ಭಾರ್ತಿ ಏರ್ಟೆಲ್ ಹೊಸ 219 ಪ್ರಿಪೇಯ್ಡ್ ರೀಚಾರ್ಜ್ನಲ್ಲಿ ದಿನಕ್ಕೆ 1.4GB ಜೋತೆಯಲ್ಲಿ ಉಚಿತವಾಗಿ ಹಲೋ ಟ್ಯೂನ್ ನೀಡುವ ಪ್ಲಾನನ್ನು ಬಿಡುಗಡೆಗೊಳಿಸಿದೆ.

ಭಾರ್ತಿ ಏರ್ಟೆಲ್ ಹೊಸ 219 ಪ್ರಿಪೇಯ್ಡ್ ರೀಚಾರ್ಜ್ನಲ್ಲಿ ದಿನಕ್ಕೆ 1.4GB ಜೋತೆಯಲ್ಲಿ ಉಚಿತವಾಗಿ ಹಲೋ ಟ್ಯೂನ್ ನೀಡುವ ಪ್ಲಾನನ್ನು ಬಿಡುಗಡೆಗೊಳಿಸಿದೆ.

ಭಾರ್ತಿ ಏರ್ಟೆಲ್ ಹೊಸ ಪ್ರಿಪೇಯ್ಡ್ ರೀಚಾರ್ಜ್ 219ರೂಗಳಿಂದ ದಿನಕ್ಕೆ 3G/4G ಯ 1.4GB ಡೇಟಾ ನೀಡುವ ಪ್ಲಾನನ್ನು ಬಿಡುಗಡೆ ಮಾಡಿದೆ. ಅಲ್ಲದೆ ಉಚಿತವಾಗಿ ಹಲೋ ಟ್ಯೂನ್ ಪ್ರಯೋಜನದ ಜೊತೆ ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಏರ್ಟೆಲ್ನ ಅಧಿಕೃತ ವೆಬ್ಸೈಟ್ನಲ್ಲಿ ಉಲ್ಲೇಖಿಸಿರುವಂತೆ ಇದರಲ್ಲಿ ಕರೆಗಳು ಮತ್ತು SMS ಪ್ರಯೋಜನಗಳನ್ನು ಸಹ ನೀಡುತ್ತದೆ. ಪ್ರಮುಖವಾಗಿ ಏರ್ಟೆಲ್ ಕಂಪನಿಯು ಈ ಪ್ರಿಪೇಡ್ ಯೋಜನೆಯನ್ನು ತಮ್ಮ ಗ್ರಾಹಕರಿಗೆ ಹೆಚ್ಚುವರಿ ಲಾಭ ನೀಡಲು ಹೊರ ತಂದಿದೆ.

ಅಂದ್ರೆ ನಿಮಗೆ ಇದರಲ್ಲಿ 1.4GB ಯ ಡೇಟಾ ದೈನಂದಿನ ಕ್ಯಾಪ್ನೊಂದಿಗೆ ಪೂರ್ತಿ 28 ದಿನಗಳ ಅವಧಿಗೆ ಒಟ್ಟು 39.2GB ಯ 3G / 4G ಡೇಟಾ. ಅನ್ಲಿಮಿಟೆಡ್ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆ ಪ್ರಯೋಜನಗಳನ್ನು ಸಹ ಈ ಯೋಜನೆಯೊಂದಿಗೆ ಒಟ್ಟುಗೂಡಿಸಲಾಗುತ್ತದೆ. ಈ ಪ್ಲಾನಿನ ಬಳಕೆದಾರರು 'ಹಲೋ ಟ್ಯೂನ್' ಸಹ ಉಚಿತ ಚಂದಾದಾರಿಕೆಯೊಂದಿಗೆ ದಿನಕ್ಕೆ 100 ಉಚಿತ SMS ಸೌಲಭ್ಯಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ.

ನೀವು ಈ 219 ರೀಚಾರ್ಜ್ ಪ್ಯಾಕ್ಗೆ ಚಂದಾದಾರರಾಗಿರುವ ಏರ್ಟೆಲ್ ಬಳಕೆದಾರರಾಗಿದ್ದಾರೆ ಯಾವುದೇ ವೆಚ್ಚವಿಲ್ಲದೆಯೇ Wynk Music ಮೂಲಕ  ಹಲೋ ಟ್ಯೂನ್ ಅನ್ನು ವಿನಂತಿಸುವುದರ ಜೊತೆಗೆ ಲಭ್ಯವಿರುವ ಹಾಡನ್ನು ಹೊಂದಿಸಬಹುದು. ಇದು ಜಿಯೊ ಬಳಕೆದಾರರಿಗೆ ಜಿಯೊಮೊಸಿಕ್ ಅಪ್ಲಿಕೇಶನ್ನ ಮೂಲಕ ಕರೆ ಮಾಡುವ ಟ್ಯೂನ್ ಸಕ್ರಿಯಗೊಳಿಸುವ ವೈಶಿಷ್ಟ್ಯವನ್ನು ಹೋಲುತ್ತದೆ. ಗ್ರಾಹಕರು ತಮ್ಮ ಸಂಖ್ಯೆಯಲ್ಲಿ ಅನಿಯಮಿತ ಸಂಖ್ಯೆಯ ಕಾಲರ್ ಟ್ಯೂನ್ಗಳನ್ನು ಹೊಂದಿಸಲು ಜಿಯೋ ಅರ್ಹತೆ ನೀಡುತ್ತಾರೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo