ಈಗ ಏರ್ಟೆಲ್ ಮತ್ತು ಐಡಿಯಾ ತಮ್ಮ ಗ್ರಾಹಕರಿಗೆ ರೂ 495 ರ FRCಯಲ್ಲಿ ದಿನಕ್ಕೆ 1GB ಯಾ 4G ಡೇಟ ಮತ್ತು ಅನ್ಲಿಮಿಟೆಡ್ ಕರೆಯನ್ನು 84 ದಿನಕ್ಕೆ ನೀಡಲಿದೆ.
ಭಾರತದ ದೊಡ್ಡ ಟೆಲಿಕಾಂ ಆಪರೇಟರ್ಗಳಾದ ಭಾರ್ತಿ ಏರ್ಟೆಲ್ ಮತ್ತು ಐಡಿಯಾ ಈಗ ರಿಲಯನ್ಸ್ ಜಿಯೊಗೆ ಸೈಡ್ ಹೊಡೆಯಲು ತಮ್ಮ ಹೊಸ ಯೋಜನೆಯನ್ನು ತರುತ್ತಿದೆ. ಅಲ್ಲದೆ ತಮ್ಮ ಗ್ರಾಹಕರನ್ನು ಇನ್ನು ಹೆಚ್ಚು ಆಕರ್ಷಿಸಲು ಈ ಟೆಲಿಕಾಂ ನಿರ್ವಾಹಕರು ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನು ತರುತ್ತಿದ್ದಾರೆ. ಇವು ಜಿಯೊವಿನ 399/- ರೂವಿನ ಯೋಜನೆಯಿಂದ ಸ್ಪರ್ಧೆಗಾಗಿ 495/- ರೂನ ಹೊಸ ಯೋಜನೆಗಳನ್ನು ಪರಿಚಯಿಸಲಿದೆ.
ಅಲ್ಲದೆ ಏರ್ಟೆಲ್ ಮತ್ತು ಐಡಿಯಾ ರೂ 495/- ಯೋಜನೆಯನ್ನು ತಮ್ಮ ಹೊಸ ಗ್ರಾಹಕರಿಗೆ ಮಾತ್ರವೇ 1GB 4G ಡೇಟಾವನ್ನು ಜೋತೆಗೆ ಅನಿಯಮಿತ ಕರೆಗಳನ್ನು ಈ ಯೋಜನೆಯಲ್ಲಿ ಪ್ರತಿ ದಿನವೂ ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆಯು ಪೂರ 84 ದಿನಗಳ ವರೆಗಿದೆ. ಅಲ್ಲದೆ ಈ ಯೋಜನೆಯಲ್ಲಿ ಕೇವಲ 495/- ರೂ.ನಲ್ಲಿ ಏರ್ಟೆಲ್ ಮತ್ತು ಐಡಿಯಾ ದಿನಕ್ಕೆ 300 ನಿಮಿಷ ಮತ್ತು ವಾರಕ್ಕೆ 1200 ನಿಮಿಷಗಳನ್ನು ನೀಡಲಿದೆ.
ಈ ಹೊಸ ಪ್ಲಾನಿಗೆ ಹೋಲಿಸಿದರೆ ರಿಲಯನ್ಸ್ ಜಿಯೊ ಈಗಾಗಲೇ 399/- ರೂ ನ ಯೋಜನೆಯಲ್ಲಿ 1GB ಯಾ 4G ಡೇಟಾವನ್ನು ಮತ್ತು ದಿನಕ್ಕೆ ಅನಿಯಮಿತ ಕರೆಗಳನ್ನು ನೀಡಿತ್ತಿದೆ. ಮತ್ತು ಈ ಯೋಜನೆಯ ಮಾನ್ಯತೆಯು ಸಹ ಪೂರ 84 ದಿನಗಳಾಗಿವೆ. ಆದರೆ ತಮ್ಮ ಹೊಸ ಗ್ರಾಹಕರಿಗೆ Jio ಸೇವೆಯ ಜಿಯೋಪ್ರಾಮಿಮ್ ಸದಸ್ಯತ್ವವನ್ನು ಪಡೆಯಬೇಕಾಗಿದೆ ಅದಕ್ಕಾಗಿ ಅವರು ರೂ 99/- ಅನ್ನು ಮತ್ತೆ ಭಾರ್ತಿ ಮಾಡಬೇಕಾಗುತ್ತದೆ. ಅಂದರೆ ಯೋಜನೆಗೆ ಒಟ್ಟು ರೂ 498/- ನೀಡಬೇಕಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile