ಈಗ ಏರ್ಟೆಲ್ ಮತ್ತು ಐಡಿಯಾ ತಮ್ಮ ಗ್ರಾಹಕರಿಗೆ ರೂ 495 ರ FRCಯಲ್ಲಿ ದಿನಕ್ಕೆ 1GB ಯಾ 4G ಡೇಟ ಮತ್ತು ಅನ್ಲಿಮಿಟೆಡ್ ಕರೆಯನ್ನು 84 ದಿನಕ್ಕೆ ನೀಡಲಿದೆ.

Updated on 10-Oct-2017

ಭಾರತದ ದೊಡ್ಡ ಟೆಲಿಕಾಂ ಆಪರೇಟರ್ಗಳಾದ ಭಾರ್ತಿ ಏರ್ಟೆಲ್ ಮತ್ತು ಐಡಿಯಾ ಈಗ ರಿಲಯನ್ಸ್ ಜಿಯೊಗೆ ಸೈಡ್ ಹೊಡೆಯಲು ತಮ್ಮ ಹೊಸ ಯೋಜನೆಯನ್ನು ತರುತ್ತಿದೆ.  ಅಲ್ಲದೆ ತಮ್ಮ ಗ್ರಾಹಕರನ್ನು ಇನ್ನು ಹೆಚ್ಚು ಆಕರ್ಷಿಸಲು ಈ ಟೆಲಿಕಾಂ ನಿರ್ವಾಹಕರು ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನು ತರುತ್ತಿದ್ದಾರೆ. ಇವು ಜಿಯೊವಿನ 399/- ರೂವಿನ ಯೋಜನೆಯಿಂದ ಸ್ಪರ್ಧೆಗಾಗಿ 495/- ರೂನ ಹೊಸ ಯೋಜನೆಗಳನ್ನು ಪರಿಚಯಿಸಲಿದೆ.

ಅಲ್ಲದೆ ಏರ್ಟೆಲ್ ಮತ್ತು ಐಡಿಯಾ ರೂ 495/- ಯೋಜನೆಯನ್ನು ತಮ್ಮ ಹೊಸ ಗ್ರಾಹಕರಿಗೆ ಮಾತ್ರವೇ 1GB 4G ಡೇಟಾವನ್ನು ಜೋತೆಗೆ ಅನಿಯಮಿತ ಕರೆಗಳನ್ನು ಈ ಯೋಜನೆಯಲ್ಲಿ ಪ್ರತಿ ದಿನವೂ ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆಯು ಪೂರ 84 ದಿನಗಳ ವರೆಗಿದೆ. ಅಲ್ಲದೆ ಈ ಯೋಜನೆಯಲ್ಲಿ ಕೇವಲ 495/- ರೂ.ನಲ್ಲಿ ಏರ್ಟೆಲ್ ಮತ್ತು ಐಡಿಯಾ ದಿನಕ್ಕೆ 300 ನಿಮಿಷ ಮತ್ತು ವಾರಕ್ಕೆ 1200 ನಿಮಿಷಗಳನ್ನು ನೀಡಲಿದೆ.

ಈ ಹೊಸ ಪ್ಲಾನಿಗೆ ಹೋಲಿಸಿದರೆ ರಿಲಯನ್ಸ್ ಜಿಯೊ ಈಗಾಗಲೇ 399/- ರೂ ನ ಯೋಜನೆಯಲ್ಲಿ 1GB ಯಾ 4G ಡೇಟಾವನ್ನು ಮತ್ತು ದಿನಕ್ಕೆ ಅನಿಯಮಿತ ಕರೆಗಳನ್ನು ನೀಡಿತ್ತಿದೆ.  ಮತ್ತು ಈ ಯೋಜನೆಯ ಮಾನ್ಯತೆಯು ಸಹ ಪೂರ 84 ದಿನಗಳಾಗಿವೆ. ಆದರೆ ತಮ್ಮ ಹೊಸ ಗ್ರಾಹಕರಿಗೆ Jio ಸೇವೆಯ ಜಿಯೋಪ್ರಾಮಿಮ್ ಸದಸ್ಯತ್ವವನ್ನು ಪಡೆಯಬೇಕಾಗಿದೆ ಅದಕ್ಕಾಗಿ ಅವರು ರೂ 99/-  ಅನ್ನು ಮತ್ತೆ ಭಾರ್ತಿ ಮಾಡಬೇಕಾಗುತ್ತದೆ. ಅಂದರೆ ಯೋಜನೆಗೆ ಒಟ್ಟು ರೂ 498/- ನೀಡಬೇಕಾಗುತ್ತದೆ.

 

ಇಮೇಜ್ ಸೋರ್ಸ್

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :