗೆ 16GB ಕಾರ್ಡ್ ಮೆಮೊರಿಯಲ್ಲಿ ಬರುತ್ತದೆ. ಇದರಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 128GB ಯ ವರೆಗೆ ಹೆಚ್ಚಿಸಬಹುದು. ನೆಟ್ವರ್ಕಿಂಗ್ ಮತ್ತು ಹಂಚಿಕೆಗಾಗಿ ಅಲ್ಕಾಟೆಲ್ A3 10 ಒಂದೇ ಸಿಮ್, 4G, 3G, 2G, ವಾಯ್ಸ್ ಕರೆಂಗ್, ವೈ-ಫೈ, ಬ್ಲೂಟೂತ್, ಜಿಪಿಎಸ್ ಮತ್ತು ಮೈಕ್ರೋ ಯುಎಸ್ಬಿ ಪೋರ್ಟ್ನಂತಹ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತದೆ.
ಸ್ನೇಹಿತರೆ ಈ ಟ್ಯಾಬ್ಲೆಟ್ ಬಗ್ಗೆ ನೀವೇನು ಅಂತಿರೆಂದು ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile