ನಿಮಗೆ 13MP + 2MP ಬ್ಯಾಕ್ ಮತ್ತು 5.99 ಇಂಚಿನ IPS LCD Full View ಡಿಸ್ಪ್ಲೇ ಹಾಗು 3000mAh ಬ್ಯಾಟರಿಯ ಫೋನ್ ಕೇವಲ 9999 ರೂಗಳಲ್ಲಿ ಲಭ್ಯ

Updated on 27-Jun-2018
HIGHLIGHTS

ಇದು ಎರಡು ವೇರಿಯೆಂಟ್ಗಳಲ್ಲಿ ಬರುತ್ತದೆ. 32GB 9999 ರೂಗಳಾದರೆ 64GB ಯ ಸ್ಟೋರೇಜ್ 11,999 ರೂಗಳಲ್ಲಿ ಲಭ್ಯವಿದೆ

ಇವತ್ತು ನಾವು ಹಾನರ್ ಕಂಪನಿಯ ಹೊಸ Honor 7C ಬಗ್ಗೆ ಮಾತನಾಡೋಣ. ಇದು ಇದೇ ತಿಂಗಳ 21 ರಿಂದ ಅಮೆಜಾನಿನಲ್ಲಿ ಮಾರಾಟವಾಗುತ್ತಿದ್ದು ಇದರೊಳಗೆ ನಿಮಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಚಿಪ್ಸೆಟಿನೊಂದಿಗೆ 3000mAh ಬ್ಯಾಟರಿ. ಇದರ ಡಿಸ್ಪ್ಲೇ 6 ಇಂಚಿನೊಂದಿಗೆ 18:9 ಆಸ್ಪೆಕ್ಟ ರೇಷು ಹೊಂದಿದೆ. ಇದು ಎರಡು ವೇರಿಯೆಂಟ್ಗಳಲ್ಲಿ ಬರುತ್ತದೆ. 32GB 9999 ರೂಗಳಾದರೆ 64GB ಯ ಸ್ಟೋರೇಜ್ 11,999 ರೂಗಳಲ್ಲಿ ಲಭ್ಯವಿದೆ.

ಮೊದಲು ಇದರ ಡಿಸೈನ್ ಬಗ್ಗೆ ಹೇಳಬೇಕಾದರೆ ಇದು ಹಾನರ್ 7A ಯಂತೆ ಕಾಣುತ್ತದೆ ಮತ್ತು ಅದಕ್ಕಿಂತ ಕೊಂಚ ದೊಡ್ಡದಾಗಿದೆ. ಇದರ ಬ್ಯಾಕ್ ಥಿನ್ ಮೆಟಲಿಂದ ಮಾಡಲ್ಪಟ್ಟಿದ್ದು ಕೈಯಲ್ಲಿಡಿಯಲು ಉತ್ತಮವಾದ ಲುಕ್ ಮತ್ತು ಗ್ರಿಪ್ ನೀಡುತ್ತದೆ. ಈ ಫೋನಿನ ಲೆಫ್ಟ್ ಭಾಗದಲ್ಲಿ ನಿಮಗೆ ಸಿಮ್ ಸ್ಲಾಟ್ ಬರುತ್ತದೆ. ಇದರೊಳಗೆ ಡೆಡಿಕೇಟೆಡ್ ಮೈಕ್ರೋ SD ಸ್ಲಾಟ್ ನೀಡಲಾಗಿದೆ. ಅದೇ ರೀತಿಯಲ್ಲಿ ರೈಟ್ ಸೈಡಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕೀಗಳಿವೆ. ಇದರ ಆ ರಚನೆಯಲ್ಲಿ ಯಾವುದೇ ರೀತಿಯ ದೂರುಗಳಿಲ್ಲದೆ ಒಂದಕ್ಕೊಂದು ಅಡಚಣೆ ಆಗುವುದಿಲ್ಲ.

 

ಇದರ ಕೆಳಭಾಗದಲ್ಲಿ ನೋಡಿದರೆ ನಿಮಗೆ 3.5mm ಆಡಿಯೋ ಜಾಕ್ ಮತ್ತು ಮೈಕ್ರೋ USB ಪೋರ್ಟ್ ಮೈಕ್ರೋಫೋನ್ ಮತ್ತು ಸ್ಪೀಕರ್ಗಳಿವೆ. ಇದರಲ್ಲಿನ 8.0 EMUI ಯೂಸರ್ ಇಂಟೆರ್ಫೇಸ್ ಸಾಮಾನ್ಯ ಬಳಕೆಗಾಗಿ ಉತ್ತಮವಾಗಿದೆ. ಈ Honor 7C ನಿಮಗೆ 5.99 ಇಂಚಿನ IPS LCD Full View ಡಿಸ್ಪ್ಲೇಯನ್ನು 1440 X 720 ರೆಸುಲ್ಯೂಷನ್ ಜೋತೆಯಲ್ಲಿ ಬರುತ್ತದೆ. ಇದರ ಬ್ರೈಟ್ನೆಸ್ ಬಗ್ಗೆ ನೀವು ನೋಡುತ್ತಿರುವ ಹಾಗೆ ಇದರಲ್ಲಿ ಅನಗತ್ಯವಾಗಿ ಹೆಚ್ಚಿನ ಬ್ರೈಟ್ನೆಸ್ ನೀಡಲಾಗಿದೆ. ಇದರಲ್ಲಿನ ಬಳಕೆ ಅಂದ್ರೆ ಕ್ರೋಮ್ ಮತ್ತು ಫೇಸ್ಬುಕ್ ಉತ್ತಮವಾಗಿಯೇ ಕಾರ್ಯ ನಿರ್ವಯಿಸುತ್ತವೆ. ಇದರಲ್ಲಿ ಯಾವುದೇ ಸೆಟ್ಟಿಂಗ್ಗಳಿಲ್ಲ ಐಕಾನ್ಗಳನ್ನು ಕಸ್ಟಮ್ ಮಾಡಲು ಆದರೆ ಫಾಂಟ್ ಸೈಜ್ ಕಡಿಮೆಗೊಳಿಸಿಕೊಳ್ಳಬವುದು.

ಇದರಲ್ಲಿನ IPS LCD ಪ್ಯಾನಲ್ ನಿಮಗೆ ಅತ್ಯುತ್ತಮವಾದ ಕಲರ್ ರಿಪ್ರೊಡ್ಯೂಸ್ ಮಾಡುವಲ್ಲಿ ಮುಂದೆ ನುಗ್ಗುತ್ತದೆ. ಇದರ ಬ್ರೌನ್ ಮತ್ತು ರೆಡ್ ಒಳಗಿನ ವಾತಾವರಣದಲ್ಲಿ ಡೆಲಾಗಿ ಕಾಣುತ್ತದೆ. ಇದು ಸೂರ್ಯನ ಬೆಳಕಿನಲ್ಲಿ ನಿಜಕ್ಕೂ ಹೆಚ್ಚು ಬ್ರೈಟಾಗಿದ್ದು ಯಾವುದೇ ಕೊರತೆಯಿಲ್ಲ. ಇದರಲ್ಲಿನ ಆಶ್ಚರ್ಯಕರವೆಂದರೆ ಇದರಲ್ಲಿ ಹಾನರ್ ತಮ್ಮದೇಯಾದ ಕಿರಿನ್ ಚಿಪ್ಸೆಟ್ ನೀಡಿಲ್ಲದೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಚಿಪ್ಸೆಟನ್ನು ಆಕ್ಟಾ ಕೋರ್ ಪ್ರೋಸಸರನ್ನು ಹೊಂದಿದೆ. 

ಈ ಫೋನಿನ ಸ್ಕೂರ್ ನೋಡಬೇಕೆಂದ್ರೆ ಇದು GeekBench Single ಕೋರಲ್ಲಿ 717 ಮಾಡಿದರೆ GeekBench Multi ಕೋರಲ್ಲಿ 3555 ಸ್ಕೋರ್ ಮಾಡಿದೆ. ಇದು ಮೋಟೋ G6 ಫೋನಿಗಿಂತ ಸ್ವಲ್ಪ ಕಮ್ಮಿ ಅಷ್ಟೇ. ಈ ಮೋಟೋ G6 ನಿಮಗೆ 32GB ಸ್ಟೋರೇಜ್ ಇದೇ 450 ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಚಿಪ್ಸೆಟನ್ನು ಹೊಂದಿದೆ. ಈ Honor 7C ನಿಮಗೆ ಆಂಡ್ರಾಯ್ಡ್ ಓರಿಯೋ 8.0 ಇದರ ಪ್ರೊಸೆಸರ್ ಮತ್ತು ಮೆಮೋರಿ ದಿನನಿತ್ಯದ ಬಳಕೆ ಅಂದ್ರೆ ಬ್ರೌಸಿಂಗ್, ಫೋನ್ ಕರೆಗಳು, ಮ್ಯೂಸಿಕ್ ಮತ್ತು ವಿಡಿಯೋ ಪ್ಲೇ ಬ್ಯಾಕಿಗೆ ಸಾಕಾಗುವಷ್ಠಿದೆ. 

ಇದು ನಿಜಕ್ಕೂ ನೆಟ್ ಬ್ರೌಸಿಂಗ್ ಮತ್ತು ಗೇಮಿಂಗಾಗಿ ಉತ್ತಮವಾಗಿದ್ದು ಕ್ರೋಮಲ್ಲಿ ಒಮ್ಮ್ಮೆಲೆ ಸುಮಾರು 14-15 ಟ್ಯಾಬ್ಗಳನ್ನು ಬಳಸಬವುದು. ಇದರಲ್ಲಿ ಯಾವುದೇ ರೀತಿಯ ಸ್ಲೋ ಅಥವಾ ಅಡಚಣೆಯಾಗಲಿಲ್ಲ. ಇದರಲ್ಲಿ 14-15 ಟ್ಯಾಬ್ಗಳನ್ನು ತೆರೆದಿಟ್ಟು ಮತ್ತೋಂದು ಟ್ಯಾಬಲ್ಲಿ ನೀವು ವಿಡಿಯೋ ಸ್ಟ್ರೀಮ್ ಮಾಡಿದರು ನಿಮಗೆ ಯಾವುದೇ ರೀತಿಯ ಸ್ಲೋ ಅಥವಾ ಹ್ಯಾಂಗ್ ಅನುಭವ ನೀಡುವುದಿಲ್ಲ. ಈ ರೇಂಜಲ್ಲಿ ಇದು ನಿಜಕ್ಕೂ ಉತ್ತಮವಾಗಿ ಕಾರ್ಯ ನಿರ್ವಯಿಸುತ್ತದೆ. ಇದು ಈಗಾಗಲೇ ಹೇಳಿದಂತೆ 3GB RAM ಮತ್ತು 32GB ಯ ಸ್ಟೋರೇಜ್ ಮತ್ತು 4GBRAM ಮತ್ತು 64GB ಯ ಸ್ಟೋರೇಜಿನೊಂದಿಗೆ ಬರುತ್ತದೆ. 

ಇದರ ಕ್ಯಾಮೆರಾಗಳ ಬಗ್ಗೆ ಹೇಳಬೇಕಾದ್ರೆ ಇದರ ಬ್ಯಾಕಲ್ಲಿದೆ ಡ್ಯೂಯಲ್ ಕ್ಯಾಮೆರಾ ಸೆಟಪ್ ಅಂದ್ರೆ 13MP + 2MP ಕ್ಯಾಮೆರಾ ಹೊಂದಿದ್ದು ಫ್ರಂಟಲ್ಲಿ ನಿಮಗೆ 8MP F2.0 ಅಪೆರ್ಚರ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. Honor 7C ನಲ್ಲಿ ಬ್ಯಾಕ್ ಮತ್ತು ಫ್ರಂಟಲ್ಲಿ LED ಫ್ಲಾಶ್ ಲೈಟನ್ನು ಹೊಂದಿದೆ. ಫ್ರಂಟ್ ಕ್ಯಾಮೆರಾ ನಿಮಗೆ ಉತ್ತಮವಾದ ಸೆಲ್ಫಿ ಇಮೇಜ್ಗಳನ್ನು ನೀಡುತ್ತದೆ. ನ್ಯಾಚುರಲಿ ಕಲರ್ ಬಳಸಿ ಡಿಸೆಂಟ್ ಕ್ಲಿಕ್ ನೀಡುತ್ತದೆ. ಇದರೊಳಗೆ ಟ್ಯಾಪ್ ಮಾಡಿ ಮುಂದಿರುವ ಯಾವುದೇ ವಸ್ತುವಿನ ಮೇಲೆ ಕ್ಲಾರಿಟಿಯನ್ನು ಪಡೆದುಕೊಳ್ಳಬವುದು.

 

ಇದರೊಳಗೆ ನಾವು ತೆಗೆದ ಇಂಡೋರ್ ಇಮೇಜ್ಗಳಲ್ಲಿ ಅಷ್ಟಾಗಿ ಉತ್ತಮವಾಗಿಲ್ಲವಾದರೂ ಇದರಲ್ಲಿ ಕಾಣುವ ಬ್ರೌನ್ ಮತ್ತು ಬ್ಲೂ ಬಣ್ಣಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇದರಲ್ಲಿ ನಿಮಗೆ 3000mAh ಬ್ಯಾಟರಿ ನಿಮಗೆ ಒಂದೇ ಬಾರಿಯ ಫುಲ್ ಚಾರ್ಜ್ ಲ್ಲಿ ಪೂರ್ತಿ ದಿನ ಕಳೆಯಬವುದು. ಬ್ರೌಸಿಂಗ್, ಗೇಮಿಂಗ್, ಫೋಟೋ ಬಳಸಬವುದು. 17 ರಿಂದ 46% ಕೇವಲ 20 ನಿಮಿಷಗಳಲ್ಲಿ ತುಂಬಿಕೊಳ್ಳುತ್ತದೆ.  ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :