ಏರ್ಟೆಲ್ನ ಡಬಲ್ ಡೇಟಾ ಧಮಾಕ ಈಗ ಪಡೆಯಿರಿ ಅದೇ ಬೆಲೆಯಲ್ಲಿ ದ್ವಿಗುಣ ಡೇಟಾ ಫ್ರೀ.

ಏರ್ಟೆಲ್ನ ಡಬಲ್ ಡೇಟಾ ಧಮಾಕ ಈಗ ಪಡೆಯಿರಿ ಅದೇ ಬೆಲೆಯಲ್ಲಿ ದ್ವಿಗುಣ ಡೇಟಾ ಫ್ರೀ.
HIGHLIGHTS

ಅಂದರೆ 399 ರೂನಲ್ಲಿ 10GB ಯಾ ಬದಲಿಗೆ ಈಗ 20GB ಯಾ ಡೇಟಾ ಫ್ರೀ.

ಏರ್ಟೆಲ್ ಇದು MyPlan Infinity ಶ್ರೇಣಿಯಡಿಯಲ್ಲಿ ಅಸ್ತಿತ್ವದಲ್ಲಿರುವ ಪೋಸ್ಟ್ಪೇಯ್ಡ್ ಯೋಜನೆಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಮಾರುಕಟ್ಟೆಯ ಪಾಲಿಗೆ ಈ ಯುದ್ಧ ಮುಂದುವರೆದಿದೆ. ಮತ್ತು ಸ್ಪರ್ಧೆಯಲ್ಲಿ ಮುಂದುವರಿಯಲು ಏರ್ಟೆಲ್ ಈಗ ಹೆಚ್ಚಿನ ಮಾಹಿತಿ ಮತ್ತು ಆಡ್ ಆನ್ ಪ್ರಯೋಜನಗಳನ್ನು ಒದಗಿಸುತ್ತಿದೆ. 

ಏನಂದ್ರೆ ಈಗ ಏರ್ಟೆಲ್ನ ಎಲ್ಲಾ MyPlan Infinity ಪೋಸ್ಟ್ಪೇಯ್ಡ್ ಯೋಜನೆಗಳಲ್ಲಿ ಅನಿಯಮಿತ ಒಳಬರುವ ಮತ್ತು ಹೊರಹೋಗುವ ರೋಮಿಂಗ್ ಕರೆಗಳನ್ನು ದಿನಕ್ಕೆ 100 SMS, ಅಲ್ಲದೆ ನಿಮಗೆ ಉಚಿತವಾಗಿ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು (ರೂ 399 ಯೋಜನೆಯನ್ನು ಹೊರತುಪಡಿಸಿ) ಮತ್ತು ಉಚಿತ ಆಡ್ ಆನ್ ಸಂಪರ್ಕವನ್ನು ನೀಡುತ್ತವೆ.

ಏರ್ಟೆಲ್ನ 399/- ಪೋಸ್ಟ್ ಪೇಯ್ಡ್ ಪ್ಲಾನ್.
ಇದರಲ್ಲಿ ನೀವು ಪೂರ್ತಿ 399 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಮೊದಲು ಇದರಲ್ಲಿ ನಿಮಗೆ ತಿಂಗಳಿಗೆ 10GB ಯಾ ಡೇಟಾವನ್ನು ನೀಡುತ್ತಿತ್ತು ಈಗ ನಿಮಗೆ ತಿಂಗಳಿಗೆ 20GBಯಾ ಡೇಟಾ ದೊರೆಯುತ್ತದೆ. ಅಲ್ಲದೆ ನಿಮಗೆ ಅನ್ಲಿಮಿಟೆಡ್ ಕಾಲ್ಸ್ (Local + STD + National Roaming – Incoming ಮಾತ್ರ). ಜೋತೆಗೆ ಉಚಿತವಾಗಿ  Wynk Music Subscription ನೀಡುತ್ತವೆ.

ಏರ್ಟೆಲ್ನ 499/- ಪೋಸ್ಟ್ ಪೇಯ್ಡ್ ಪ್ಲಾನ್.
ಇದರಲ್ಲಿ ನೀವು ಪೂರ್ತಿ 499 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಮೊದಲು ಇದರಲ್ಲಿ ನಿಮಗೆ ತಿಂಗಳಿಗೆ  20GB ಯಾ ಡೇಟಾವನ್ನು ನೀಡುತ್ತಿತ್ತು ಈಗ ನಿಮಗೆ ತಿಂಗಳಿಗೆ 40GBಯಾ ಡೇಟಾ ದೊರೆಯುತ್ತದೆ. ಅಲ್ಲದೆ ನಿಮಗೆ ಅನ್ಲಿಮಿಟೆಡ್ ಕಾಲ್ಸ್ (Local + STD + National Roaming). ಜೋತೆಗೆ ಉಚಿತವಾಗಿ  Wynk Music Subscription ಮತ್ತು Amazon Prime Subscription ಮತ್ತು Live TV & Free Handset Damage Protection ನೀಡುತ್ತವೆ.
 
ಏರ್ಟೆಲ್ನ 799/- ಪೋಸ್ಟ್ ಪೇಯ್ಡ್ ಪ್ಲಾನ್.
ಇದರಲ್ಲಿ ನೀವು ಪೂರ್ತಿ 799 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಮೊದಲು ಇದರಲ್ಲಿ ನಿಮಗೆ ತಿಂಗಳಿಗೆ 40GB ಯಾ ಡೇಟಾವನ್ನು ನೀಡುತ್ತಿತ್ತು ಈಗ ನಿಮಗೆ ತಿಂಗಳಿಗೆ 60GBಯಾ ಡೇಟಾ ದೊರೆಯುತ್ತದೆ. ಅಲ್ಲದೆ ನಿಮಗೆ ಅನ್ಲಿಮಿಟೆಡ್ ಕಾಲ್ಸ್  (Local + STD + National Roaming). ಜೋತೆಗೆ ಉಚಿತವಾಗಿ  Wynk Music Subscription Amazon Prime Subscription, Live TV & Free Handset Damage Protection ಮತ್ತು Free Local Calls on Add-On Connection ನೀಡುತ್ತವೆ. 
 
ಏರ್ಟೆಲ್ನ 1199/- ಪೋಸ್ಟ್ ಪೇಯ್ಡ್ ಪ್ಲಾನ್.
ಇದರಲ್ಲಿ ನೀವು ಪೂರ್ತಿ 1199 ರೂಗಳ ರಿಚಾರ್ಜ್ ಮಾಡಬೇಕಾಗುತ್ತದೆ. ಮೊದಲು ಇದರಲ್ಲಿ ನಿಮಗೆ ತಿಂಗಳಿಗೆ 75GB ಯಾ ಡೇಟಾವನ್ನು ನೀಡುತ್ತಿತ್ತು ಈಗ ನಿಮಗೆ ತಿಂಗಳಿಗೆ 90GBಯಾ ಡೇಟಾ ದೊರೆಯುತ್ತದೆ. ಅಲ್ಲದೆ ನಿಮಗೆ ಅನ್ಲಿಮಿಟೆಡ್ ಕಾಲ್ಸ್ (Local + STD + National Roaming). ಜೋತೆಗೆ ಉಚಿತವಾಗಿ Wynk Music Subscription Amazon Prime Subscription, Live TV & Free Handset Damage Protection & Free Local Calls on Add-On Connection ನೀಡುತ್ತವೆ.
  
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo