12+5MP ಬ್ಯಾಕ್ ಮತ್ತು 16MP ಫ್ರಂಟ್ ಕ್ಯಾಮೆರಾದೊಂದಿಗೆ 5.99 ಇಂಚಿನ ಡಿಸ್ಪ್ಲೇಯನ್ನು ಹೊಂದಿರುವ Redmi Y2 ಕೇವಲ 9999 ರೂಳಲ್ಲಿ ಲಭ್ಯ

12+5MP ಬ್ಯಾಕ್  ಮತ್ತು 16MP ಫ್ರಂಟ್ ಕ್ಯಾಮೆರಾದೊಂದಿಗೆ 5.99 ಇಂಚಿನ ಡಿಸ್ಪ್ಲೇಯನ್ನು ಹೊಂದಿರುವ Redmi Y2 ಕೇವಲ 9999 ರೂಳಲ್ಲಿ ಲಭ್ಯ
HIGHLIGHTS

Redmi Y2 ನಿಮಗೆ ಮಾರುಕಟ್ಟೆಯಲ್ಲಿ ಕೇವಲ 9999 ರೂಪಾಯಿಗಳಲ್ಲಿ ಅಮೆಝೋನಿನಲ್ಲಿ ಲಭ್ಯವಾಗುತ್ತದೆ.

Xiaomi ಯ ಹೊಚ್ಚ ಹೊಸ Redmi Y2. ಇದು ನಿಮಗೆ ಮಾರುಕಟ್ಟೆಯಲ್ಲಿ ಕೇವಲ 9999 ರೂಪಾಯಿಗಳಲ್ಲಿ ಅಮೆಝೋನಿನಲ್ಲಿ ಲಭ್ಯವಾಗುತ್ತದೆ. ಮೊದಲಿಗೆ ಇದರ ಬಿಲ್ಡ್ ಮತ್ತು ಡಿಸೈನ್ ಬಗ್ಗೆ ಹೇಳಬೇಕೆಂದ್ರೆ ಇದನ್ನು ನೋಡ್ತಾ ಇದ್ದಂತೆ ನೀವು ಹೇಳುವಿರಿ ಇದು Mi ಕಂಪನಿಯ ಫೋನೆಂದು. ನಿಜಕ್ಕೂ ಈ ಫೋನಿನಲ್ಲಿ ಕೆಲ ಹೊಸ ಬದಲಾವಣೆಗಳನ್ನು ಶೋಮಿ ತಂದಿದೆ. ಇದರ ಮೆಟಲ್ ಮತ್ತು ಅಂಟಿನ ಲೈನ್ ಫೋನಿನ ಬಾಡಿ ಮೆಟಲ್ ಮೇಲೆಯೇ ರಚಿತಗೊಂಡಿದೆ. ಇದರ ಡಿಸ್ಪ್ಲೇ ಕೊಂಚ ಬಾಗಿದ್ದು ಎದ್ದು ಕಾಣುವ ಕೋನಗಳನ್ನು ಹೊಂದಿದೆ ಇದನ್ನು ಶೋಮಿ ಉತ್ತಮವಾದ ರಚನೆ ಮತ್ತು ಕೈಯಲ್ಲಿಡಿಯಲು ಹೆಚ್ಚು ಗ್ರಿಪ್ ನೀಡುತ್ತದೆ ಎನ್ನುತ್ತಾರೆ. ಇದಿಷ್ಟೇ ಅಲ್ಲದೆ ಈ Redmi Y2 ತನ್ನದೆಯಾದ ಹೊಸ Redmi Note 5 Pro ನಂತೆ ಕಾಣುತ್ತದೆ. 

ಇದರ ಮುಂದೆ ನೋಡಿದರೆ ನಿಮಗೆ 18:9 ಆಸ್ಪೆಕ್ಟ ರೇಷು ಡಿಸ್ಪ್ಲೇ ಹೊಂದಿದರೆ ಇದರ ಹಿಂಭಾಗ ಫಿಂಗರ್ಪ್ರಿಂಟ್ ಸ್ಕ್ಯಾನರಿನೊಂದಿಗೆ ಲಾಂಭಕಾರದ ಡ್ಯೂಯಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದರ ಮೇಲಿರುವ ಬಾಂಪ್ ಅಷ್ಟಾಗಿ ಕಾಣಿಸೋಲ್ಲವಾದರು  ಇದನ್ನು ಕೆಳಗಿಟ್ಟು ನೋಡಿದರೆ ಇದನ್ನು ನೀವು ಆರಾಮಾಗಿ ನೋಡಬವುದು. ಇದರ ಕೆಳಭಾಗದಲ್ಲಿ ನಿಮಗೆ ಸ್ಪೀಕರ್ಗಳು ಮತ್ತು ಮೈಕ್ರೋ USB ಪೋರ್ಟ್ ಲಭ್ಯವಾಗುತ್ತದೆ. ಇದರ 5.99 ಇಂಚಿನ ಡಿಸ್ಪ್ಲೇ 1440 X 720 ಪಿಕ್ಸೆಲ್ ರೆಸುಲ್ಯೂಷನ್ ನೀಡುತ್ತದೆ.ಇದರಲ್ಲಿನ ವಿಶುಯಲ್ ತುಂಬ ಆಕರ್ಷಣೀಯವಾಗಿದ್ದು ಸಂಪೂರ್ಣವಾದ ಮಾಹಿತಿಯನ್ನು ತೋರುವಲ್ಲಿ ಕೊಂಚ ಕೊರತೆಯನ್ನು ಹೊಂದಿದೆ. ಇದರಲ್ಲಿನ ಬ್ರಿಟ್ನೆಸ್ ನ್ಯಾಚುರಲಾಗಿ ಸಾಕಾಗುವಷ್ಟು ಹೊಂದಿಲ್ಲ.

ಇದರಲ್ಲಿನ MIUI ಬಣ್ಣಗಳನ್ನು ಅಗತ್ಯವಿಲ್ಲದ ಕಡೆ ಹೆಚ್ಚಾಗಿಯೇ ತೋರುತ್ತದೆ ಸೂರ್ಯನ ಬೆಳಕಿನಲ್ಲಿ ಇದರ ಸ್ಕ್ರೀನ್ ಸ್ಪಷ್ಟವಾಗಿ ಕಾಣುವುದಿಲ್ಲ. ಇದರ ಬ್ರೌಸಿಂಗ್ ಬಳಕೆಯಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ನೀವು ಇದರಲ್ಲಿ ನೀವು ಫೋಟೋ ಅಥವಾ ವಿಡಿಯೋ ನೋಡುವಾಗ ಗೇಮಿಂಗ್ ಆಡುವಾಗ ಇದರ Low ರೆಸುಲ್ಯೂಷನ್ ಎದ್ದು ಕಾಣುತ್ತದೆ. ಈ Redmi Y2 ನಿಮಗೆ MIUI ಚಿಪ್ಸೆಟಿನೊಂದಿಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 625 ಹೊಂದಿದೆ. ಇದು ನಿಜಕ್ಕೂ ಹೆಚ್ಚು ಸ್ಮೂತ್ ಮತ್ತು ಸುಲಭವಾದ ಇಂಟರ್ಫೇಸ್ ಹೊಂದಿದೆ. ಇದರಲ್ಲಿ ಯಾವುದೇ ದೂರುಗಳಿಲ್ಲ ಇದರ ಕ್ಯಾಮೆರಾ ಸಹ ಕ್ವಿಕ್ ರೆಸ್ಪೋನ್ಸ್ ನೀಡುತ್ತದೆ. ಇದರ ಕೊರತೆಗಳು ಇದರಲ್ಲಿ ಆಟವಾಡುವಾಗ ಶುರುವಾಗುತ್ತದೆ. ಹೊಸ PubG ಗೇಮ್ಗಳು Low ಗ್ರಾಫಿಕ್ನಲ್ಲಿ ನಡೆಯುತ್ತದೆ. ಮತ್ತು ಫ್ರೇಮ್ ಡ್ರಾಪ್ ಸಹ ಆಗುತ್ತದೆ. ಇದಲ್ಲದೆ ಈ ಗೇಮ್ ಹೆಚ್ಚು ಸಮಯ ಲೋಡ್ ಆಗೋಕೆ ತಗೋಳ್ಳುತ್ತೆ ಇದು ಫಾಸ್ಟ್ ಗೇಮರ್ಗಳಿಗೆ ಕಿರಿ ಉಂಟುಮಾಡುತ್ತದೆ.

ಇದರಲ್ಲಿ ನಿಮಗೆ ಆಂಡ್ರಾಯ್ಡ್ 8.1 ಒರೆಯೋ ಔಟ್ ಆಫ್ ದಿ ಬಾಕ್ಸ್ ಮತ್ತು MIUI 9.5 ಸಂರಚನೆಯಾಗಿದೆ. ಈ MIUI 9.5 ನಿಮಗೆ ಹೊಸ ಹೊಸ ಫೀಚರ್ಗಳನ್ನು ನೀಡುತ್ತದೆ. ಹೊಸ ರೀತಿಯ ನೋಟಿಫಿಕೇಶನ್ ಷೀಟ್, ಆಪ್ ಲಾಕ್, Mi ಡ್ರಾಪ್ ಮುಖ್ಯವಾಗಿ ಇದು ನಿಮಗೆ ಗ್ಯಾಸ್ಟರ್ ಬೇಸ್ ನ್ಯಾವಿಗೇಷನ್ ಇದು ಹೊಸ iPhone 10 ನಂತೆಯೇ ಇದೆ. ನೀವು ಇದರಲ್ಲಿ ಸ್ವಾಪ್ ಅಪ್ ಮಾಡಿದರೆ ಬ್ಯಾಕ್ ಹೋಗಬವುದು, ಸ್ವಾಪ್ ಮಾಡಿ ಕೆಳಭಾಗದಲ್ಲಿ ಇಡಿದಿಟ್ಟುಕೊಂಡರೆ ರೀಸೆಂಟ್ ಮೆನುಗೆ ಹೋಗಬವುದು. ಸ್ವಾಪ್ ಸೈಡ್ ಮಾಡಿದರೆ ಹೋಂಗೆ ಹೋಗಬವುದು. 

ಈಗ ಇದರ ಕ್ಯಾಮೆರಾ ಬಗ್ಗೆ ಮಾತನಾಡೋಣ ಇದರಲ್ಲಿನ 16MP ಫ್ರಂಟ್ ಕ್ಯಾಮೆರಾ ನಿಜಕ್ಕೂ ಅತ್ಯುತ್ತಮವಾದ ಸೆಲ್ಫಿ ಕ್ಯಾಮೆರಾವಾಗಿದ್ದು ಅದ್ಬುತವಾದ ಸೆಲ್ಫಿಗಳನ್ನು ಪಡೆಯಬವುದು. ಇದರಲ್ಲಿನ ಡೈನಾಮಿಕ್ ರೇಂಜ್ ಲುಕ್ ಫೋಟೋ ಜೋತೆಯಲ್ಲಿ ಸುತ್ತಮುತ್ತಲಿನ ಜಾಗದಲ್ಲಿ ಯಾವುದೇ ವೈಟ್ ಬ್ಯಾಲೆನ್ಸ್ ಇಲ್ಲದೆ ಕೇವಲ ಮುಂದಿರುವ ವಸ್ತುವಿನ ಮೇಲೆ ಹೆಚ್ಚಾಗಿ ನೀಡುತ್ತದೆ. ಇದರ ಬ್ಯಾಕ್ನಲ್ಲಿರುವ 12+5MP ನಿಜಕ್ಕೂ ಫ್ರಂಟಲ್ಲಿ ನೀಡಿರುವ 16MP ಕ್ಕಿಂತ ಹೆಚ್ಚು ಚೆನ್ನಾಗಿದೆ. ಇದರಲ್ಲಿ ತೆಗೆದ ಈ ಫೋಟೋ ಬೆಳಕನ್ನು ಉತ್ತಮವಾಗಿ ಸೆರೆಹಿಡಿಯುತ್ತದೆ. 

ನೀವು ಇದರಲ್ಲಿ ಅತ್ಯತ್ತಮವಾದ ಬ್ಯಾಲೆನ್ಸ್ ಡೀಟೇಲ್ಸ್ ಪಡೆಯುವಿರಿ. ಮತ್ತು ಇದು ಮುಂದಿರುವ ಯಾವುದೇ ವಸ್ತುವಿನ ಮೇಲೆ ಕ್ವಿಕ್ ಫೋಕಸ್ ಮಾಡುತ್ತದೆ. ಇದರಲ್ಲಿನ ಡೈನಾಮಿಕ್ ರೇಂಜ್ ನಿಜಕ್ಕೂ ಈ ರೇಂಜ್ ಬೆಲೆಯಲ್ಲಿ ಉತ್ತಮವಾಗಿದೆ. ಇದರಲ್ಲಿನ ವೈಟ್ ಬ್ಯಾಲೆನ್ಸ್ ಮತ್ತು ಇದರ ಶಾರ್ಪ್ ಇಮೇಜ್ ನಿಜಕ್ಕೂ ಹೆಚ್ಚು ಡೀಟೇಲ್ಸ್ ಕವರ್ ಮಾಡುತ್ತದೆ. ಇದರಲ್ಲಿನ ಪ್ರೋಟ್ರೇಟ್ ಮೂಡ್ ಅಷ್ಟಾಗಿ ಬಯಸಲು ಸಾಧ್ಯವಿಲ್ಲವಾದರು ಒಂದು ರೀತಿಯಲ್ಲಿ ಉತ್ತಮವಾಗಿದೆ. 

ಕೊನೆಯಾದಾಗಿ ಇದರಲ್ಲಿನ 3080mAh ಬ್ಯಾಟರಿ ನಿಮಗೆ ಒಮ್ಮೆ ಮಾಡಿದ ಚಾರ್ಜ್ ಪೂರ್ತಿ ದಿನ ಕಳೆಯಬವುದು.ಇದು ಅವ್ರಾಜ್ ಬಳಕೆದಾರರಿಗೆ ಉತ್ತಮವಾಗಿದೆ. ಇದರ ಮತ್ತೋಂದು ಬಲಹೀನತೆ ಎಂದರೆ ಇದು ಯಾವುದೇ ರೀತಿಯ ಫಾಸ್ಟ್ ಚಾರ್ಜರ್ ಹೊಂದಿಲ್ಲದಿರುವುದು. ಅಂದ್ರೆ ಇದನ್ನು ಫುಲ್ ಚಾರ್ಜ್ ಮಾಡೋಕ್ಕೆ ಸುಮಾರು ಒಂದೂವರೆ ಘಂಟೆಗಳ ಕಾಲ ಕಾಯಬೇಕಾಗುತ್ತದೆ. ಇದು ಈ ಹೊಸ Redmi Y2 ಫೋನಿನ ಸಪೂರ್ಣವಾದ ವಿವರಣೆಯಾಗಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo